ಮಶ್ರೂಮ್‌ ಸಸ್ಯಹಾರಿನಾ..? ಅಥವಾ ಮಾಂಸಹಾರಿನಾ..? ಅನೇಕ ವರ್ಷಗಳಿಂದ ಕಾಡ್ತಿದ್ದ ಗೊಂದಲಕ್ಕೆ ಕೊನೆಗೂ ಉತ್ತರ ಕಂಡುಹಿಡಿದ ವಿಜ್ಞಾನಿಗಳು

Mushroom is veg or non veg scientifically: ಅನೇಕ ಸಸ್ಯಾಹಾರಿಗಳು ಮಶ್ರೂಮ್‌ನ್ನು ತಿನ್ನಲು ಇಷ್ಟಪಡುವುದಿಲ್ಲ. ಇದನ್ನು ಮಾಂಸ ಎಂದು ಪರಿಗಣಿಸುತ್ತದೆ. ಆದರೆ ಅನೇಕ ಅಧ್ಯಯನಗಳು ಸಸ್ಯಾಹಾರಿ ಆಹಾರಗಳಲ್ಲಿ ಅಣಬೆ ಕೂಡ ಒಂದು ಹೇಳಿದೆ.

Written by - Bhavishya Shetty | Last Updated : Dec 21, 2024, 07:44 PM IST
    • ಮಶ್ರೂಮ್ ಕರಿಯನ್ನು ಅನೇಕರು ಇಷ್ಟಪಟ್ಟು ತಿನ್ನುತ್ತಾರೆ
    • ಆದರೆ ಮಶ್ರೂಮ್‌ ಸಸ್ಯಹಾರಿಯಾ? ಅಥವಾ ಮಾಂಸಹಾರಿಯಾ?
    • ನಿಜವಾಗಿಯೂ ಮಶ್ರೂಮ್‌ ಯಾವ ಜಾತಿಗೆ ಸೇರಿದ್ದು?
ಮಶ್ರೂಮ್‌ ಸಸ್ಯಹಾರಿನಾ..? ಅಥವಾ ಮಾಂಸಹಾರಿನಾ..? ಅನೇಕ ವರ್ಷಗಳಿಂದ ಕಾಡ್ತಿದ್ದ ಗೊಂದಲಕ್ಕೆ ಕೊನೆಗೂ ಉತ್ತರ ಕಂಡುಹಿಡಿದ ವಿಜ್ಞಾನಿಗಳು title=
Mushroom is veg or non veg scientifically

mushroom is veg or non veg: ಮಶ್ರೂಮ್ ಕರಿಯನ್ನು ಅನೇಕರು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇನ್ನೂ ಕೆಲವರಿಗೆ ಅದನ್ನು ತಿನ್ನಲು ಹಿಂಜರಿಕೆ. ಇದಕ್ಕೆ ಕಾರಣ, ಮಶ್ರೂಮ್‌ ಸಸ್ಯಹಾರಿಯಾ? ಅಥವಾ ಮಾಂಸಹಾರಿಯಾ? ಎಂಬ ಗೊಂದಲ.  

ಇದನ್ನೂ ಓದಿ: ಹೋದ ಮನೆಗೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ, ಗಂಡನಿಗೆ ಅದೃಷ್ಟ ದೇವತೆಯಂತೆ ಈ ರಾಶಿಯ ಹೆಣ್ಣು ಮಕ್ಕಳು!

ಅನೇಕ ಸಸ್ಯಾಹಾರಿಗಳು ಮಶ್ರೂಮ್‌ನ್ನು ತಿನ್ನಲು ಇಷ್ಟಪಡುವುದಿಲ್ಲ. ಇದನ್ನು ಮಾಂಸ ಎಂದು ಪರಿಗಣಿಸುತ್ತದೆ. ಆದರೆ ಅನೇಕ ಅಧ್ಯಯನಗಳು ಸಸ್ಯಾಹಾರಿ ಆಹಾರಗಳಲ್ಲಿ ಅಣಬೆ ಕೂಡ ಒಂದು ಹೇಳಿದೆ. ಇನ್ನು ನಿಜವಾಗಿಯೂ ಮಶ್ರೂಮ್‌ ಯಾವ ಜಾತಿಗೆ ಸೇರಿದ್ದು? ಮಾಂಸಾಹಾರಿನಾ ಅಥವಾ ಸಸ್ಯಾಹಾರಿಯಾ? ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಸಸ್ಯಶಾಸ್ತ್ರದ ಪ್ರಕಾರ ಅಣಬೆಗಳು ಸಸ್ಯ ಜಾತಿಯಲ್ಲ. ಪ್ರಾಣಿ ಜಾತಿಯೂ ಅಲ್ಲ. ಅವು ಶಿಲೀಂಧ್ರಗಳ ವರ್ಗಕ್ಕೆ ಸೇರಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದಕ್ಕೆ ಎಲೆಗಳು, ಬೇರುಗಳು ಅಥವಾ ಬೀಜಗಳಿಲ್ಲ. ಇದು ಬೆಳೆಯಲು ಬೆಳಕು ಕೂಡ ಬೇಕಾಗಿಲ್ಲ. ಇದು ಬದುಕಲು ಹತ್ತಿರದ ಸಾವಯವ ಪದಾರ್ಥಗಳನ್ನು ತಿನ್ನುವ ಮೂಲಕ ಬೆಳೆಯುತ್ತದೆ. ಅದಕ್ಕಾಗಿಯೇ ಅವುಗಳನ್ನು ತರಕಾರಿಗಳ ವರ್ಗಕ್ಕೆ ಸೇರಿಸಲು ಸಾಧ್ಯವಿಲ್ಲ.

