Instagram Reels ತಯಾರಿಸುವುದು ಇನ್ಮುಂದೆ ಮತ್ತಷ್ಟು ಉತ್ತಮ ಅನುಭವ ನೀಡಲಿದೆ, ಹೊಸ ವೈಶಿಷ್ಯದಿಂದ ನೀವು ಈ ಕೆಲಸ ಮಾಡಬಹುದು

Instagram 1 Minute Music Feature: ಇನ್ಸ್ಟಾಗ್ರಾಮ್ ರೀಲ್ಸ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಿರುವಾಗ ಕಲಾವಿದರಿಗೆ ಮತ್ತು ಅವರ ಸಂಗೀತಕ್ಕೆ ಸಾಕಷ್ಟು ಪ್ರಚಾರ ಸಿಗಲಿದೆ.  

Written by - Nitin Tabib | Last Updated : May 26, 2022, 07:41 PM IST
  • ಇನ್ಸ್ಟಾಗ್ರಾಮ್ ರೀಲ್ಸ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
  • ಹೀಗಿರುವಾಗ ಕಲಾವಿದರಿಗೆ ಮತ್ತು ಅವರ ಸಂಗೀತಕ್ಕೆ ಸಾಕಷ್ಟು ಪ್ರಚಾರ ಸಿಗಲಿದೆ.
  • ತನ್ನ ಬಳಕೆದಾರರಿಗೆ ಅತ್ಯದ್ಭುತ ವೈಶಿಷ್ಟ್ಯ ಬಿಡುಗಡೆ ಮಾಡಿದ ಇನ್ಸ್ಟಾಗ್ರಾಮ್
Instagram Reels ತಯಾರಿಸುವುದು ಇನ್ಮುಂದೆ ಮತ್ತಷ್ಟು ಉತ್ತಮ ಅನುಭವ ನೀಡಲಿದೆ, ಹೊಸ ವೈಶಿಷ್ಯದಿಂದ ನೀವು ಈ ಕೆಲಸ ಮಾಡಬಹುದು title=
Instagram Reels New Feature

Instagram 1 Minute Music Feature: ಮೆಟಾ ಒಡೆತನದ ಫೋಟೋ-ವೀಡಿಯೊ ಶೇರಿಂಗ್ ಆಪ್ ಆಗಿರುವ Instagram ಗುರುವಾರ ತನ್ನ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ಹೊಸ ವೈಶಿಷ್ಟ್ಯ ಅಥವಾ ಮ್ಯೂಸಿಕ್ ಪ್ರಾಪರ್ಟಿಯ ಹೆಸರು '1 ಮಿನಿಟ್ ಮ್ಯೂಸಿಕ್'. ಈ ವೈಶಿಷ್ಟ್ಯವು ಪ್ಲಾಟ್‌ಫಾರ್ಮ್‌ನಲ್ಲಿ ರೀಲ್‌ಗಳು ಮತ್ತು ಕಥೆಗಳಿಗಾಗಿ ಘೋಷಿಸಲಾಗಿದ್ದು, ಸಂಗೀತ ಟ್ರ್ಯಾಕ್‌ಗಳು ಮತ್ತು ವೀಡಿಯೊಗಳಿಗಾಗಿ ಇದನ್ನು ಬಳಸಬಹುದು. ಈ ವೈಶಿಷ್ಟ್ಯವನ್ನು ನೀವು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 
ಸಂಗೀತ ಪಟ್ಟಿಯಲ್ಲಿ 200 ಭಾರತೀಯ ಕಲಾವಿದರು ಶಾಮೀಲಾಗಿದ್ದಾರೆ.

ಈ ಸಂಗೀತ ಪಟ್ಟಿಯಲ್ಲಿ ಭಾರತದ 200 ಕಲಾವಿದರು ಶಾಮೀಲಾಗಿದ್ದಾರೆ. ಹೀಗಿರುವಾಗ ಧ್ವನಿ ಭಾನುಶಾಲಿ, ನೀತಿ ಮೋಹನ್, ಶಾನ್, ಹಿಮಾಂಶಿ ಖುರಾನಾ, ಅನಿರುತ್ ಮತ್ತು ಜಿವಿ ಪ್ರಕಾಶ್ ಕುಮಾರ್ ಅವರಂತಹ ದೊಡ್ಡ ಕಲಾವಿದರ ಸಂಗೀತವು ನಿಮ್ಮ ಇನ್‌ಸ್ಟಾಗ್ರಾಮ್ ಕಂಟೆಂಟ್ ಅನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲಿದೆ. ಕಂಪನಿಯು, 'ಇದು ವೇದಿಕೆಯಲ್ಲಿ 'ಒಂದು ನಿಮಿಷದ ಸಂಗೀತ' ಬಿಡುಗಡೆ ಮಾಡಲು ಇತರ ಕಲಾವಿದರಿಗೆ ಸ್ಫೂರ್ತಿ ನೀಡಲಿದೆ.

