ನವದೆಹಲಿ: ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತ ತಂಡ 72 ರನ್ಗಳ ಹೀನಾಯ ಸೋಲು ಕಂಡಿದೆ.
ದಕ್ಷಿಣ ಆಫ್ರಿಕಾ ನೀಡಿದ 208 ರನ್ ಮುನ್ನಡೆಯ ಗುರಿಯನ್ನು ತಲುಪಲು ಭಾರತದ ಬ್ಯಾಟ್ಸ್ಮನ್ಗಳು ವಿಫಲರಾಗಿದ್ದಾರೆ. ಭಾರತ ತಂಡಕ್ಕೆ ವಿಶೇಷವಾಗಿ ವರ್ನನ್ ಫಿಲಾಂಡರ್ ಅವರು ತಮ್ಮ ಮಾರಕ ದಾಳಿಯಿಂದ 6/42 ವಿಕೆಟ್ಗಳನ್ನು ಪಡೆದರು. ಇದರಿಂದ ದಕ್ಷಿಣ ಆಫ್ರಿಕಾ ಮೂರು ಟೆಸ್ಟ್ ಪಂದ್ಯಗಳಲ್ಲಿ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮೂರನೇ ದಿನ ಆತಿಥೇಯರು ದಿನ 4 ಕ್ಕೆ 65 ಕ್ಕೆ ದಿನವನ್ನು ಪ್ರಾರಂಭಿಸಿದರು.ನಂತರ ಭಾರತದ ವೇಗದ ಬೌಲರ್ಗಳು ದಕ್ಷಿಣ ಆಫ್ರಿಕನ್ನರು ಕೇವಲ 130 ರನ್ಗಳಿಗೆ ಆಲೌಟ್ ಮಾಡಿದರು, ಮೊಹಮ್ಮದ್ ಶಮಿ ಮತ್ತು ಜಾಸ್ಪ್ರಿತ್ ಬುಮರಾ ಮೂರು ವಿಕೆಟ್ಗಳನ್ನು ಪಡೆದುಕೊಂಡರು.
ಈ ಪಿಚ್ಚಿನ ಸ್ವರೂಪವನ್ನು ಗಮನಿಸಿದಾಗ 208ರನ್ಗಳ ಗುರಿಯು ನಿಜಕ್ಕೂ ಸವಾಲಾಗಿತ್ತು, ಆದರೆ ಭಾರತದ ತಂಡದ ಯಾವುದೇ ಬ್ಯಾಟ್ಸ್ಮನ್ಗಳು ಗಟ್ಟಿಯಾಗಿ ನಿಲ್ಲಲಿಲ್ಲ ಆದ್ದರಿಂದ ಭಾರತ ಹಿನಾಯವಾಗಿ ಸೋತಿತು ಒಂದುವೇಳೆ . ರವಿಚಂದ್ರನ್ ಅಶ್ವಿನ್ ಮತ್ತು ಭುವನೇಶ್ವರ ಕುಮಾರ್ ನಡುವಿನ ಎಂಟನೇ ವಿಕೆಟ್ 49 ರನ್ನುಗಳ ಜೊತೆಯಾಟವಾಗದಿದ್ದರೆ ಸೋಲಿನ ಅಂತರ ಇನ್ನು ದೊಡ್ಡದಾಗಿರುತ್ತಿತ್ತು.