ಅನ್ನ ಬಿಟ್ಟು ಚಪಾತಿ ತಿಂದ್ರೆ ಹೊಟ್ಟೆಯ ಬೊಜ್ಜು ಕರಗುತ್ತಾ? ತೂಕ ಇಳಿಸಲು ಈ ಟಿಪ್ಸ್‌ ಫಾಲೋ ಮಾಡ್ಲೇಬೇಕು!!

Weight Loss Tips: ತೂಕ ಇಳಿಕೆಗೂ ಚಪಾತಿಗೂ ಯಾವುದೇ ಸಂಬಂಧವಿಲ್ಲ. ಅನ್ನ ತಿಂದು ಕೂಡ ತೂಕ ಇಳಿಸಿಕೊಳ್ಳಬಹುದು. ಚಪಾತಿ ತಿಂದರೆ ತೂಕ ಕಡಿಮೆಯಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ಏಕೆಂದರೆ, ಚಪಾತಿ ಮಾಡಲು ಬಳಸುವ ಗೋಧಿ ಹಿಟ್ಟು ಮತ್ತು ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್ ಬಹುತೇಕ ಒಂದೇ ಆಗಿರುತ್ತದೆ.

Diet & Weight Loss: ತೂಕ ಇಳಿಸಿಕೊಳ್ಳಲು ನೀವು ಯಾರ ಬಳಿಯಾದರೂ ಸಲಹೆ ಕೇಳಿದಾಗ ಅವರು ಹೇಳುವುದು ಒಂದೇ ಮಾತು. ರಾತ್ರಿ ಅನ್ನ ತಿನ್ನುವುದನ್ನು ನಿಲ್ಲಿಸಿ ಚಪಾತಿ ತಿನ್ನಿ ಎಂದು. ಹಾಗಾದ್ರೆ ನಿಜವಾಗಿಯೂ ಚಪಾತಿ ತಿಂದರೆ ತೂಕ ಕಡಿಮೆಯಾಗುತ್ತಾ? ಅನ್ನ ತಿಂದರೆ ತೂಕ ಹೆಚ್ಚುತ್ತಾ? ಅಥವಾ ಇವೆಲ್ಲವೂ ಕೇವಲ ನಮ್ಮ ಭ್ರಮೆಯೇ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ತುಂಬಾ ಜನರು ದೇಹ ಮತ್ತು ಹೊಟ್ಟೆಯ ಬೊಜ್ಜು ಕರಗಿಸಲು ಅನ್ನ ಊಟ ಮಡುವುದನ್ನು ಬಿಟ್ಟು ಚಪಾತಿ ತಿನ್ನಲು ಶುರು ಮಾಡುತ್ತಾರೆ. ಆದರೆ ನಿಜ ಏನು ಅಂದ್ರೆ ಕ್ಯಾಲರಿ ವಿಷಯ ಬಂದಾಗ ಅನ್ನ ಮತ್ತು ಚಪಾತಿಯಲ್ಲಿ ಅಂತಹ ದೊಡ್ಡ ವ್ಯತ್ಯಾಸವೇನೂ ಇಲ್ಲ. ನಿಮ್ಮ ತೂಕ ಕಡಿಮೆ ಆಗಬೇಕು ಅಂದರೆ ಕ್ಯಾಲರಿ ಬರ್ನ್‌ ಆಗಬೇಕು. ಅದಕ್ಕೆ ಸಾಕಷ್ಟು ವ್ಯಾಯಾಮ, ವಾಕಿಂಗ್‌ ತುಂಬಾ ಮುಖ್ಯ.

2 /5

ಇದರ ಜೊತೆಗೆ ನೀವು ಮಾಡುವ ಊಟದಲ್ಲಿ ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ಫೈಬರ್‌ ಮತ್ತು ಪ್ರೊಬಯಾಟಿಕ್‌ ಆಹಾರಗಳು ಇರಬೇಕು. ಕಾರ್ಬೋಹೈಡ್ರೇಟ್‌ ಇರುವ ಆಹಾರವನ್ನು ಕಮ್ಮಿ ತೆಗೆದುಕೊಡು ಪ್ರೋಟೀನ್‌, ಫೈಬರ್‌ ಇರುವ ಆಹಾರವನ್ನು ಜಾಸ್ತಿ ತೆಗೆದುಕೊಂಡರೆ ಹಸಿವು ಆಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಆಗ ತೂಕವನ್ನು ಇಳಿಸಿಕೊಳ್ಳಲು ಸಹ ಸುಲಭವಾಗುತ್ತದೆ. 

