ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹುಟ್ಟುಹಬ್ಬವನ್ನು ಹಲವು ಬಗೆಯಲ್ಲಿ ಆಚರಿಸಿಕೊಳ್ಳುವುದುಂಟು, ಅದಕ್ಕಾಗಿಯೇ ಸಾವಿರಾರು ರೂಗಳನ್ನು ವ್ಯಯ ಮಾಡಿರುವುದನ್ನು ನಾವು ಪ್ರತಿದಿನ ನೋಡಿರುತ್ತೇವೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಗರ್ ಹುಕುಂ ಸಾಗುವಳಿದಾರರು ಗದಗನಲ್ಲಿ ಬೃಹತ್ ಪಾದಯಾತ್ರೆ ಮಾಡಿದ್ರು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಳಿಯ ಕಪ್ಪತಗುಡ್ಡ ಕ್ರಾಸ್ನಿಂದ ಶಿರಹಟ್ಟಿ ತಹಶೀಲ್ದಾರ್ ಕಚೇರಿವರೆಗೆ ನೂರಾರು ಸಾಗುವಳಿದಾರರು ಪಾದಯಾತ್ರೆ ಮಾಡಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ದೋರಣೆ ವಿರುದ್ಧ ಕಿಡಿಕಾರಿದ್ರು.
ರಾಜ್ಯದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮ ಬಯಲಾಗಿದೆ.. ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಯಲ್ಲಿ ಅಕ್ರಮ ನಡೆದಿದೆ.. ಗದಗದ ಮುನ್ಸಿಪಲ್ ಕಾಲೇಜ್ನಲ್ಲಿ ಪರೀಕ್ಷಾ ಪತ್ರಿಕೆ ಲೀಕ್ ಆಗಿದೆ. ಕಾಲೇಜ್ನಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ತಂದೆ-ಮಗನ ಕರಾಮತ್ತು ಬಯಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನಗಲಿ ವರ್ಷ ಕಳೆದರೂ ಅವರ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ.ಇಂದಿಗೂ ಸಾವಿರಾರು ಅಭಿಮಾನಿಗಳು ದಿನನಿತ್ಯ ಅವರನ್ನ ಸ್ಮರಿಸ್ತಾರೆ. ಗುಣಗಾಣ ಮಾಡ್ತಾರೆ.
ಇಂದು ರಾಜ್ಯದ ಹಲವು ಕಡೆ ಭಾರಿ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲ್ಬರ್ಗಿ ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಗೊಬ್ಬರದ ಕೃತಕ ಅಭಾವಸೃಷ್ಟಿಯಾಗಿ ಗೊಬ್ಬರಕ್ಕಾಗಿ ರೈತರು ಪರದಾಡ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ನಕಲಿ ಗೊಬ್ಬರ ಮಾರಿ ರೈತರಿಗೆ ಮೋಸ ಮಾಡ್ತಿರೋದು ಬೆಳಕಿಗೆ ಬಂದಿದೆ.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಇದೀಗ ಮತ್ತೊಂದು ಬಿಸಿ ಶುರುವಾಗಲಿದೆ. ಪಾಲಿಕೆಯಿಂದ ಪಾರ್ಕಿಂಗ್ ಶುಲ್ಕದ ಬರೆ ಎಳೆಯಲು ಮಂದಾಗಿದ್ದು, ನಗರದೆಲ್ಲೆಡೆ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.
ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಮುಂಡರಗಿ ತಾಲೂಕಿನ ಹಾರೂಗೇರಿ ಗ್ರಾಮದ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಜನ ಆತಂಕಗೊಂಡಿದ್ದಾರೆ. ಜಮೀನಿಗೆ ಹೊರಟಿದ್ದ ರೈತರು ಚಿರತೆ ನೋಡಿದ್ದು ಆತಂಕಗೊಂಡಿದ್ದಾರೆ. ಚಿರತೆ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಚಲಿಸುತ್ತಿದ್ದ ರೈಲು ಹತ್ತುವ ವೇಳೆ ಆಯ ತಪ್ಪಿ ರೈಲಿನಡಿ ಸಿಲುಕಿದ ಮಹಿಳೆಯನ್ನು ಸ್ಥಳದಲ್ಲಿದ್ದ ರೈಲ್ವೇ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಗದಗ ರೈಲ್ವೇ ಜಂಕ್ಷನ್ನಲ್ಲಿ ಘಟನೆ ನಡೆದಿದ್ದು, ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಿಸಿ ಪಾಟೀಲ್ ಕಚೇರಿ ಎದುರು ಶ್ರೀರಾಮ ಸೇನೆ ಸಂಘಟನೆ ಪ್ರತಿಭಟನೆಗೆ ನಿರ್ಧರಿಸಿದ್ದರು. ಆದ್ರೆ ಪೊಲೀಸ್ ಇಲಾಖೆ ಅವಕಾಶ ಕೊಡದಿದ್ದಕ್ಕೆ ಎಸಿ ಕಚೇರಿ ಎದುರು ಭಜನೆ ಭಕ್ತಿಗೀತೆ ಹಾಡುವುದರ ಮೂಲಕ ಪ್ರತಿಭಟನೆ ನಡೆಸಿ ಸಚಿವ ಸಿಸಿ ಪಾಟೀಲ್ ಮತ್ತು ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಿ ಮಸೀದಿಗಳಲ್ಲಿನ ಮೈಕ್ಗಳನ್ನ ತೆರುವುಗೊಳಿಸುವಂತೆ ಒತ್ತಾಯಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.