Pinaka: ಕಳೆದವರ್ಷದ ಸೂಪರ್ ಹಿಟ್ ಚಿತ್ರಗಳಲ್ಲೊಂದಾದ " ಕೃಷ್ಣಂ ಪ್ರಣಯ ಸಖಿ" ನಂತರ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಬಹು ನಿರೀಕ್ಷಿತ ಈ ಚಿತ್ರಕ್ಕೆ "ಪಿನಾಕ" ಎಂದು ಹೆಸರಿಡಲಾಗಿದೆ. "ಪಿನಾಕ" ಎಂದರೆ ತ್ರಿಶೂಲ ಎಂದು ಅರ್ಥ. ಈಗಾಗಲೇ ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ 48 ಚಿತ್ರಗಳನ್ನು ನಿರ್ಮಿಸಿರುವ ಟಿ.ಜಿ.ವಿಶ್ವಪ್ರಸಾದ್ ಸಾರಥ್ಯದ ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿರುವ 49 ನೇ ಚಿತ್ರವಿದು. ನೃತ್ಯ ನಿರ್ದೇಶಕನಾಗಿ ಜನಪ್ರಿಯರಾಗಿರುವ ಧನಂಜಯ ಮೊದಲ ಬಾರಿಗೆ "ಪಿನಾಕ" ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
Rage of rudra: ತೆಲುಗು ನಿರ್ಮಾಪಕ ಟಿಜಿ ವಿಶ್ವ ಪ್ರಸಾದ್ ನೇತೃತ್ವದ ಪೀಪಲ್ ಮೀಡಿಯಾ ಫ್ಯಾಕ್ಟರಿ ಇದೀಗ ಸ್ಯಾಂಡಲ್ವುಡ್ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ನಿರ್ಮಾಣ ಮಾಡುತ್ತಿದೆ. ಇದೀಗ ಈ #PMF49ನೇ ಪ್ರಾಜೆಕ್ಟ್ನ "ರೇಜ್ ಆಫ್ ರುದ್ರ" ಪೋಸ್ಟರ್ ಅನಾವರಣಗೊಂಡಿದೆ. ತೆಲುಗಿನಲ್ಲಿ ಈಗಾಗಲೇ ಬ್ಲಾಕ್ಬಸ್ಟರ್ ಹಿಟ್ಗಳನ್ನು ನೀಡಿರುವ ಈ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ, ಈಗ ಈ ಬಹು ನಿರೀಕ್ಷಿತ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲು ಸಜ್ಜಾಗಿದೆ.
Krishnam Pranaya Sakhi Update: ಚಂದನವನದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹುನಿರೀಕ್ಷಿತ ʻಕೃಷ್ಣಂ ಪ್ರಣಯ ಸಖಿʼ ಚಿತ್ರತಂಡ ಯುಗಾದಿ ಹಬ್ಬದಂದು ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಇದರಲ್ಲಿ ನಾಯಕ ನಟನ ಜೊತೆಗೆ ಎಂಟು ಜನ ನಟಿಯರು ಇರುವುದು ವಿಶೇಷವಾಗಿದೆ. ಇನ್ನಷು ಮಾಹಿತಿ ಇಲ್ಲಿದೆ.
ಮತ ಜಾತ್ರೆಯಲ್ಲಿ ಸ್ಟಾರ್ ನಟರ ವೋಟಿಂಗ್. ನಾವು ಮತ ಹಾಕಿದ್ದೇವೆ.. ನೀವೂ ಮತ ಹಾಕಿ, ಹಾಕಿಸಿ. ಯಾರು ಅಭಿವೃದ್ಧಿ ಮಾಡಿದ್ದಾರೆ ಅವರಿಗೆ ಮತ ಹಾಕಿ. ವೋಟಿಂಗ್ ಮಾಡಿ ಎಂದು ನಟ ಗಣೇಶ್ ಮನವಿ.
ಈ ಹಾಡಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ತುಂಬಾ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಲಿರಿಕ್ಸ್ ಕೂಡ ಕೇಳೋಕೆ ತುಂಬಾ ಮಜಾ ಅನಿಸುತ್ತೆ. ಮಹೇಶ್ ಗೌಡ ನಿರ್ದೇಶನ, ವೈ ಎಂ ರಾಮ್ಗೋಪಾಲ್ ನಿರ್ಮಾಣದ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ.
ಕನ್ನಡ ಸಿನಿಮಾಗಳ ಕೆಪಾಸಿಟಿಗೆ ಬಾಲಿವುಡ್ ನಲುಗಿ ಹೋಗುತ್ತಿದೆ. ಸಾಲು ಸಾಲು ಸ್ಯಾಂಡಲ್ವುಡ್ ಸಿನಿಮಾಗಳು ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರುತ್ತಿದ್ದರೆ, ಮತ್ತೊಂದು ಕಡೆ ಬಾಲಿವುಡ್ನ ಸಾಲು ಸಾಲು ಸಿನಿಮಾಗಳು ಫ್ಲಾಪ್ ಲಿಸ್ಟ್ಗೆ ಸೇರುತ್ತಿವೆ. ಇದೀಗ ಮತ್ತೊಂದು ಕನ್ನಡ ಸಿನಿಮಾ ಬಾಲಿವುಡ್ ಸಿನಿಮಾಗಳ ವಿರುದ್ಧ ತೊಡೆ ತಟ್ಟಿ ನಿಲ್ಲಲು ಸಜ್ಜಾಗಿದೆ.
ಅದು 2008. ಆ ವರ್ಷವನ್ನ ಕನ್ನಡ ಸಿನಿಮಾಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಯಾಕಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕೈಚಳಕದಲ್ಲಿ ತೆರೆಕಂಡ ಗಾಳಿಪಟ ಮುಗಿಲೆತ್ತರಕ್ಕೂ ಹಾರಿ ಮಾಡಿದ ಸದ್ದು ಕಣ್ಣ ಮುಂದೆ ಹಾಗೆ ಇದೆ. ಇದೀಗ ಮತ್ತೇ ಗೋಲ್ಡನ್ ಗ್ಯಾಂಗ್ ಸೇರಿಕೊಂಡು ಗಾಳಿಪಟ 2 ಅನ್ನೋ ಅತ್ಯದ್ಭುತ ಸಿನಿಮಾ ರೆಡಿ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್ 12ಕ್ಕೆ ಬೆಳ್ಳಿತೆರೆಯ ಮೇಲೆ ಕಮಾಲ್ ಮಾಡಲು ಸಿದ್ಧವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.