New Covid-19 Wave: ಚೀನಾದಲ್ಲಿ ಭಾರಿ ತಲ್ಲಣ ಸೃಷ್ಟಿಸಿದ ಹೊಸ ಕೊರೊನಾ ಅಲೆ, ನಿತ್ಯ 10 ಲಕ್ಷಕ್ಕೂ ಅಧಿಕ ಪ್ರಕರಣಗಳು ಎಂದ ಹೊಸ ವರದಿ

China News: ಏರ್ ಫಿನಿಟಿ ಲಿಮಿಟೆಡ್ ಪ್ರಕಾರ,  ಕೊವಿಡ್ ಪ್ರೋಟೋಕಾಲ್ ಗಳನ್ನು ತೆಗೆದುಹಾಕುವ ಚೀನಾದ ನಿರ್ಧಾರದಿಂದ ಪ್ರಸ್ತುತ ಅಲೆಯ ಪ್ರಕರಣಗಳು ಉಲ್ಬಣಗೊಂಡಿವೆ ಎನ್ನಲಾಗಿದೆ. ಒಮಿಕ್ರಾನ್ ನ ಹೊಸ ಉಪರೂಪಾಂತರಿ ಬಿಎಫ್.7 ಈ ಹೊಸ ಅಲೆಯ ಹೊರಹೊಮ್ಮುವಿಕೆಗೆ ಕಾರಣವಾಗಿದೆ ಎನ್ನಲಾಗಿದೆ.  

Written by - Nitin Tabib | Last Updated : Dec 22, 2022, 07:45 PM IST
  • ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ತನ್ನ ಸಾಮೂಹಿಕ-ಪರೀಕ್ಷಾ ಬೂತ್‌ಗಳನ್ನು ಮುಚ್ಚಿದೆ
  • ಮತ್ತು ಪ್ರತಿ ಸೋಂಕನ್ನು ತನ್ನ ದೈನಂದಿನ ಲೆಕ್ಕಕ್ಕೆ ಸೇರಿಸುವ ಪ್ರಯತ್ನಗಳನ್ನು ಹೆಚ್ಚಿಸಿದೆ.
  • ನಿವಾಸಿಗಳು ಇದೀಗ ಕ್ಷಿಪ್ರ ಪರೀಕ್ಷೆಗಳ ಮೇಲೆ ಅವಲಂಬಿತರಾಗಿದ್ದಾರೆ
New Covid-19 Wave: ಚೀನಾದಲ್ಲಿ ಭಾರಿ ತಲ್ಲಣ ಸೃಷ್ಟಿಸಿದ ಹೊಸ ಕೊರೊನಾ ಅಲೆ, ನಿತ್ಯ 10 ಲಕ್ಷಕ್ಕೂ ಅಧಿಕ ಪ್ರಕರಣಗಳು ಎಂದ ಹೊಸ ವರದಿ title=
New Covid-19 Wave

Covid Outbreak in China: ಚೀನಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊವಿಡ್ ಪ್ರಕರಣಗಳು ಇದೀಗ ಮತ್ತೊಮ್ಮೆ ಇಡೀ ವಿಶ್ವವನ್ನೇ ಚಿಂತೆಗೀಡು ಮಾಡಲಾರಂಭಿಸಿವೆ. ಮಾಧ್ಯಮ ವರದಿಯೊಂದರ ಪ್ರಕಾರ ಚೀನಾ ಪ್ರಸ್ತುತ ವಿಶ್ವದಲ್ಲಿಯೇ ಅತಿ ದೊಡ್ಡ ಕೊವಿಡ್-19 ಪ್ರಕೋಪವನ್ನು ಹತ್ತಿಕ್ಕಲು ಹೆಣಗಾಡುತ್ತಿದೆ ಎಂದು ಹೇಳಿದೆ. ಚೀನಾದಲ್ಲಿ ಪ್ರತಿ 24 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಪ್ರಕರಣಗಳು ಹಾಗೂ 5000 ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಲಂಡನ್ ನಲ್ಲಿರುವ ಒಂದು ಅನಾಲಿಟಿಕ್ಸ್ ಸಂಸ್ಥೆಯೊಂದರ ಹೊಸ ವರದಿಯನ್ನಾಧರಿಸಿ ಬ್ಲೂಮ್ಬರ್ಗ್ ಈ ಮಾಹಿತಿಯನ್ನು ನೀಡಿದೆ.  

