ನವದೆಹಲಿ: ಹಲವಾರು ದಶಕಗಳಿಂದ ಶತ್ರುಗಳಾಗಿದ್ದ ಅಮೇರಿಕಾ ಮತ್ತು ಉತ್ತರಕೊರಿಯಾ ಮಂಗಳವಾರದಂದು ಈ ವೈರತ್ವಕ್ಕೆ ವಿರಾಮ ಹಾಕಿ ಶಾಂತಿ ಮಾತುಕತೆಗೆ ಮುಂದಾಗಿದ್ದವು.ಈ ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ವೈರತ್ವವನ್ನು ಇದೇ ಮಾದರಿಯಲ್ಲಿಯೇ ಬಗೆ ಹರಿಸಲು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ ಶಬಾಜ್ ಷರೀಫ್ ಅವರು ಕರೆನೀಡಿದ್ದಾರೆ.
If the United States and North Korea can return from the brink of a nuclear flashpoint, there is no reason why Pakistan and India cannot do the same, beginning with a dialogue on Kashmir whose heroic people have resisted and rejected Indian occupation. (2/3)
— Shehbaz Sharif (@CMShehbaz) June 12, 2018
ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಅವರು "ಅಮೇರಿಕಾ ಮತ್ತು ಉತ್ತರ ಕೊರಿಯಾಗಳು ನ್ಯೂಕ್ಲಿಯರ್ ವಿಷಯನ್ನು ಮರೆತು ಜೊತೆಯಾಗಿದ್ದಾರೆ ಯಾಕೆ ಭಾರತ ಮತ್ತು ಪಾಕಿಸ್ತಾನ ಕಾಶ್ಮೀರದ ವಿಚಾರವಾಗಿ ಮಾತುಕತೆ ನಡೆಸಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಮೇರಿಕಾ ಮತ್ತು ಉತ್ತರ ಕೊರಿಯಾದ ಸಂಭಂದವು ಶೀತಲ ಸಮರದ ಅವಧಿಯಿಂದಲೂ ಕೂಡ ನಡೆಯುತ್ತಿತ್ತು ಆದರೆ ಈಗ ಪ್ರಸ್ತುತ ಉಭಯದೇಶಗಳು ಈ ಹಿಂದಿನ ದ್ವೇಷವನ್ನು ಮರೆತು ಮಾತುಕತೆಗೆ ಮುಂದಾಗಿರುವುದು ಈ ಶತಮಾನದ ಅಚ್ಚರಿ ಎಂದು ಹೇಳಬಹುದು. ಆದ್ದರಿಂದ ಹಲವಾರು ದಶಕಗಳಿಂದಲೂ ಕಾಶ್ಮೀರದ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನದ ವಿಚಾರವಾಗಿ ಸಂಭಂದವು ಹದಗೆಟ್ಟಿದೆ ಈ ಹಿನ್ನಲೆಯಲ್ಲಿ ಇದನ್ನು ಸರಿದೂಗಿಸಲು ಕೊರಿಯಾ ಮತ್ತು ಅಮೇರಿಕಾ ಮಾದರಿಯ ಸೂತ್ರವನ್ನು ಅನೂಸರಿಸಬೆಕೆಂದು ಶಬಾಜ್ ಸರಿಫ್ ಅಭಿಪ್ರಾಯಪಟ್ಟಿದ್ದಾರೆ.