Suryakumar Yadav: ಶತಕದ ಜೊತೆ 3 ವಿಶ್ವದಾಖಲೆ ಬರೆದ ‘ಮಿ.360’: ಈ ಸಾಧನೆ ಮಾಡಿದ ಜಗತ್ತಿನ ಮೊದಲ ಬ್ಯಾಟ್ಸ್ ಮನ್ ‘SKY’

Suryakumar Yadav World Record: ಶ್ರೀಲಂಕಾ ವಿರುದ್ಧ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇಶಾನ್ ಕಿಶನ್ ಬೇಗನೇ ಔಟಾಗಿ ಪೆವಿಲಿಯನ್ ಗೆ ಮರಳಿದರು. ಈ ಬಳಿಕ ವೇಗದ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ 9 ಸುದೀರ್ಘ ಸಿಕ್ಸರ್ ಒಳಗೊಂಡ 112 ರನ್ ಗಳಿಸಿದರು. ಇವರ ಬ್ಯಾಟಿಂಗ್ ನೋಡಿ ಎದುರಾಳಿ ಬೌಲರ್ ಗಳು ಶಾಕ್ ಆಗಿದ್ದಂತು ಸುಳ್ಳಲ್ಲ.

Written by - Bhavishya Shetty | Last Updated : Jan 8, 2023, 07:56 AM IST
    • ಭಾರತದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್
    • ಸೂರ್ಯಕುಮಾರ್ ಯಾದವ್ ತಮ್ಮ ಹೆಸರಿನಲ್ಲಿ 3 ದೊಡ್ಡ ದಾಖಲೆಗಳನ್ನು ದಾಖಲಿಸಿದ್ದಾರೆ
    • ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ 9 ಸುದೀರ್ಘ ಸಿಕ್ಸರ್ ಒಳಗೊಂಡ 112 ರನ್ ಗಳಿಸಿದರು
Suryakumar Yadav: ಶತಕದ ಜೊತೆ 3 ವಿಶ್ವದಾಖಲೆ ಬರೆದ ‘ಮಿ.360’: ಈ ಸಾಧನೆ ಮಾಡಿದ ಜಗತ್ತಿನ ಮೊದಲ ಬ್ಯಾಟ್ಸ್ ಮನ್ ‘SKY’  title=
Suryakumar Yadav

Suryakumar Yadav World Record: ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು 91 ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಭಾರತದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಅಷ್ಟೇ ಅಲ್ಲದೆ, ಇವರಿಂದಾಗಿಯೇ ಟೀಂ ಇಂಡಿಯಾ ಎರಡನೇ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು. ಶ್ರೀಲಂಕಾ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡಿದ ನಂತರ ಸೂರ್ಯಕುಮಾರ್ ಯಾದವ್ ತಮ್ಮ ಹೆಸರಿನಲ್ಲಿ 3 ದೊಡ್ಡ ದಾಖಲೆಗಳನ್ನು ದಾಖಲಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಇಶಾನ್ ಕಿಶನ್ ಬೇಗನೇ ಔಟಾಗಿ ಪೆವಿಲಿಯನ್ ಗೆ ಮರಳಿದರು. ಈ ಬಳಿಕ ವೇಗದ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ 9 ಸುದೀರ್ಘ ಸಿಕ್ಸರ್ ಒಳಗೊಂಡ 112 ರನ್ ಗಳಿಸಿದರು. ಇವರ ಬ್ಯಾಟಿಂಗ್ ನೋಡಿ ಎದುರಾಳಿ ಬೌಲರ್ ಗಳು ಶಾಕ್ ಆಗಿದ್ದಂತು ಸುಳ್ಳಲ್ಲ.

ಇದನ್ನೂ ಓದಿ: IND vs SL : ಸೂರ್ಯಕುಮಾರ್ ಬ್ಯಾಟಿಂಗ್ ಅಬ್ಬರ : ಟೀಂ ಇಂಡಿಯಾಗೆ ಟಿ20 ಸರಣಿ ಭರ್ಜರಿ ಗೆಲವು!