3 /5

ತೂಕ ಇಳಿಕೆಗೂ ಚಪಾತಿಗೂ ಯಾವುದೇ ಸಂಬಂಧವಿಲ್ಲ. ಅನ್ನ ತಿಂದು ಕೂಡ ತೂಕ ಇಳಿಸಿಕೊಳ್ಳಬಹುದು. ಚಪಾತಿ ತಿಂದರೆ ತೂಕ ಕಡಿಮೆಯಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ಏಕೆಂದರೆ, ಚಪಾತಿ ಮಾಡಲು ಬಳಸುವ ಗೋಧಿ ಹಿಟ್ಟು ಮತ್ತು ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್ ಬಹುತೇಕ ಒಂದೇ ಆಗಿರುತ್ತದೆ. ಹೀಗಾಗಿ ಅನ್ನ ಅಥವಾ ಚಪಾತಿ ಎರಡರಲ್ಲಿ ಏನೇ ತಿಂದರೂ ನಮ್ಮ ದೇಹವು ಕಾರ್ಬೋಹೈಡ್ರೇಟ್‌ಗಳನ್ನು ಪಡೆಯುತ್ತದೆ. ಆದರೆ ಕಾರ್ಬೋಹೈಡ್ರೇಟ್‌ಗಳ ಜೊತೆಗೆ ಕೊಬ್ಬು ಮತ್ತು ಪ್ರೋಟೀನ್‌ಗಳನ್ನು ಹೊಂದಿರುವ ಆಹಾರವನ್ನು ಮಿತವಾಗಿ ತೆಗೆದುಕೊಳ್ಳಬೇಕು. 

4 /5

ಸಮತೋಲಿತ ಆಹಾರದ ಜೊತೆಗೆ ನಾವು ಎಷ್ಟು ಕ್ಯಾಲೋರಿಗಳನ್ನು ತಿನ್ನುತ್ತೇವೆ ಮತ್ತು ಎಷ್ಟು ಕ್ಯಾಲೋರಿಗಳನ್ನು ಖರ್ಚು ಮಾಡುತ್ತೇವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಆದರೆ, ಅನೇಕ ಜನರು ವಾಸ್ತವವಾಗಿ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಸೇವಿಸುತ್ತಾರೆ. ಇದರೊಂದಿಗೆ ಉಳಿದ ಕ್ಯಾಲೋರಿ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಇದರ ಪರಿಣಾಮದಿಂದ ತೂಕ ಹೆಚ್ಚಾಗುತ್ತದೆ.

5 /5

ನಾವು ಸೇವಿಸುವ ಆಹಾರದ ಮೂಲಕ ನಾವು ಪಡೆಯುವ ಕ್ಯಾಲೋರಿಗಳನ್ನು ಬರ್ನ್‌ ಮಾಡಲು ಪ್ರಯತ್ನಿಸಬೇಕು. ಪ್ರತಿದಿನ ನೀವು 2000 ಕ್ಯಾಲೋರಿ ಸೇವಿಸಿದರೆ 200 ರಿಂದ 300 ಕ್ಯಾಲೋರಿಗಳನ್ನು ಕರಗಿಸಬೇಕು. ಇದರಿಂದ ಅಧಿಕ ತೂಕವನ್ನು ಕಡಿಮೆ ಮಾಡಬಹುದು. ನಾವು ನಮ್ಮ ಆಹಾರದಲ್ಲಿ ಅನ್ನ ಅಥವಾ ಚಪಾತಿ ತಿನ್ನುತ್ತೇವೆ ಎಂಬುದು ಮುಖ್ಯವಲ್ಲ. ನಾವು ಎಷ್ಟು ಕ್ಯಾಲೋರಿಗಳನ್ನು ತಿನ್ನುತ್ತಿದ್ದೇವೆ ಎಂಬುದು ಮುಖ್ಯ. ಹೆಚ್ಚು ದೈಹಿಕ ಕೆಲಸ ಮಾಡದವರು ಮಿತವಾಗಿ ತಿನ್ನಬೇಕು. ಇದರೊಂದಿಗೆ ವ್ಯಾಯಾಮ ಮಾಡಿದರೆ ತೂಕ ಇಳಿಸಿಕೊಳ್ಳಬಹುದು.