ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಹರಿಣಗಳು, ಗೆಲುವಿಗೆ ಎರಡೇ ಮೆಟ್ಟಿಲು ಬಾಕಿ

 ಭಾರತ ನೀಡಿದ 497 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್ ನಲ್ಲಿ ಕೇವಲ162 ರನ್ ಗಳಿಗೆ ಸರ್ವಪತನ ಕಂಡಿತು.  

Last Updated : Oct 21, 2019, 07:11 PM IST
ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಹರಿಣಗಳು, ಗೆಲುವಿಗೆ ಎರಡೇ ಮೆಟ್ಟಿಲು ಬಾಕಿ  title=
Photo courtesy: ICC

ನವದೆಹಲಿ: ಭಾರತ ನೀಡಿದ 497 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್ ನಲ್ಲಿ ಕೇವಲ162 ರನ್ ಗಳಿಗೆ ಸರ್ವಪತನ ಕಂಡಿತು.  

ಭಾರತದ ಪರವಾಗಿ ಮೊದಲ ಇನಿಂಗ್ಸ್ ನಲ್ಲಿ ಕರಾರುವಕ್ಕಾದ ಬೌಲಿಂಗ್ ದಾಳಿ ನಡೆಸಿದ ಉಮೇಶ್ ಯಾದವ್ 3, ಶಮಿ 2, ನದೀಮ್ 2 ಹಾಗೂ ಜಡೇಜಾ 2 ವಿಕೆಟ್ ಗಳನ್ನು ಕಬಳಿಸುವ ಮೂಲಕ ಹರಿಣಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ತದನಂತರ ಫಾಲೋಆನ್ ಮೂಲಕ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತದ ಬೌಲರ್ ಗಳು ಆರಂಭದಲ್ಲೇ ಶಾಕ್ ನೀಡಿದರು. ತಂಡದ ಮೊತ್ತ 36 ರನ್ ಆಗುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತು. ತದಂತರ ಜಾರ್ಜ್ ಲಿಂಡೆ ತಳವೂರುವ ಸೂಚನೆ ನೀಡಿದರಾದರೂ ಕೂಡ ರನ್ ಔಟ್ ಆಗುವ ಮೂಲಕ ನಿರಾಸೆಗೊಳಿಸಿದರು.

ಮೂರನೇ ದಿನದಾಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ 132 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು 203 ರನ್ ಗಳ ಹಿನ್ನಡೆ ಅನುಭವಿಸಿದೆ.  
 

Trending News