ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ನವಾಜ್ ಷರೀಫ್ ವಿರುದ್ಧ ಯಾವುದೇ ದ್ವೇಷವನ್ನು ಹೊಂದಿಲ್ಲ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಷರೀಫ್ ಅವರ ಆರೋಗ್ಯವು ರಾಜಕೀಯಕ್ಕಿಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮುಖ್ಯಸ್ಥ ಶೆಹಬಾಜ್ ಷರೀಫ್ ಅವರು ತಮ್ಮ ಸಹೋದರನಿಗೆ ಏನಾದರೂ ಸಂಭವಿಸಿದಲ್ಲಿ ಪ್ರಧಾನ ಮಂತ್ರಿಯನ್ನು ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಖಾನ್ ಅವರ ಹೇಳಿಕೆ ಬಂದಿದೆ. ನವಾಜ್ ಷರೀಫ್ ಅವರನ್ನು ನೋ-ಫ್ಲೈ ಪಟ್ಟಿಯಿಂದ ಪಟ್ಟಿಯಿಂದ ತೆಗೆಯದಿರುವ ಇಮ್ರಾನ್ ಖಾನ್ ಸರ್ಕಾರದ ಕ್ರಮದ ಹಿನ್ನಲೆಯಲ್ಲಿ ಅವರ ಸಹೋದರ ಎಚ್ಚರಿಕೆ ನೀಡಿದ್ದರು ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಶುಕ್ರವಾರ ನಡೆದ ಪಾಕಿಸ್ತಾನ-ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಕೋರ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಖಾನ್, ತಮ್ಮ ಸರ್ಕಾರವು ಮಾನವೀಯ ಆಧಾರದ ಮೇಲೆ ಪ್ರತಿ ವೇದಿಕೆಯಲ್ಲಿ ಷರೀಫ್ ಕುಟುಂಬಕ್ಕೆ ಅನುಕೂಲ ಮಾಡಿಕೊಟ್ಟಿದೆ ಮತ್ತು ಅವರ ಹೆಸರನ್ನು ನಿರ್ಗಮನ ನಿಯಂತ್ರಣ ಪಟ್ಟಿ (ಇಸಿಎಲ್) ತೆಗೆಯಲು ಮಾಡಲು ಕಾನೂನು ಆಯ್ಕೆಯನ್ನು ಸಹ ಹೊಂದಿದೆ ಎಂದು ಹೇಳಿದರು.
ನವಾಜ್ ಷರೀಫ್ ಹೆಸರನ್ನು ಇಸಿಎಲ್ನಿಂದ ತೆಗೆದುಹಾಕಲು ಷರೀಫ್ ಕುಟುಂಬವು ನಷ್ಟ ಪರಿಹಾರ ಬಾಂಡ್ ನೀಡುವ ಬದಲು ನ್ಯಾಯಾಲಯವನ್ನು ಸಂಪರ್ಕಿಸಲು ನಿರ್ಧರಿಸಿದರೆ ಸರ್ಕಾರಕ್ಕೆ ಯಾವುದೇ ಸಮಸ್ಯೆಗಳಿಲ್ಲ ಎಂದು ಅವರು ಹೇಳಿದರು. ಆದರೆ, 69 ವರ್ಷದ ಷರೀಫ್ ಆರೋಗ್ಯದ ಬಗ್ಗೆ ಷರೀಫ್ ಕುಟುಂಬ ರಾಜಕೀಯ ಆಡುತ್ತಿದೆ ಎಂದು ಖಾನ್ ವಿಷಾದಿಸಿದರು.
7 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ನಷ್ಟ ಪರಿಹಾರ ಬಾಂಡ್ ಸಲ್ಲಿಸಿದರೆ ನಾಲ್ಕು ವಾರಗಳವರೆಗೆ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶ ಪ್ರವಾಸಕ್ಕೆ ನವಾಜ್ ಷರೀಫ್ ಅವರಿಗೆ ಒಂದು ಬಾರಿ ಅನುಮತಿ ನೀಡಲು ಆಂತರಿಕ ಸಚಿವಾಲಯ ಬುಧವಾರ ನಿರ್ಧರಿಸಿದೆ.