Shukra Gochar 2025: ಮೀನ ರಾಶಿಗೆ ಶುಕ್ರನ ಪ್ರವೇಶ, ಈ ರಾಶಿಯವರಿಗೆ ಮನೆ, ವಾಹನ ಖರೀದಿ ಯೋಗ, ಭಾರೀ ಅದೃಷ್ಟ..!

Shukra Gochar 2025: ವೈದಿಕ ಜ್ಯೋತಿಷ್ಯದ ಪ್ರಕಾರ, ನವಗ್ರಹಗಳಲ್ಲಿ ಯಾವುದೇ ಒಂದು ಗ್ರಹದ ಸ್ಥಾನದಲ್ಲಿನ ಬದಲಾವಣೆಯೂ ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ. 

Venus Transit January 2025: ಜ್ಯೋತಿಷ್ಯದಲ್ಲಿ ಐಷಾರಾಮಿ ಜೀವನದ ಅಂಶವೆಂದು ಪರಿಗಣಿಸಲಾಗಿರುವ ಶುಕ್ರ ಗ್ರಹವು ನಾಳೆ (ಜನವರಿ 28) ಕುಂಭ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /14

ಜ್ಯೋತಿಷ್ಯದಲ್ಲಿ ಪ್ರೀತಿ, ಐಷಾರಾಮಿಯ ಅಂಶವೆಂದು ಪರಿಗಣಿಸಲಾಗಿರುವ ಶುಕ್ರ ಗ್ರಹವು ನಾಳೆ (ಜನವರಿ 28) ಕುಂಭ ರಾಶಿಯನ್ನು ತೊರೆದು ಮೀನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಹಣಕಾಸು ಮತ್ತು ಭಾವನೆಗಳ ಮೇಲೆ ಮಹತ್ವದ ಪರಿಣಾಮ ಉಂಟು ಮಾಡುವ ಶುಕ್ರ ಗೋಚಾರ ಮೇಷದಿಂದ ಮೀನ ರಾಶಿಯವರೆಗೆ ಏನು ಪರಿಣಾಮ ಬೀರಲಿದ್ದಾನೆ ತಿಳಿಯಲು ಮುಂದೆ ಓದಿ...

2 /14

ಮೇಷ ರಾಶಿ:  ಶುಕ್ರ ಗೋಚಾರವು ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗವನ್ನು ತರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಬಹಳ ಚಿಂತನ ಚೀಲರಾಗಿ ನಿರ್ಧರಿಸಿ. ವೇದೇಶಿ ಪ್ರಯಾಣ ಸಾಧ್ಯತೆ ಇದೆ. ಈ ಸಮಯದಲ್ಲಿ ಹಣಕಾಸು ವಿಚಾರದಲ್ಲಿ ಬಹಳ ಜಾಗರೂಕರಾಗಿರಿ.   

3 /14

ವೃಷಭ ರಾಶಿ:  ಶುಕ್ರ ಗೋಚಾರವು ಈ ರಾಶಿಯವರ ವೃತ್ತಿ, ವ್ಯವಹಾರ, ವೈಯಕ್ತಿಕ ಜೀವನದಲ್ಲಿ ಅನುಕೂಲಕರ ಫಲಗಳನ್ನು ನೀಡಲಿದೆ. ಸ್ನೇಹಿತರು, ಆತ್ಮೀಯ ಸಂಬಂಧಿಕರೊಂದಿಗೆ ಅರ್ಥಪೂರ್ಣವಾದ ಸಂವಹನವು ಮನಸ್ಸಿಗೆ ಸಂತೋಷವನ್ನು ನೀಡಲಿದೆ. ಭೌತಿಕ ಸುಖ ಹೆಚ್ಚಾಗಲಿದೆ. 

4 /14

ಮಿಥುನ ರಾಶಿ:  ಮೀನ ರಾಶಿಗೆ ಶುಕ್ರನ ಪ್ರವೇಶವು ಈ ರಾಶಿಯವರಿಗೆ ಉದ್ಯೋಗ ರಂಗಕ್ಕೆ ಸಂಬಂಧಿಸಿದಂತೆ ಫಲಪ್ರದವಾಗಿದೆ. ವಿದೇಶ ವ್ಯವಹಾರದಿಂದ ಭಾರೀ ಲಾಭವನ್ನು ಪಡೆಯುವ ಸಂಭವವಿದೆ. ಆಮದು-ರಫ್ತು ವ್ಯವಹಾರಗಳು ಪ್ರವರ್ಧಮಾನಕ್ಕೆ ಬರಬಹುದು. 

5 /14

ಕರ್ಕಾಟಕ ರಾಶಿ:  ಈ ಸಂದರ್ಭದಲ್ಲಿ ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ ಕೈಗೊಳ್ಳುವ ಸಂಭವವಿದೆ. ಪ್ರಯಾಣವು ಲಾಭದಾಯಕವಾಗಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದ್ದು, ಹೊಸ ಮನೆ, ವಾಹನ ಖರೀದಿ ಯೋಗವಿದೆ. 