ಅನೇಕ ಸಸ್ಯಾಹಾರಿಗಳು ಶಿಲೀಂಧ್ರಗಳು ಸಹ ಸೂಕ್ಷ್ಮಜೀವಿಗಳು ಎಂದು ನಂಬುತ್ತಾರೆ. ಆ ವರ್ಗಕ್ಕೆ ಸೇರಿದ ಅಣಬೆಗಳೂ ಮಾಂಸದ ಅಡಿಯಲ್ಲಿ ಬರುತ್ತವೆ ಎಂಬುದು ಅವರ ವಾದ. ಒಂದು ರೀತಿಯಲ್ಲಿ ಯೋಚಿಸಿದರೆ ಅದು ನಿಜ ಅನ್ನಿಸುತ್ತದೆ. ಆದರೆ ಕೆಲವರ ಅಭಿಪ್ರಾಯದಂತೆ ಇವುಗಳ ಹುಟ್ಟಿಗೆ ಶಿಲೀಂದ್ರಗಳೇ ಕಾರಣವಾದರೂ ಅವು ಬೆಳೆದಾಗ ಛತ್ರಿಯಾಕಾರದ ಗಿಡದಂತಿರುತ್ತವೆ. ಜೀವವಿಲ್ಲದ ಕಾರಣ ಅದು ಮಾಂಸಾಹಾರಿಯಾಗುವುದಿಲ್ಲ. ಆದ್ದರಿಂದ ಸಸ್ಯಾಹಾರಿಗಳು ತಿನ್ನಬಹುದು.

2005 ರಲ್ಲಿ ಇಂಟರ್ನ್ಯಾಷನಲ್ ಸೊಸೈಟಿ ಆಫ್ ಪ್ರೊಟಿಸ್ಟಾಲಜಿಸ್ಟ್‌ಗಳು "ದಿ ಜರ್ನಲ್ ಆಫ್ ಯುಕ್ಯಾರಿಯೋಟಿಕ್ ಮೈಕ್ರೋಬಯಾಲಜಿ" ನಲ್ಲಿ ಲೇಖನವನ್ನು ಬರೆದಿದ್ದರು. ಪ್ರಾಣಿಗಳು ಮತ್ತು ಶಿಲೀಂಧ್ರಗಳನ್ನು ಒಳಗೊಂಡಿರುವ ಒಂದು ವರ್ಗವಿದೆ. ಈ ಗುಂಪನ್ನು Opisthokonts ಎಂದು ಕರೆಯಲಾಗುತ್ತದೆ. ಅಣಬೆಗಳು ಈ ಗುಂಪಿಗೆ ಸೇರಿವೆ. ಇವು ಸೆಲ್ಯುಲಾರ್ ರಚನೆ ಮತ್ತು ಜೀನ್‌ಗಳೆರಡಕ್ಕೂ ಸಂಬಂಧ ಹೊಂದಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಂದರೆ, ಅವರ ಪ್ರಕಾರ, ಅಣಬೆಗಳು ತರಕಾರಿಗಳ ವರ್ಗಕ್ಕೆ ಸೇರಿಲ್ಲ. ಅದಕ್ಕಾಗಿಯೇ ಸಸ್ಯಾಹಾರಿಗಳು ಅಣಬೆಗಳನ್ನು ಸಸ್ಯಾಹಾರಿ ಎಂದು ಸ್ವೀಕರಿಸುವುದಿಲ್ಲ.

ಇದನ್ನೂ ಓದಿ: ಪಿಎಫ್ ಚಂದಾದಾರರಿಗೆ ದೊಡ್ಡ ರಿಲೀಫ್ ! ಎಟಿಎಂ ಬಳಿಕ ಇದೀಗ ಇ ವಾಲೆಟ್ ಮೂಲಕವೂ ಪಿಎಫ್ ಹಣವನ್ನು ಪಡೆಯಬಹುದು!

US ಕೃಷಿ ಇಲಾಖೆಯು, ಇದು ಒದಗಿಸುವ ಪೋಷಕಾಂಶಗಳಿಂದಾಗಿ ಅವುಗಳನ್ನು ತರಕಾರಿ ಎಂದು ಗುರುತಿಸಿದೆ. ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ಸಂಶೋಧಕರ ಪ್ರಕಾರ, ಅಣಬೆಗಳು ಮಾಂಸ ಮತ್ತು ಧಾನ್ಯಗಳಲ್ಲಿ ಕಂಡುಬರುವ ಪೋಷಕಾಂಶಗಳಿಂದ ತುಂಬಿವೆ. ಅದಕ್ಕಾಗಿಯೇ ಎಲ್ಲರೂ ತಿನ್ನುವ ಉದ್ದೇಶದಿಂದ ಅಮೇರಿಕಾದ ಅಧಿಕಾರಿಗಳು ಸಸ್ಯಾಹಾರಿ ಪಟ್ಟಿಗೆ ಸೇರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್
  ಮಾಡಿ

 

Trending News