Instagram ಪ್ರಕಾರ, ಜಾಗತಿಕ ವೇದಿಕೆಯಲ್ಲಿ ರೀಲ್ಸ್ ಸಾಕಷ್ಟು ಜನಪ್ರೀಯವಾಗುತ್ತಿದೆ, ಇದರಲ್ಲಿ ಕಲಾವಿದರನ್ನು ಮತ್ತು ಸಂಗೀತವನ್ನು ಅತ್ಯಂತ ವ್ಯಾಪಕವಾಗಿ ಸರ್ಚ್ ಮಾಡಲಾಗುತ್ತಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ, ಕಲಾವಿದರು ತಮ್ಮ ಸಂಗೀತವನ್ನು ವೇದಿಕೆಯ ಮೇಲೆ ಮತ್ತು ಇತರ ಜನರೊಂದಿಗೆ ಹೆಚ್ಚಿನ ವೇಗವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಪ್ರವೃತ್ತಿಗೆ ವೇಗ ನೀಡಲು ಮತ್ತು ಕಲಾವಿದರ ಪ್ರತಿಭೆಯನ್ನು ಪ್ರದರ್ಶಿಸಲು, Instagram ತನ್ನ ಪ್ಲಾಟ್‌ಫಾರ್ಮ್‌ನಲ್ಲಿ 1 ನಿಮಿಷದವರೆಗೆ ಸಂಗೀತವನ್ನು ಹಂಚಿಕೊಳ್ಳುವ ಆಯ್ಕೆಯನ್ನು ನೀಡುತ್ತಿದೆ.

ಇದನ್ನೂ ಓದಿ-1000 ರೂ.ಗಿಂತ ಕಡಿಮೆ ಮೌಲ್ಯದ ವಾಟರ್‌ಪ್ರೂಫ್ ಇಯರ್‌ಬಡ್‌.. ನಿಮಿಷದಲ್ಲೇ ಚಾರ್ಜ್ ಆಗುತ್ತೆ!!

ಈ ಕುರಿತು ಮಾತನಾಡಿರುವ META (ಫೇಸ್‌ಬುಕ್ ಇಂಡಿಯಾ) ದ ಕಂಟೆಂಟ್ ಮತ್ತು ಕಮ್ಯುನಿಟಿ ಪಾರ್ಟ್‌ನರ್‌ಶಿಪ್ ನಿರ್ದೇಶಕ ಪರಾಸ್ ಶರ್ಮಾ  'ಇನ್‌ಸ್ಟಾಗ್ರಾಮ್‌ನಲ್ಲಿರುವ ಪ್ರತಿಯೊಬ್ಬ ಬಳಕೆದಾರರು ಇದೀಗ '1 ನಿಮಿಷದ ಸಂಗೀತ' ವೈಶಿಷ್ಟ್ಯಕ್ಕೆ ಪ್ರವೇಶವನ್ನು ಹೊಂದಿರುತ್ತಾರೆ. ಇದರೊಂದಿಗೆ, ಬಳಕೆದಾರರು ವಿಭಿನ್ನ ಟ್ರ್ಯಾಕ್‌ಗಳನ್ನು ಬಳಸಿಕೊಂಡು ತಮ್ಮ ರೀಲ್‌ಗಳನ್ನು ಹೆಚ್ಚು ಆಸಕ್ತಿದಾಯಕವಾಗಿಸಬಹುದು. ಅಷ್ಟೇ ಅಲ್ಲ, ಕಲಾವಿದರಿಗೂ ಕೂಡ ಅವರದೇ ಆದ ಸಂಗೀತದೊಂದಿಗೆ ವೀಡಿಯೊಗಳನ್ನು ತಯಾರಿಸಲು ನಾವು ವೇದಿಕೆಯಲ್ಲಿ ಪ್ರಯತ್ನಿಸುತ್ತೇವೆ' ಎಂದಿದ್ದಾರೆ.

ಇದನ್ನೂ ಓದಿ-Flipkart Electronics Sale: ಕೇವಲ 749 ರೂ.ಗೆ ಖರೀದಿಸಿ Redmi 5G ಸ್ಮಾರ್ಟ್‌ಫೋನ್

ಸಂಗೀತ ವೈಶಿಷ್ಟ್ಯದ ಮೇಲೆ ವೇಗವಾಗಿ ಕಾರ್ಯನಿರ್ವಹಿಸಿದೆ ಇನ್ಸ್ಟಾಗ್ರಾಮ್ 
ಬಳಕೆದಾರರಿಗೆ, ಈ '1 ನಿಮಿಷದ ಸಂಗೀತ' ರೀಲ್‌ಗಳು ಆಡಿಯೊ ಗ್ಯಾಲರಿಯಲ್ಲಿ ಸಿಗಲಿವೆ. ಕಳೆದ ಹಲವಾರು ವರ್ಷಗಳಿಂದ Instagram ತನ್ನ ಸಂಗೀತ ವೈಶಿಷ್ಟದ ಮೇಲೆ ಸಾಕಷ್ಟು ವೇಗವಾಗಿ ಕಾರ್ಯನಿರ್ವಹಿಸಿದೆ. ಇವುಗಳಲ್ಲಿ ಮ್ಯೂಸಿಕ್ ಆಡ್, ಸೇವ್ ಸೌಂಡ್ಸ್, ವಾಯ್ಸ್ ಓವರ್, ಮಿಕ್ಸ್ಡ್ ಆಡಿಯೋ, ಸೂಪರ್ ಬೀಟ್, 2ಡಿ, 3ಡಿ ಲಿರಿಕ್ಸ್, ಆಡಿಯೋ ಬ್ರೌಸರ್ ಆನ್ ಫೀಡ್ ಪೋಸ್ಟ್ ನಂತಹ ಹಲವು ಬದಲಾವಣೆಗಳನ್ನು ನೀವು ಗಮನಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News