ಬೆಂಗಳೂರು: ಪ್ರತಿಷ್ಠಿತ ಕಣವಾಗಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿಂದು ಮತದಾನ ಆರಂಭವಾಗಿದೆ. ಬೆಳಿಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಕ್ಷೇತ್ರದಲ್ಲಿ ಒಟ್ಟು 14 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್ ನಿಂದ ಹಾಲಿ ಶಾಸಕ ಮುನಿರತ್ನ, ಜೆಡಿಎಸ್ ನಿಂದ ರಾಮಚಂದ್ರ, ಬಿಜೆಪಿಯಿಂದ ತುಳಸಿ ಮುನಿರಾಜು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿಹುಚ್ಚ ವೆಂಕಟ್ ಸ್ಪರ್ಧೆ ಮಾಡುತ್ತಿದ್ದಾರೆ.
Karnataka: Voting underway for Bengaluru's Rajarajeshwarinagar legislative assembly seat, visuals from polling booth number 124. #RRNagar pic.twitter.com/WLXgdkCkCL
— ANI (@ANI) May 28, 2018
ಕ್ಷೇತ್ರದಲ್ಲಿ ಒಟ್ಟು 4,71,900 ಮತದಾರರಿದ್ದು, ಮತದಾನಕ್ಕಾಗಿ 421 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಅಲ್ಲದೆ ಮತದಾನಕ್ಕೆ ಚುನಾವಣಾ ಆಯೋಗದಿಂದ ಸಕಲ ಸಿದ್ದತೆ ನಡೆದಿದೆ. 186 ಸೂಕ್ಷ್ಮ, 47 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನು ಕ್ಷೇತ್ರದಲ್ಲಿ ಶಾಂತಿಯುತ ಮತದಾನ ಪ್ರಕ್ರಿಯೆಗೆ 2524 ಅಧಿಕಾರಿಗಳ ನಿಯೋಜನೆಮಾಡಲಾಗಿದೆ. ಜೊತೆಗೆ ಫ್ಲೈಯಿಂಗ್, ಸಿಟ್ಟಿಂಗ್, ಮೊಬೈಲ್ ಸ್ಜ್ವಾಡ್ ಕಾರ್ಯೋನ್ಮುಖವಾಗಿ ಹದ್ದಿನ ಕಣ್ಣಿಟ್ಟಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ರಿಂದ ಕಟ್ಟೆಚ್ಚರವಹಿಸಲಾಗಿದೆ. ಡಿಸಿಪಿಗಳಾದ ರವಿ ಚೆನ್ನಣ್ಣನವರ್ ಹಾಗೂ ಚೇತನ್ ರಾಥೋಡ್ ಸಂಪೂರ್ಣ ಭದ್ರತೆ ಉಸ್ತುವಾರಿ ವಹಿಸಿದ್ದಾರೆ.