Nagabhushana-Amrutha Prem: ಟಗರು ಪಲ್ಯ ಸಿನಿಮಾ ʼಸಂಬಂಧ ಅನ್ನೋದು ದೊಡ್ದು ಕನಾʼ ಎಂಬ ಪ್ರಮೋಷನಲ್ ಹಾಡು ಡಾಲಿ ಪಿಕ್ಚರ್ಸ್ ನಲ್ಲಿ ಅನಾವರಣಗೊಂಡಿದೆ. ಸಂಬಂಧಗಳ ಮೌಲ್ಯ ತಿಳಿಸಿಕೊಡುವ ಹಾಡಿಗೆ ಧನಂಜಯ್ ಸಾಹಿತ್ಯ ಬರೆದಿದ್ದು, ಜೋಗಿ ಪ್ರೇಮ್ ಧ್ವನಿಯಾಗಿದ್ದಾರೆ.
Darshan Name at Home : ನಟ ದರ್ಶನ್ ತೂಗುದೀಪ ಅವರಿಗೆ ಫ್ಯಾನ್ಸ್ ಡಿ ಬಾಸ್ ಎಂದು ಕರೆಯುತ್ತಾರೆ. ಮತ್ತೆ ಕೆಲವು ಆಪ್ತ ಸ್ನೇಹಿತರು ದಚ್ಚು ಎನ್ನುತ್ತಾರೆ. ಕೆಲವು ಗೆಳೆಯರು ದರ್ಶನ್ ಲಂಬು ಎನ್ನುವರು. ಆದರೆ ಅವರನ್ನು ಮನೆಯಲ್ಲಿ ಬೇರೆಯದ್ದೇ ಹೆಸರಿನಿಂದ ಕರೆಯುತ್ತಾರೆ. ತಾಯಿ ಮೀನಾ ಹಾಗೂ ಅವರ ಸಹೋದರಿ ಪ್ರೀತಿಯಿಂದ ಕೂಗುವ ಆ ಹೆಸರು ಏನು ಇಲ್ಲಿದೆ ನೋಡಿ...
ನಟರಾಕ್ಷಸ ಡಾಲಿ ಧನಂಜಯ್ ನಟನೆಯಲ್ಲಿ ಮಾತ್ರವಲ್ಲ, ನಿರ್ಮಾಣದಲ್ಲೂ ಪ್ರಯೋಗಾತ್ಮಕ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶದೊಂದಿಗೆ ಅವರು ‘ಡಾಲಿ ಪಿಕ್ಚರ್ಸ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂರನೇ ಪ್ರಯತ್ನವೇ ‘ಟಗರು ಪಲ್ಯ’. ಸೆಟ್ಟೇರಿದ ದಿನದಿಂದಲೂ ಭಾರೀ ಸದ್ದು ಮಾಡುತ್ತಿರುವ ಟಗರು ಪಲ್ಯ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ.
7 Star Sultan acted in Tagaru Palya: ಯಾವುದೇ ಕಾರಣಕ್ಕೂ 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡಬಾರದು ಎಂಬ ದೊಡ್ಡ ಅಭಿಯಾನವೇ ಶುರುವಾಗಿತ್ತು. ಈ ಬಗ್ಗೆ ಟಗರು ಪಲ್ಯ ಚಿತ್ರತಂಡ ಮಾಲೀಕರಿಗೆ ಕುರುಬಾನಿ ಕೊಡದಂತೆ ಸಲಹೆ ನೀಡಿತ್ತು.
Dhananjay Production Film: : ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ ಸಿನಿಮಾ ಟಗರು ಪಲ್ಯ..ಯೋಗರಾಜ್ ಭಟ್ಟರ ಗರಡಿಯಲ್ಲಿ ಮತ್ತು ಹಲವು ಖ್ಯಾತ ನಿರ್ದೇಶಕರ ಜೊತೆ ನಿರ್ದೇಶನದ ವಿಭಾಗದಲ್ಲಿ ದುಡಿರುವ ಉಮೇಶ್ ಕೆ ಕೃಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
Amrutha Prem : ಡಾಲಿ ಪಿಕ್ಚರ್ಸ್ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಎಂಟ್ರಿ ಕೊಟ್ಟಿದ್ದಾರೆ. ಉಮೇಶ್ ಕೆ ಕೃಪ ನಿರ್ದೇಶನದ ‘ಟಗರು ಪಲ್ಯ’ ಸಿನಿಮಾ ಮೂಲಕ ಕರುನಾಡ ಜನರ ಮುಂದೆ ನಾಯಕ ನಟಿಯಾಗಿ ಅಮೃತ ಪ್ರೇಮ್ ಪರಿಚಿತಗೊಳ್ಳುತ್ತಿದ್ದಾರೆ.
Daali Dhananjay: ಕೆಲದಿನಗಳ ಹಿಂದೆ ಡಾಲಿ ಧನಂಜಯ್ ‘ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ’ ಎಂದು ಹೇಳಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎರ್ರಾಬಿರ್ರಿ ವೈರಲ್ ಆಗಿತ್ತು. ಇದೀಗ ಕೆಲ ನೆಟ್ಟಿಗರು ಡಾಲಿಯ ಈ ಹೇಳಿಕೆಯ ಬಗ್ಗೆ ಚಕಾರ ತೆಗೆದಿದ್ದಾರೆ. ಅಲ್ಲದೇ ‘ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ’ ಎಂದು ಹೇಳಿದ ಅವರೇ ಇದೀಗ ಖ್ಯಾತ ನಟನ ಪುತ್ರಿಗೆ ನಾಯಕ ನಟಿಯಾಗಿ ಅವಕಾಶ ನೀಡಿದ್ದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಗೊಂಬೆಯಂತಿರುವ ಅಮೃತಾ ಪ್ರೇಮ್ ಇದೀಗ ಮೊದಲ ಸಿನಿಮಾದಲ್ಲಿಯೇ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸುವ ಎಲ್ಲ ಲಕ್ಷಣಗಳು ಅವರಲ್ಲಿ ಕಾಣುತ್ತಿವೆ. ನೆನಪಿರಲಿ ಪ್ರೇಮ್ ಅವರ ಮುದ್ದಿನ ಮಗಳು ಅಮೃತಾ. ಒಂದು ಕಾಲದಲ್ಲಿ ಲವ್ಲಿ ಸ್ಟಾರ್ ಆಗಿ ಮಿಂಚಿದವರು ನಟ ಪ್ರೇಮ್. ಇದೀಗ ಸಿಲ್ವರ್ ಸ್ಕ್ರೀನ್ ಮೇಲೆ ಕಮಾಲ್ ಮಾಡಲು ಅವರ ಪುತ್ರಿ ತಯಾರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.