6 /14

ಸಿಂಹ ರಾಶಿ:  ಮೀನ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಈ ರಾಶಿಯವರಿಗೆ ಅದೃಷ್ಟ ಬೆಳಗಲಿದೆ. ಆರ್ಥಿಕವಾಗಿ ಏಳ್ಗೆ ಹೊಂದುವಿರಿ; ನಿಮ್ಮ ಸಂವಹನ ಕೌಶಲ್ಯದಿಂದಾಗಿ ಅಧಿಕಾರಿಗಳ ಮನ್ನಣೆಗೆ ಪಾತ್ರರಾಗುವಿರಿ. ವಿವಾಹ ಪ್ರಸ್ತಾಪಗಳು ಬರಬಹುದು. 

7 /14

ಕನ್ಯಾ ರಾಶಿ:  ಶುಕ್ರ ಸಂಚಾರವು ಈ ರಾಶಿಯವರಿಗೆ ಬಂಪರ್ ಆರ್ಥಿಕ ಲಾಭವನ್ನು ನೀಡಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಗಣನೀಯವಾದ ಪ್ರಗತಿಯನ್ನು ಕಾಣುವಿರಿ. ವಿವಾಹ ಸಂಬಂಧಿತ ವಿಚಾರಗಳಲ್ಲಿ ಶುಭ ಸುದ್ದಿ ನಿರೀಕ್ಷಿಸಬಹುದು. 

8 /14

ತುಲಾ ರಾಶಿ:  ಶುಕ್ರ ಗೋಚಾರ 2025, ಈ ರಾಶಿಯವರ ಬದುಕಿನಲ್ಲಿ ಧನಾತ್ಮಕ ಫಲಗಳನ್ನು ಹೆಚ್ಚಿಸಲಿದೆ. ತಾಯಿ ಸಂಬಂಧಿಕರೊಂದಿಗೆ ಮೂಡಿದ್ದ ಭಿನ್ನಾಭಿಪ್ರಾಯಗಳು ಸರಿಹೊಗಲಿವೆ. ಬ್ಯಾಂಕ್ ಆದಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲಿದೆ. 

9 /14

ವೃಶ್ಚಿಕ ರಾಶಿ:  ಶುಕ್ರ ಸಂಚಾರದೊಂದಿಗೆ ಈ ರಾಶಿಯವರ ಜೀವನದಲ್ಲಿ ಕೆಟ್ಟ ಸಮಯವು ಸರಿದು ಒಳ್ಳೆಯ ಸಮಯ ಆರಂಭವಾಗಲಿದೆ. ಸಾಮಾಜಿಕ ಮಾಧ್ಯಮ, ಮನರಂಜನಾ ಕ್ಷೇತ್ರದಲ್ಲಿರುವವರು ಪ್ರಗತಿಯ ಹೊಸ ಎತ್ತರಕ್ಕೆ ಏರುವರು. ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ. ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಬೆನ್ನಿಗಿದೆ. ಮನೆ ಖರೀದಿ ಯೋಗವೂ ಇದೆ. 

10 /14

ಧನು ರಾಶಿ:  ಶುಕ್ರ ಗೋಚಾರ ಫಲದಿಂದ ಈ ರಾಶಿಯವರು ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುವರು. ಹೊಸ ವಾಹನ ಖರೀದಿ ಸಂಭವವಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಆನಂದಿಸುವಿರಿ. ಒಟ್ಟಾರೆ ಸಂತೋಷದಾಯಕ ಸಮಯವನ್ನು ನೋಡಬಹುದು. 

11 /14

ಮಕರ ರಾಶಿ:  ಶುಕ್ರ ಸಂಚಾರದಿಂದ ವೃತ್ತಿ ಬದುಕಿನಲ್ಲಿ ಪ್ರಗತಿಯ ಹೊಸ ಅವಕಾಶಗಳನ್ನು ಪಡೆಯುವಿರಿ. ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ಪ್ರತಿ ಹೆಜ್ಜೆಯಲ್ಲೂ ಯಶಸ್ಸನ್ನು ಗಳಿಸುವಿರಿ. 

12 /14

ಕುಂಭ ರಾಶಿ:  ಶುಕ್ರ ಗೋಚಾರದಿಂದ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಭಾವನಾತ್ಮಕವಾಗಿ ಸಿಹಿ ಅನುಭವಕ್ಕೆ ಸಿದ್ದರಾಗಿರಿ. ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಹಣಕಾಸು ಸಂಬಂಧಿತ ವ್ಯವಹಾರಗಳಲ್ಲಿ ಪ್ರಗತಿ ಕಂಡು ಬರಲಿದೆ. ಒಟ್ಟಾರೆ ಇದು ಸುವರ್ಣ ಸಮಯ. 

13 /14

ಮೀನ ರಾಶಿ:  ಶುಕ್ರ ಸಂಚಾರವು ನಿಮ್ಮ ಆಕರ್ಷಣೆಯನ್ನು ವರ್ಧಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ಜೀವನದಲ್ಲಿ ಭೌತಿಕ ಸುಖಗಳು ಹೆಚ್ಚಾಗಿ, ಐಷಾರಾಮಿ ಜೀವನವನ್ನು ನಡೆಸುವಿರಿ. 

14 /14

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.