ದುಬೈ: Zomato Viral Tweet - ಇಂದು (ಭಾನುವಾರ) ಟಿ 20 ವಿಶ್ವಕಪ್ 2021 ನಲ್ಲಿ (T20 World Cup 2021) ಭಾರತ-ಪಾಕಿಸ್ತಾನ (India Vs Pakistan) ಪಂದ್ಯವು ದುಬೈ (Dubai), ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ನಡೆಯಲಿದೆ. ಈ ಮಹಾಸಮರಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7: 30 ಕ್ಕೆ ಆರಂಭವಾಗಲಿದೆ. ಏತನ್ಮಧ್ಯೆ, ಫುಡ್ ಡೆಲಿವರಿ ಆಪ್ ಝೊಮಾಟೊ (Zomato)ಕೂಡ ಪಂದ್ಯಕ್ಕೂ ಮುನ್ನವೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಕಾಲೆಳೆದಿದೆ. ಇದುವರೆಗೆ ಪಾಕಿಸ್ತಾನ ಭಾರತದ ವಿರುದ್ಧ ವಿಶ್ವಕಪ್ ನಲ್ಲಿ ಒಂದೂ ಪಂದ್ಯವನ್ನು ಗೆದ್ದಿಲ್ಲ. ಪ್ರತಿ ಬಾರಿಯೂ ಕೂಡ ಮುಗ್ಗರಿಸಿ ಬಿದ್ದಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಟ್ವೀಟ್ ನಲ್ಲಿ Zomato ಹೇಳಿದ್ದೇನು?
Zomato ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಮಾಡಲಾಗಿರುವ ಟ್ವೀಟ್ ನಲ್ಲಿ ' ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಒಂದು ವೇಳೆ ಇಂದು ರಾತ್ರಿ ಪಿಜ್ಜಾ ಅಥವಾ ಬರ್ಗರ್ ತಿನ್ನಲು ಬಯಸುತ್ತಿದ್ದರೆ, ನಾವು ಅವರಿಂದ ಕೇವಲ ಒಂದು ಡಿಎಂ ದೂರ ಇದ್ದೇವೆ' ಎನ್ನಲಾಗಿದೆ.
Dear @TheRealPCB, in case you’re looking for 𝐛𝐮𝐫𝐠𝐞𝐫 or 𝐩𝐢𝐳𝐳𝐞 tonight, we’re just a DM away 😉
— zomato (@zomato) October 23, 2021
ವೈರಲ್ ವಿಡಿಯೋದಲ್ಲಿ ಪಾಕ್ ಅಭಿಮಾನಿ ಹೇಳಿದ್ದೇನು?
2019 ರ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡವು 50-50 ಫಾರ್ಮ್ಯಾಟ್ ನಲ್ಲಿ ಭಾರತದ ವಿರುದ್ಧ ಸೋತಾಗ, ಪಾಕಿಸ್ತಾನದ ಅಭಿಮಾನಿಯೊಬ್ಬನ ವಿಡಿಯೋ ಭಾರಿ ವೈರಲ್ ಆಗಿತ್ತು. ಇದರಲ್ಲಿ ಅವರು, 'ಹಲವು ಸಮಸ್ಯೆಗಳಿರುವ ದೇಶದಲ್ಲಿ, ಆರ್ಥಿಕತೆಯು ಸಂಕಷ್ಟದಲ್ಲಿದೆ, ಜನರಿಗೆ ಆಹಾರ ಮತ್ತು ನೀರಿನ ಸಮಸ್ಯೆ ಇದೆ, ಅಂತಹ ದೇಶದಲ್ಲಿನ ಕ್ರಿಕೆಟ್ ಅಲ್ಲ ಸಣ್ಣ ಸಣ್ಣ ಸಂಗತಿಗಳು ಖುಷಿ ನೀಡುತ್ತವೆ. ಇಂದು ಅವರು ಈ ಕ್ರಿಕೆಟ್ ಖುಷಿ ಪಡೆದಿದ್ದಾರೆ. ನನಗೆ ಗೊತ್ತಾಗಿರುವ ಮತ್ತು ಆಣೆ ಮಾಡಿ ಹೇಳುವ ವಿಷಯವೆಂದರೆ , ನಿನ್ನೆ ರಾತ್ರಿ ಈ ಜನರು ಬರ್ಗರ್ ತಿನ್ನುತ್ತಿದ್ದರು, ನಿನ್ನೆ ರಾತ್ರಿ ಇವರು ಪಿಜ್ಜಾ ತಿನ್ನುತ್ತಿದ್ದರು. ಇವರಿಂದ ಕ್ರಿಕೆಟ್ ಬಿಡಿಸಿ ಕುಸ್ತಿ ಆಡಿಸಬೇಕು' ಎಂದು ಬರೆದುಕೊಂಡಿದ್ದ.
Burger khate rahe pizza khate rahe 😂😂😂 pic.twitter.com/1OABYgFVND
— ENGG.ABDUL KHADAR 🇮🇳🇶🇦 (@abdulkhadarhj) October 23, 2021
ಇದನ್ನೂ ಓದಿ-ಭಾರತ ಮತ್ತು ಪಾಕಿಸ್ತಾನ ಪಂದ್ಯದ ಹಿನ್ನೆಲೆ ಗ್ರಾಹಕರಿಗೆ ಭಾರಿ ಡಿಸ್ಕೌಂಟ್ ಘೋಷಿಸಿದ ಹೋಟೆಲ್ ಗಳು
ಪಾಕ್ ಕ್ರಿಕೆಟ್ ಅಭಿಮಾನಿಯ ಇದೆ ಪಿಜ್ಜಾ-ಬರ್ಗರ್ ವಿಷಯಕ್ಕೆ ಸಂಬಂಧಿಸಿದಂತೆ Zomato, ಪಾಕ್ ಕ್ರಿಕೆಟ್ ಮಂಡಳಿಯ ಕಾಲೆಳೆದಿದೆ. ಇನ್ನೊಂದೆಡೆ ಟ್ವಿಟ್ಟರ್ ಬಳಕೆದಾರರೂ ಕೂಡ Zomato ಟ್ವೀಟ್ ಗೆ ಸ್ವಾರಸ್ಯಕರ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದನ್ನೂ ಓದಿ-Team Babar ವಿರುದ್ಧ Virat ಸಮರ, ಪಂದ್ಯದ ಮೇಲೆ ವಿಶ್ವದ ಕಣ್ಣು, ಯಾರ ವರಸೆ ಯಾರ ಮೇಲೆ?
ಓರ್ವ ಟ್ವಿಟ್ಟರ್ ಬಳಕೆದಾರ ಪಾಕ್ ಅಭಿಮಾನಿಯ ವಿಡಿಯೋ ಅನ್ನು Zomato ಟ್ವೀಟ್ ನ ಕಾಮೆಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಬರ್ಗರ್-ಪಿಜ್ಜಾ ತಿನ್ನುತ್ತಿರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ-T20 World Cup, Ind vs Pak: ಪಾಕ್ ವಿರುದ್ಧ ಜೈತ್ರಯಾತ್ರೆ ಮುಂದುವರೆಸುವುದೇ ಭಾರತ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.