Unni Mukundan : ಕೆಲವರು ಹಸಿಬಿಸಿ ದೃಶ್ಯಗಳನ್ನು ಮಾಡಿ ಅಂತ ಕೇಳುತ್ತಾರೆ, ನನ್ನ ಗೆಳೆಯರೂ ಮಾಡಿದ್ದಾರೆ.. ನೋಡಿ ಅಂತ ಅಂತಹ ದೃಶ್ಯಗಳನ್ನು ತೋರಿಸುತ್ತಾರೆ. ಆದರೆ ಇಬ್ಬರು ವ್ಯಕ್ತಿಗಳ ನಡುವಿನ ಪ್ರೀತಿಯನ್ನು ತೋರಿಸಲು ಬೇರೆ ಮಾರ್ಗಗಳಿವೆ.. ಎಲ್ಲದಕ್ಕೂ ಬೆಡ್ ರೂಂ ದೃಶ್ಯಗಳೇ ಬೇಕಿಲ್ಲ ಎಂದು ಸ್ಟಾರ್ ನಟರೊಬ್ಬರು ನೀಡಿರುವ ಹೇಳಿಕೆ ಅಭಿಮಾನಿಗಳ ಮನ ಗೆದ್ದಿದೆ.
ನಟ ಉನ್ನಿ ಮುಕುಂದನ್ ಕಡಿಮೆ ಸಮಯದಲ್ಲಿ ಮಲಯಾಳಂ ಚಲನಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಸ್ಟಾರ್ ನಟ. ಇತ್ತೀಚಿಗೆ ಮಾರ್ಕೋ ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು.
ಬಾಕ್ಸ್ ಆಫೀಸ್ನಲ್ಲಿ ಸಂಚಲನ ಸೃಷ್ಟಿಸಿದ ಹನೀಫ್ ಅದೇನಿ ನಿರ್ದೇಶನದ ಮಾರ್ಕೊ ಚಿತ್ರದ ನಂತರ, ಗೆಟ್ ಸೆಟ್ ಬೇಬಿ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಇದೇ ವೇಳೆ ಪ್ರಣಯ ದೃಶ್ಯಗಳ ಕುರಿತು ಮುಕುಂದನ್ ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದೆ..
ಗೆಟ್ ಸೆಟ್ ಬೇಬಿ ಚಿತ್ರದ ಪ್ರಚಾರದ ಭಾಗವಾಗಿ ನಟ ಓಎನ್ ಮನೋರಮಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ರೊಮ್ಯಾಂಟಿಕ್ ಸೀನ್ಗಳಲ್ಲಿ ನಟಿಸುವ ಬಗ್ಗೆ ತಮ್ಮ ನಿಲುವಿನ ಏನು..? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಉನ್ನಿ ಮುಕುಂದನ್.. ನಾನು ನೋ ಕಿಸ್ಸಿಂಗ್ ಸೀನ್.. ನೋ.. ರೊಮ್ಯಾಂಟಿಕ್ ಎನ್ನುವ ನೀತಿ ಪಾಲನೆ ಮಾಡ್ತಿನಿ ಅಂತ ನಟ ಹೇಳಿದರು.
ಮಾತು ಮುಂದುವರೆಸಿ.. ನನಗೆ ಕೆಲವರು ಅಂತಹ ದೃಶ್ಯಗಳನ್ನು ಮಾಡಲು ಕೇಳುತ್ತಾರೆ, ನನ್ನ ಸಹೋದ್ಯೋಗಿಗಳೂ ಅಂತಹ ದೃಶ್ಯಗಳನ್ನು ಮಾಡುತ್ತಿದ್ದಾರೆಂದು ತೋರಿಸುತ್ತಾರೆ. ಆದರೆ ಇಬ್ಬರು ವ್ಯಕ್ತಿಗಳ ನಡುವಿನ ಪ್ರೀತಿ ತೋರಿಸಲು ಬೇರೆ ಮಾರ್ಗಗಳಿವೆ ಎಂದು ಮುಕುಂದನ್ ನಂಬುವುದಾಗಿ ತಿಳಿಸಿದ್ದಾರೆ..
ಅಷ್ಟೇ ಅಲ್ಲ.. ಅಂತಹ ದೃಶ್ಯಗಳನ್ನು ಮಾಡುವುದು ಬಿಡುವುದು ನಟರ ಆಯ್ಕೆ.. ಅದರ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡುವ ಅಗತ್ಯವಿಲ್ಲ ಎಂದು ಉನ್ನಿ ಮುಕುಂದನ್ ಹೇಳಿದರು. ಸದ್ಯ ನಟನ ಈ ಹೇಳಿಕೆ ಅವರ ಅಭಿಮಾನಿಗಳ ಮನ ಗೆದ್ದಿದೆ..