ಏರ್ ಫಿನಿಟಿ ಲಿಮಿಟೆಡ್ ಪ್ರಕಾರ,  ಕೊವಿಡ್ ಪ್ರೋಟೋಕಾಲ್ ಗಳನ್ನು ತೆಗೆದುಹಾಕುವ ಚೀನಾದ ನಿರ್ಧಾರದಿಂದ ಪ್ರಸ್ತುತ ಅಲೆಯ ಪ್ರಕರಣಗಳು ಉಲ್ಬಣಗೊಂಡಿವೆ ಎನ್ನಲಾಗಿದೆ. ಒಮಿಕ್ರಾನ್ ನ ಹೊಸ ಉಪರೂಪಾಂತರಿ ಬಿಎಫ್.7 ಈ ಹೊಸ ಅಲೆಯ ಹೊರಹೊಮ್ಮುವಿಕೆಗೆ ಕಾರಣವಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಮುಂದಿನ 1 ತಿಂಗಳಲ್ಲಿ ಈ ದೈನಂದಿನ ಪ್ರಕರಣಗಳ ಸಂಖ್ಯೆ 3.7 ಮಿಲಿಯನ್ ಅಂದರೆ 37 ಲಕ್ಷಕ್ಕೆ ಮತ್ತು ಮಾರ್ಚ್ ಹೊತ್ತಿಗೆ ಇದು 4.2 ಮಿಲಿಯನ್ ಅಂದರೆ 42 ಲಕ್ಷಕ್ಕೆ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಿನ್ಪಿಂಗ್ ಸರ್ಕಾರದ ಈ ನಿರ್ಧಾರವೇ ಕಾರಣ ಎಂದು ಒತ್ತಿ ಹೇಳಿದೆ ಅನಾಲಿಟಿಕ್ ಸಂಸ್ಥೆ
ಇದಕ್ಕಾಗಿ ಏರ್‌ಫಿನಿಟಿ ಲಿಮಿಟೆಡ್ ಚೀನಾದ ಪ್ರಾಂತೀಯ ಡೇಟಾವನ್ನು ಬಳಸಿದೆ ಮತ್ತು ಕ್ಸಿ ಜಿನ್‌ಪಿಂಗ್ ಸರ್ಕಾರದ ನಿರ್ಧಾರವೇ ಇದಕ್ಕೆ ಕಾರಣ ಎಂದು ಒತ್ತಿಹೇಳಿದೆ, ಇದರಲ್ಲಿ ಅದು ತನ್ನ ವಿವಾದಾತ್ಮಕ ಶೂನ್ಯ ಕೋವಿಡ್ ನೀತಿಯನ್ನು ಇದ್ದಕ್ಕಿದ್ದಂತೆ ಕೈಬಿಟ್ಟಿದೆ. ಈ ನಿರ್ಧಾರದ ಬಗ್ಗೆ ಅಮೆರಿಕದ ಎಪಿಡೆಮಿಯಾಲಜಿಸ್ಟ್ ಎರಿಕ್ ಫೀಗೆಲ್-ಡಿಂಗ್, 'ಯಾರಿಗೆ ಸೋಂಕು ತಗುಲಬೇಕು, ಅವರು ಸೋಂಕಿಗೆ ತಗುಲಲಿ... ಸಾಯಬೇಕಾದವರು ಸಾಯಲಿ' ಎಂದು ಹೇಳಿದ್ದರು.

