Reheat tea side effects : ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯದಿದ್ದರೆ ಕೆಲವರ ಕೈ ಕಾಲು ಅಲ್ಲಾಡುವುದಿಲ್ಲ.. ಅನೇಕರು ಚಹಾ ಮಾಡಿ ಕುಡಿದ ನಂತರವೇ ಬೇರೆ ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಬೆಳಿಗ್ಗೆ ಮಾಡಿದ ಚಹಾವನ್ನು ಬಿಸಿ ಮಾಡಿ ನಂತರ ಎದ್ದವರಿಗೆ ನೀಡಲಾಗುತ್ತದೆ. ಆದರೆ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಬಾರದು ಎಂದು ನಿಮಗೆ ತಿಳಿದಿದೆಯೇ..? ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಇಂದಿನ ಒತ್ತಡದ ಜೀವನವು ಜನರ ದಿನಚರಿಯನ್ನು ಬದಲಾಯಿಸಿದೆ. ಅಂತಹ ಸಂದರ್ಭಗಳಲ್ಲಿ ಜನರು ತಮ್ಮ ಆಹಾರವನ್ನು ನಿರ್ಲಕ್ಷಿಸುತ್ತಾರೆ. ವಿಶೇಷವಾಗಿ ಚಹಾದ ಬಗ್ಗೆ ಅಸಡ್ಡೆ ತೋರುತ್ತಾರೆ.. ಚಹಾ ಕುಡಿಯಲು ನಿಗದಿತ ಸಮಯವಿಲ್ಲ. ಅದಕ್ಕೇ ನಮ್ಮ ಮನೆಗಳಲ್ಲಿ ಒಮ್ಮೆ ಟೀ ಮಾಡಿ ಮತ್ತೆ ಮತ್ತೆ ಅದನ್ನೇ ಬಿಸಿ ಮಾಡಿ ಕುಡಿಯುತ್ತಾರೆ. ಈ ರೀತಿ ಮಾಡಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ..
ಭಾರತದಲ್ಲಿ ಹೆಚ್ಚಿನ ಜನರು ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಅಲ್ಲದೆ, ಗೃಹಿಣಿಯರು ಒಂದೇ ಬಾರಿ ಹೆಚ್ಚು ಟೀ ಮಾಡಿಟ್ಟು ಅದನ್ನೇ ಬಿಸಿ ಮಾಡಿ ನಂತರ ಬಂದವರಿಗೆ ಕುಡಿಯಲು ನೀಡುತ್ತಾರೆ.. ಆದರೆ, ಈ ರೀತಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ರುಚಿಯಲ್ಲಿ ಬದಲಾವಣೆ: ಪದೇ ಪದೇ ಬಿಸಿ ಮಾಡಿ ಚಹಾ ಕುಡಿಯುವುದರಿಂದ ಅದರ ರುಚಿ ಬದಲಾಗುತ್ತದೆ ಅಂದರೆ ಕೆಡುತ್ತದೆ. ಅದರ ಪರಿಮಳವೂ ಬದಲಾಗುತ್ತದೆ. ಇವೆರಡರ ಜೊತೆಗೆ ಚಹಾವನ್ನು ಮತ್ತೆ ಬಿಸಿ ಮಾಡುವುದರಿಂದ ಅದರ ಪೋಷಕಾಂಶಗಳೂ ಕಡಿಮೆಯಾಗುತ್ತವೆ.
ಆರೋಗ್ಯಕ್ಕೆ ಹಾನಿ: ಬಹಳ ದಿನಗಳಿಂದ ಕುದಿಸಿದ ಬಿಸಿ ಬಿಸಿ ಟೀ ಕುಡಿಯುವುದು ಆರೋಗ್ಯಕ್ಕೆ ಹಾನಿಕರ. ಚಹಾದಲ್ಲಿ ಸೂಕ್ಷ್ಮಜೀವಿಗಳು ಬೆಳೆಯಲು ಪ್ರಾರಂಭಿಸುತ್ತವೆ. ಈ ಬ್ಯಾಕ್ಟೀರಿಯಾಗಳು ಆರೋಗ್ಯಕ್ಕೆ ಹಾನಿಕಾರಕ. ವಾಸ್ತವವಾಗಿ, ಮನೆಯಲ್ಲಿ ಹಾಲಿನ ಚಹಾವನ್ನು ತಯಾರಿಸಲು ಸಾಕಷ್ಟು ಹಾಲು ಬೇಕಾಗುತ್ತದೆ. ಇದು ಸೂಕ್ಷ್ಮಜೀವಿಯ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.
ಹೊಟ್ಟೆ ನೋವು: ತಜ್ಞರ ಪ್ರಕಾರ, ಗಿಡಮೂಲಿಕೆ ಚಹಾವನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದರ ಪೋಷಕಾಂಶಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಅಲ್ಲದೆ ಇಂತಹ ಟೀ ಕುಡಿಯುವುದರಿಂದ ಹೊಟ್ಟೆನೋವು ಉಂಟಾಗುತ್ತದೆ. ಅಲ್ಲದೆ, ಹೊಟ್ಟೆ ಊತದಂತಹ ಅನೇಕ ಸಮಸ್ಯೆಗಳೂ ಉದ್ಭವಿಸಬಹುದು.
ಚಹಾವನ್ನು ತಯಾರಿಸಿದ 15 ನಿಮಿಷಗಳ ನಂತರ ಬಿಸಿ ಮಾಡುವುದರಿಂದ ದೇಹಕ್ಕೆ ಹೆಚ್ಚು ಹಾನಿಯಾಗುವುದಿಲ್ಲ. ಇದಕ್ಕಿಂತ ಹೆಚ್ಚಿನ ಸಮಯದ ನಂತರ ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ಚಹಾವನ್ನು ತಕ್ಷಣ ಕುಡಿಯುವುದು ಉತ್ತಮ. ಚಹಾ ಮಾಡಿದ 15 ನಿಮಿಷಗಳಲ್ಲಿ ಕುಡಿಯಿರಿ.
(ಸೂಚನೆ: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಒಳಗೊಂಡಿದೆ. Zee Kannada News ಇದನ್ನು ಪರಿಶೀಲಿಸಿಲ್ಲ. ದಯವಿಟ್ಟು ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಉತ್ತಮ.. ಇಲ್ಲವೇ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ)