ಮಹಾಕುಂಭಮೇಳಕ್ಕೆ ಹೋಗೋಕೆ ಆಗಲ್ವಾ? ಹಾಗಿದ್ರೆ ಮನೆಯಲ್ಲೇ ಈ ರೀತಿ ಪವಿತ್ರ ಸ್ನಾನದ ಪುಣ್ಯ ಪಡೆಯಿರಿ...

ಪ್ರಯಾಗ್ರಾಜ್ ದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗುವ ಆಸೆ ಹೊಂದಿದ್ದೀರಾ. ಭಾಗಿಯಾಗಿ ತ್ರಿವೇಣಿ ಸಂಗಮದ ನೀರಿನಲ್ಲಿ ಪವಿತ್ರ ಸ್ನಾನ ಮಾಡುವ ಆಸೆಯನ್ನು ಹೊಂದಿದ್ದೀರಾ ಆದರೆ ಇದು ನಿಮಗೆ ಸಾಧ್ಯವಿಲ್ಲವಾ, ಈ ಚಿಂತೆಯಲ್ಲಿದ್ದರೆ ನಿಮಗಿದೆ ಇಲ್ಲೊಂದು ಪರಿಹಾರ. ಮನೆಯಲ್ಲಿ ಈ ರೀತಿ ಮಾಡುವ ಮೂಲಕ ಪವಿತ್ರ ಸ್ನಾನದ ಪುಣ್ಯವನ್ನು ನೀವು ಪಡೆದುಕೊಳ್ಳಬಹುದು ಅದು ಹೇಗೆ? 

Written by - Zee Kannada News Desk | Last Updated : Jan 29, 2025, 09:46 AM IST
  • ಪ್ರಯಾಗ್ರಾಜ್ ದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗುವ ಆಸೆ ಹೊಂದಿದ್ದೀರಾ
  • ಈ ಚಿಂತೆಯಲ್ಲಿದ್ದರೆ ನಿಮಗಿದೆ ಇಲ್ಲೊಂದು ಪರಿಹಾರ.
  • ಮನೆಯಲ್ಲಿ ಈ ರೀತಿ ಮಾಡುವ ಮೂಲಕ ಪವಿತ್ರ ಸ್ನಾನದ ಪುಣ್ಯವನ್ನು ನೀವು ಪಡೆದುಕೊಳ್ಳಬಹುದು
ಮಹಾಕುಂಭಮೇಳಕ್ಕೆ ಹೋಗೋಕೆ ಆಗಲ್ವಾ? ಹಾಗಿದ್ರೆ ಮನೆಯಲ್ಲೇ ಈ ರೀತಿ ಪವಿತ್ರ ಸ್ನಾನದ ಪುಣ್ಯ ಪಡೆಯಿರಿ...  title=

ಪ್ರಯಾಗ್ರಾಜ್ ದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗುವ ಆಸೆ ಹೊಂದಿದ್ದೀರಾ. ಭಾಗಿಯಾಗಿ ತ್ರಿವೇಣಿ ಸಂಗಮದ ನೀರಿನಲ್ಲಿ ಪವಿತ್ರ ಸ್ನಾನ ಮಾಡುವ ಆಸೆಯನ್ನು ಹೊಂದಿದ್ದೀರಾ ಆದರೆ ಇದು ನಿಮಗೆ ಸಾಧ್ಯವಿಲ್ಲವಾ, ಈ ಚಿಂತೆಯಲ್ಲಿದ್ದರೆ ನಿಮಗಿದೆ ಇಲ್ಲೊಂದು ಪರಿಹಾರ. ಮನೆಯಲ್ಲಿ ಈ ರೀತಿ ಮಾಡುವ ಮೂಲಕ ಪವಿತ್ರ ಸ್ನಾನದ ಪುಣ್ಯವನ್ನು ನೀವು ಪಡೆದುಕೊಳ್ಳಬಹುದು ಅದು ಹೇಗೆ? 