ಡೇಟಾ ರೆಕಾರ್ಡಿಂಗ್ ಮಾನದಂಡವನ್ನು ಚೀನಾ ಬದಲಾಯಿಸಿದೆ
ಚೀನಾ ಗುರುವಾರ ಬೆಳಗ್ಗೆ 3,000 ಕ್ಕಿಂತ ಕಡಿಮೆ ಹೊಸ ಪ್ರಕರಣಗಳು ವರದಿಯಾಗಿವೆ (ವಿದೇಶಿ ಆಗಮನವನ್ನು ಹೊರತುಪಡಿಸಿ) ಎಂದು ಹೇಳಿಕೊಂಡಿತ್ತು. ಕಳೆದ 24 ಗಂಟೆಗಳಲ್ಲಿ ಕೋವಿಡ್ -19 ನಿಂದ ಯಾವುದೇ ಸಾವು ಸಂಭವಿಸಿಲ್ಲ. ಆದಾಗ್ಯೂ, ಈ ಅಂಕಿಅಂಶಗಳು, ಪ್ರಕರಣಗಳು ಮತ್ತು ಸಾವುಗಳನ್ನು ದಾಖಲಿಸುವ ಮಾನದಂಡವನ್ನು ಸರ್ಕಾರವು ಬದಲಾಯಿಸಿದ ನಂತರ (ಅಂದರೆ ಹೆಚ್ಚಿನದನ್ನು ಎಣಿಸಲಾಗುವುದಿಲ್ಲ) ಪ್ರಕಟಗೊಂಡಿವೆ.

ಇದನ್ನೂ ಓದಿ-CoronaVirus: ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇಲ್ಲ, ಸರ್ಕಾರದಲ್ಲಿ ಹಣವಿಲ್ಲ, ಕೊರೊನಾಗೆ ತತ್ತರಿಸಿದ ಚೀನಾ!

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ತನ್ನ ಸಾಮೂಹಿಕ-ಪರೀಕ್ಷಾ ಬೂತ್‌ಗಳನ್ನು ಮುಚ್ಚಿದೆ ಮತ್ತು ಪ್ರತಿ ಸೋಂಕನ್ನು ತನ್ನ ದೈನಂದಿನ ಲೆಕ್ಕಕ್ಕೆ ಸೇರಿಸುವ ಪ್ರಯತ್ನಗಳನ್ನು ಹೆಚ್ಚಿಸಿದೆ. ನಿವಾಸಿಗಳು ಇದೀಗ  ಕ್ಷಿಪ್ರ ಪರೀಕ್ಷೆಗಳ ಮೇಲೆ ಅವಲಂಬಿತರಾಗಿದ್ದಾರೆ, ಅದು ನಂಬಿಕೆಗೆ ಅರ್ಹವಲ್ಲ ಮತ್ತು ಫಲಿತಾಂಶಗಳನ್ನು ವರದಿ ಮಾಡಲು ಯಾವುದೇ ಬಾಧ್ಯತೆಯನ್ನು ಹೊಂದಿಲ್ಲ.

ಇದನ್ನೂ ಓದಿ-Viral Video: ಜಗತ್ತಿಗೆ ಅಚ್ಚರಿ ಹುಟ್ಟಿಸಿದ ಸಮುದ್ರದ 3000 ಮೀಟರ್ ಆಳದಲ್ಲಿನ ಹಳದಿ ಇಟ್ಟಿಗೆ ರಸ್ತೆ...!

ಚೀನಾದ ಆರೋಗ್ಯ ನಿಯಂತ್ರಕವು - ಸದ್ದಿಲ್ಲದೆ - 'COVID-19 ಕಾರಣದಿಂದಾಗಿ ಸಾವು' ಎಂಬುದಕ್ಕೆ ಕಿರಿದಾದ ವ್ಯಾಖ್ಯಾನವನ್ನು ಅಳವಡಿಸಿಕೊಂಡಿದೆ, ಇದರಿಂದಾಗಿ ಸಾವಿನ ಸಂಖ್ಯೆಯನ್ನು ಎಣಿಸಲು ಕಷ್ಟವಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News