ಸೂರ್ಯಕುಮಾರ್ ಯಾದವ್ ಈಗ ಟಿ20 ಕ್ರಿಕೆಟ್‌ನಲ್ಲಿ 3 ಶತಕಗಳನ್ನು ಗಳಿಸಿದ್ದಾರೆ. ಅವರು ಆರಂಭಿಕ ಸ್ಥಾನಕ್ಕಿಂತ ಕೆಳಗಿರುವ ಬ್ಯಾಟಿಂಗ್‌ನಲ್ಲಿ ಎಲ್ಲಾ ಮೂರು ಶತಕಗಳನ್ನು ಗಳಿಸಿದ್ದಾರೆ. ಅಂತರಾಷ್ಟ್ರೀಯ ಟಿ20ಯಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಸೂರ್ಯ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ 3 ಟಿ20 ಶತಕಗಳನ್ನು ಗಳಿಸಿದ ಏಕೈಕ ಆಟಗಾರ. ಈ ವೇಳೆ ಅವರು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಸೇರಿದಂತೆ 6 ಆಟಗಾರ ದಾಖಲೆಯನ್ನು ಮುರಿದಿದ್ದಾರೆ. ಇವರೆಲ್ಲರು ಓಪನಿಂಗ್ ಬಳಿಕ ಬ್ಯಾಟಿಂಗ್ ಮಾಡುವಾಗ ತಲಾ 2 ಶತಕ ಗಳಿಸಿದ್ದಾರೆ.

ಭಾರತದ ಎರಡನೇ ವೇಗದ ಶತಕ:

ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧ ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಮೂಲಕ ಭಾರತ ಪರ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಅತಿ ವೇಗದ ಶತಕ ದಾಖಲಿಸಿದವರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಇನ್ನು ಭಾರತಕ್ಕಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ಸೂರ್ಯ ಎರಡನೇ ಸ್ಥಾನವನ್ನು ತಲುಪಿದ್ದಾರೆ. ಇವರ ಹೆಸರಿನಲ್ಲಿ ಮೂರು ಶತಕಗಳಿವೆ. ಇನ್ನು, ರೋಹಿತ್ ಶರ್ಮಾ 4 T20 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದರೆ, ಕೆಎಲ್ ರಾಹುಲ್ ಹೆಸರಿನಲ್ಲಿ 2 ಶತಕಗಳಿವೆ.

ಅತಿ ಕಡಿಮೆ ಎಸೆತಗಳಲ್ಲಿ 1500 ರನ್:

ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡಿದ ತಕ್ಷಣ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 1500 ರನ್ ಪೂರೈಸಿದ್ದಾರೆ. ಕೇವಲ 843 ಎಸೆತಗಳಲ್ಲಿ 1500 ರನ್ ಗಳಿಸಿದ್ದಾರೆ. ಇದು ಅತ್ಯಂತ ವೇಗದ ರನ್ ಗಳಿಕೆ ಎನ್ನಬಹುದು. ಶ್ರೀಲಂಕಾ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡಿದ್ದಕ್ಕಾಗಿ ಅವರಿಗೆ 'ಪಂದ್ಯ ಶ್ರೇಷ್ಠ' ಪ್ರಶಸ್ತಿ ನೀಡಲಾಯಿತು. ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, ಸ್ಫೋಟಕ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿರುವ ಆಟಗಾರ. ಭಾರತ ಪರ 45 ಪಂದ್ಯಗಳಲ್ಲಿ 1578 ರನ್ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಶತಕಗಳು:

  • 4 ರೋಹಿತ್ ಶರ್ಮಾ (ಭಾರತ)
  • 3 ಸೂರ್ಯಕುಮಾರ್ ಯಾದವ್ (ಭಾರತ)
  • 3 ಗ್ಲೆನ್ ಮ್ಯಾಕ್ಸ್‌ವೆಲ್ (ಭಾರತ)
  • 3 ಕಾಲಿನ್ ಮುನ್ರೊ (ನ್ಯೂಜಿಲೆಂಡ್)

ಇದನ್ನೂ ಓದಿ: Ind Vs SL : ಇಶಾನ್ ಕಿಶನ್ ಮೇಲೆ ಮುನಿಸಿಕೊಂಡ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ!

ಭಾರತದ ಪರ T20 ವೇಗದ ಶತಕ

  • 35 ಎಸೆತಗಳು, ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ (2017)
  • 45 ಎಸೆತಗಳು, ಶ್ರೀಲಂಕಾ ವಿರುದ್ಧ ಸೂರ್ಯಕುಮಾರ್ ಯಾದವ್ (2023)
  • 46 ಎಸೆತಗಳು, ವೆಸ್ಟ್ ಇಂಡೀಸ್ ವಿರುದ್ಧ ಕೆಎಲ್ ರಾಹುಲ್ (2016)
  • 48 ಎಸೆತಗಳು, ಇಂಗ್ಲೆಂಡ್ ವಿರುದ್ಧ ಸೂರ್ಯಕುಮಾರ್ ಯಾದವ್ (2022)
  • 49 ಎಸೆತಗಳು, ನ್ಯೂಜಿಲೆಂಡ್ ವಿರುದ್ಧ ಸೂರ್ಯಕುಮಾರ್ ಯಾದವ್ (2022)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News