ಜನವರಿ 13 ರಿಂದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ 2025ರ ಮಹಾ ಕುಂಭಮೇಳದಲ್ಲಿ ದೇಶವಿದೇಶದಿಂದ ಕೋಟ್ಯಂತರ ಜನರು ಭಾಗಿಯಾಗಿದ್ದಾರೆ. ಇಲ್ಲಿಯವರೆಗೂ 10 ಕೋಟಿಗೂ ಅಧಿಕ ಜನ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪಾಪಗಳನ್ನು ಕಳೆದು ಪವಿತ್ರ ಸ್ನಾನ ಮಾಡಿದ್ದಾರೆ. ಜೊತೆಗೆ ಈ ಮಹಾಕುಂಭಮೇಳ ಫೆಬ್ರವರಿ 26ರವರೆಗೂ ನಡೆಯಲಿದ್ದು, ಇನ್ನೂ ಕೋಟ್ಯಂತರ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಈ ಪುಣ್ಯವನ್ನು ನೀವು ಮನೆಯಲ್ಲಿಯೇ ಪಡೆದುಕೊಳ್ಳಲು ಅಥವಾ ನಿಮ್ಮ ಪಾಪವನ್ನು ಕಳೆದುಕೊಳ್ಳಲು ನೀವು ಮಾಡಬೇಕಾಗಿರುವುದು ಇಷ್ಟೇ. ಧರ್ಮ ಗ್ರಂಥಗಳಲ್ಲಿ ಹೇಳುವ ಪ್ರಕಾರ ಸ್ನಾನ ಮಾಡುವಾಗ ಇದನ್ನು ಪಠಿಸುತ್ತ ಮನೆಯಲ್ಲಿ ಸ್ನಾನ ಮಾಡುವುದರಿಂದ ತುಂಬಾ ಸ್ನಾನದ ಫಲವನ್ನು ನೀವು ಪಡೆಯಬಹುದು. ಈ ಸ್ನಾನ ಮಾಡುವಾಗ ಮನಸ್ಸಿನಲ್ಲಿ ಪೂರ್ಣ ನಂಬಿಕೆ ಭಕ್ತಿಯ ಜೊತೆಗೆ ಸ್ನಾನ ಮಾಡುವುದರಿಂದ ನಿಮ್ಮ ಪಾಪ ಕರ್ಮಗಳೆಲ್ಲವೂ ನಿವಾರಣೆ ಆಗುತ್ತದೆ. 

ಗಂಗೆ ಚ ಯಮುನೇ ಚೈವ ಗೋದಾವರಿ ಸರಸ್ವತಿ ।
ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು।।

ಸ್ನಾನ ಮಾಡುವಾಗ ಈ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಸ್ನಾನ ಮಾಡುವಾಗ ಯಾವುದೇ ರೀತಿಯ ಸೋಪು ಮತ್ತು ಶಾಂಪುಗಳನ್ನು ಬಳಸುವ ಅಗತ್ಯವಿಲ್ಲ. ಸ್ನಾನದ ಬಳಿಕ ತುಳಸಿ ಗಿಡಕ್ಕೆ ನೀರು ಹಾಕಿ.. ಜ್ಞಾನದ ಬಳಿಕ ಬಟ್ಟೆ ಆಹಾರ ಯಾವುದಾದರೂ ದಾನ ಮಾಡಿ. ಈರುಳ್ಳಿ ಬೆಳ್ಳುಳ್ಳಿ ಆಹಾರವನ್ನು ತಿನ್ನಬೇಡಿ.. ಯಾರಿಗೂ ಬಯ್ಯಬೇಡಿ ಯಾರ ಬಗೆಯು ಕೆಟ್ಟದಾಗಿಯೂ ಯೋಚನೆ ಮಾಡಬೇಡಿ ಇದರಿಂದ ನೀವು ದೈಹಿಕವಾಗಿಯೂ ಮಾನಸಿಕವಾಗಿಯೂ ಶುದ್ಧವಾಗಿರುತ್ತೀರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News