ನವಜಾತ ಮಗುವನ್ನು ಕೈಚೀಲದಲ್ಲಿ ಬಿಟ್ಟು ಹೋದ ಘಟನೆ ಚಿಕ್ಕೋಡಿಯ ನಿಪ್ಪಾಣಿ ಹೊರವಲಯದಲ್ಲಿ ನಡೆದಿದೆ.. ನಗರದ KLE ಸ್ಕೂಲ್ ಬಳಿ 2 ದಿನದ ಗಂಡು ಮಗು ಪತ್ತೆಯಾಗಿದೆ. ಮಗುವನ್ನು ರಕ್ಷಿಸಿ ನಿಪ್ಪಾಣಿ ಸಮುದಾಯದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ ಗ್ರಾಮದ ರುದ್ರ ಭೂಮಿಗೆ ಗ್ರಾಮದ ಯಕ್ಸಂಬಿ ಕುಟುಂಬಸ್ಥರು ಸ್ಮಶಾನ ಭೂಮಿಯ ದಾರಿಯನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ ಸ್ಮಶಾನಕ್ಕೆ ಹೋಗಲು ತೊಂದರೆ ಆಗುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಚಿಕ್ಕೋಡಿ-ಯಕ್ಸಂಬಾ ರಸ್ತೆ ಮಧ್ಯದಲ್ಲಿ ಶವ ಇಟ್ಟು ಬಜನಾ ಪದಗಳನ್ನು ಹಾಡುತ್ತಾ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಆ ಜನ ಕೃಷ್ಣಾ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿದ್ದರು. ಸರ್ಕಾರ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿತ್ತು ಆದ್ರೆ ಮೂಲಭೂತ ಸೌಕರ್ಯ ಮಾತ್ರ ನೀಡಲಿಲ್ಲ ಕಳೆದ 15 ವರ್ಷಗಳಿಂದಲು ಕತ್ತಲಲ್ಲೆ ಆ ಜನ ಜೀವನ ನಡೆಸ್ತಾ ಇದಾರೆ.. ಜನ ಪ್ರತಿನಿಧಿಗಳು ಅಧಿಕಾರಿಗಳು ಕಂಡು ಕಾನದಂತೆ ಸುಮ್ಮನಿದ್ದಾರೆ.
ಅಥಣಿ ತಾಲೂಕಿನಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಯಲ್ಲಮ್ಮವಾಡಿ ಕೆರೆ ತುಂಬಿ ದೇವಸ್ಥಾನ ಮುಂಭಾಗದ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ದೇವಸ್ಥಾನ ಸುತ್ತಲೂ ನೀರು ಆವರಿಸಿದೆ. ನವರಾತ್ರಿ ಹಬ್ಬದ ಪ್ರಯುಕ್ತ ದಿನನಿತ್ಯ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಸದ್ಯ ದೇವಸ್ಥಾನ ಜಲ ದಿಗ್ಬಂಧನಗೊಂಡ ಹಿನ್ನೆಲೆ ಭಕ್ತರು ಹಳ್ಳ ದಾಟಿಕೊಂಡು ದೇವರ ದರ್ಶನವನ್ನು ಪಡೆಯುತ್ತಿದ್ದಾರೆ.
ಬೆಳಗಾವಿ ವಿಭಜನೆ ಕೂಗು ಮತ್ತೆ ಕೇಳಿ ಬಂದಿದೆ.. ಚಿಕ್ಕೋಡಿ-ಅಥಣಿ ನೂತನ ಜಿಲ್ಲಾ ರಚನೆಗೆ ಆಗ್ರಹ ಹೆಚ್ಚಿದೆ. ಜಿಲ್ಲಾ ಕೇಂದ್ರಕ್ಕೆ ಹೋಗುವುದು ಅಂದ್ರೆ ಜನ ಸಾಮಾನ್ಯರಿಗೆ ತೀವ್ರ ಸಂಕಷ್ಟ. ಹೀಗಾಗಿ ಚಿಕ್ಕೋಡಿ ಜೊತೆಗೆ ಅಥಣಿ ಜಿಲ್ಲಾ ರಚನೆಗೆ ಆಗ್ರಹ ವ್ಯಕ್ತವಾಗಿದೆ.
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಚಿಕ್ಕೋಡಿ ಉಪವಿಭಾಗದ ಅಥಣಿಯಲ್ಲಿ 1 ವರ್ಷದಲ್ಲಿ 2 ಬಾರಿ ರಸ್ತೆ ನಿರ್ಮಾಣ ಮಾಡಲಾಗಿದೆ.. ಆದ್ರೆ ಎರಡು ಬಾರಿಯೂ ಕಳಪೆ ಕಾಮಗಾರಿ ನಡೆದಿದೆ. ರಸ್ತೆ ನಿರ್ಮಾಣದಲ್ಲಿ ಭಾರೀ ಗೋಲ್ಮಾಲ್ ಆರೋಪ ಕೇಳಿ ಬಂದಿದೆ.
ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಬಿಟ್ಟು ಬಿಡದೆ ಮಳೆ ಅಬ್ಬರಿಸುತ್ತಿದೆ. ಪರಿಣಾಮ ರಾಜ್ಯದ ವೇದಗಂಗಾ-ದೂದ್ ಗಂಗಾ ನದಿಗೆ ನೀರಿನ ಒಳಹರಿವು ಹೆಚ್ಚಳವಾಗಿದಚೆ. ಚಿಕ್ಕೋಡಿಯ ಎಂಟು ಸೇತುವೆಗಳು ಸಂಪೂರ್ಣ ಜಲಾವೃತವಾಗಿವೆ. ನದಿಗಳಿಂದ ಕೃಷಿ ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ಅಪಾರ ಹಾನಿ ಸಂಭವಿಸಿದೆ. ಗ್ರಾಮಸ್ಥರು ಕೂಡ ಪರದಾಡುವಂತಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಉರುಳಿದ ಘಟನೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ದಾನವಾಡ ಬಳಿ ನಡೆದಿದೆ. ಸ್ಥಳದಲ್ಲಿದ ಜನ ಕಾರು ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಹಗ್ಗದ ಸಹಾಯದಿಂದ ಕಾರನ್ನು ಮೇಲಕ್ಕೆತ್ತಲಾಗಿದೆ. ಚಿಕ್ಕೋಡಿಯ ಧೂದಗಂಗಾ ನದಿಯ ದಾನವಾಡ_ ದತ್ತವಾಡ ಸೇತುವೆ ಬಳಿ ಈ ಘಟನೆ ನಡೆದಿದೆ.
ಚಿಕ್ಕೋಡಿಯಲ್ಲಿ ಗಾಳಿಮಳೆಗೆ ಹಾರಿ ಹೋದ ಶಾಲೆಯ ಮೇಲ್ಚಾವಣಿ
ಚಿಕ್ಕೋಡಿ ಉಪವಿಭಾಗದಲ್ಲಿ ತಡರಾತ್ರಿ ಮಳೆರಾಯನ ಅವಾಂತರ
ಅಥಣಿ ತಾಲೂಕಿನ ಅನಂತಪುರದ ಶಾಲೆ ಮೇಲ್ಚಾವಣಿ ಗಾಳಿಪಾಲು
ಶಾಲೆಯ ಮೇಲ್ಚಾವಣಿ ಬಿದ್ದು ರಸ್ತೆಯಲ್ಲಿದ್ದ ನಾಲ್ಕು ಬೈಕ್ಗಳು ಜಖಂ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಈ ಜಾತ್ರೆ ಪ್ರತೀ ವರ್ಷ ನಡೆಯುತ್ತೆ. ಪ್ರತೀ ವರ್ಷ ಬುದ್ದ ಪೌರ್ಣಿಮೆಯಂದು ಗ್ರಾಮದಲ್ಲಿ ಜಾತ್ರೆ ಆಚರಿಸಲಾಗುತ್ತದೆ. ಮಹಾತಪಸ್ವಿ ತ್ರಿಕಾಲ ಜ್ಞಾನಿಗಳಾದ ಅಪ್ಪಯ್ಯ ಹಾಗೂ ಚಂದ್ರಯ್ಯ ಸ್ವಾಮೀಜಿಗಳ ಜಾತ್ರಾ ಮಹೋತ್ಸವ ಅತೀ ವಿಜೃಂಭಣೆಯಿಂದ ಜರುಗುತ್ತದೆ. ಮೂರು ದಿನಗಳ ಕಾಲ ನಡೆಯುವ ಅದ್ದೂರಿ ಜಾತ್ರೆಗೆ ರಾಜ್ಯವಲ್ಲದೆ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಹಿಂದೂಗಳು ಮುಸ್ಲಿಂ ಹಬ್ಬಗಳಲ್ಲಿ ಭಾಗವಹಿಸದಂತೆ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಧರ್ಮ ಸಂಘರ್ಷ ತಾರಕಕ್ಕೇರಿದೆ. ಈ ಮಧ್ಯೆ ಈ ಹೇಳಿಕೆ ನೀಡಿರುವುದು ಮತ್ತೊಂದು ಧರ್ಮ ದಂಗಲ್ಗೆ ಕಾರಣವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.