Trisha Krishnan : ವಿವಾಹಿತನೊಂದಿಗೆ ಪ್ರೀತಿ, ಖಾಸಗಿ ಫೋಟೋ ವೈರಲ್‌, ಮುರಿದ ನಿಶ್ಚಿತಾರ್ಥ..! ನಟಿ ತ್ರಿಶಾ ಎದರಿಸಿದ ಕಷ್ಟಗಳಿವು..

Happy Birthday Trisha Krishnan : ಇಂದು ನಟಿ ತ್ರಿಶಾ ಕೃಷ್ಣನ್ ಅವರ ಹುಟ್ಟು ಹಬ್ಬ, ದಕ್ಷಿಣ ಭಾರತದ ಸ್ಟಾರ್‌ ನಟಿ ತ್ರಿಶಾ ತಮ್ಮ 41ನೇ ಬರ್ತ್‌ ಡೇಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದ್ಭುತ ನಟನೆ ಮತ್ತು ಸೌಂದರ್ಯದಿಂದ ದಕ್ಷಿಣ ಇಂಡಸ್ಟ್ರಿಯನ್ನು ಆಳುತ್ತಿರುವ ಸುಂದರಿಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳು ಇಲ್ಲಿವೆ..
 

1 /5

PAS 2 ಚಿತ್ರದಲ್ಲಿ ತ್ರಿಶಾ ಕೃಷ್ಣನ್ ಅವರ ಸೌಂದರ್ಯ ಮತ್ತು ನಟನೆ ಕೆಲವೊಂದು ಸೀನ್‌ಗಳಲ್ಲಿ ವಿಶ್ವ ಸುಂದರಿ ಐಶ್ವರ್ಯಾ ರೈಯನ್ನೂ ಮುಚ್ಚಿಹಾಕಿತು ಅಂದ್ರೆ ತಪ್ಪಾಗಲ್ಲ. ಅಷ್ಟು ಕ್ಯೂಟ್‌ ಅಂಡ್‌ ಟ್ಯಾಲೆಟೆಂಡ್‌ ಈ ನಟಿ. ಸಧ್ಯ ಸೂಪರ್‌ ಸ್ಟಾರ್‌ ನಟಿಯಾಗಿರುವ ಮಿಂಚುತ್ತಿರು ತಿಶ್ರಾ ಹಲವಾರು ಅಡೆತಡೆಗಳನ್ನು ಎದುರಿಸಿ ಹಿಮ್ಮೆಟ್ಟಿಸಿ ಇಂದು ಈ ಸ್ಥಿತಿಗೆ ಬಂದು ತಲುಪಿದ್ದಾರೆ.  

2 /5

2005ರಲ್ಲಿ ತ್ರಿಷಾ ಮತ್ತು ದಳಪತಿ ವಿಜಯ್ ಸಂಬಂಧ ಸುದ್ದಿಯಾಗಿತ್ತು. ಗಿಲ್ಲಿ ಚಿತ್ರದ ಸೆಟ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ಇಲ್ಲಿಂದಲೇ ಇಬ್ಬರೂ ಪರಸ್ಪರ ಪ್ರೀತಿಸತೊಡಗಿದರು. ಆ ಸಮಯದಲ್ಲಿ ವಿಜಯ್‌ಗೆ ಮದುವೆಯಾಗಿತ್ತು. ಆದರೆ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಇದಾದ ನಂತರ ತ್ರಿಶಾ ಹೆಸರು ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಜೊತೆಗೂ ಸೇರಿಕೊಂಡಿತ್ತು. ಇಬ್ಬರೂ ಹಲವು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದರು ಅಂತ ಹೇಳಲಾಗುತ್ತಿತ್ತು.  

3 /5

ತ್ರಿಷಾ ಮತ್ತು ರಾಣಾ ದಗ್ಗುಬಾಟಿ ಸಂಬಂಧದಲ್ಲಿದ್ದ ಸಮಯದಲ್ಲಿ, ಅವರಿಬ್ಬರ ಖಾಸಗಿ ಫೋಟೋಗಳು ಲೀಕ್ ಆಗಿದ್ದವು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದವು. ಈ ವಿವಾದದ ಬಗ್ಗೆ ತ್ರಿಶಾ ಯಾವುದೇ ಸ್ಪಷ್ಟನೆ ನೀಡಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ರಾಣಾ ದಗ್ಗುಬಾಟಿ ಬಿಪಾಶಾ ಬಸು ಅವರೊಂದಿಗೆ ಸಂಬಂಧವನ್ನು ಹೊಂದಿದ್ದರು, ಇದರಿಂದಾಗಿ ಅವರ ಸಂಬಂಧವು ಮುರಿದುಹೋಯಿತು ಎನ್ನಲಾಗಿದೆ.  

4 /5

ಸೌತ್ ಸೂಪರ್‌ಸ್ಟಾರ್ ಧನುಷ್‌ನೊಂದಿಗಿನ ತ್ರಿಷಾ ಸಂಬಂಧದ ಬಗ್ಗೆಯೂ ಹೆಚ್ಚು ಹೇಳಿ ಬಂದಿತ್ತು. ಆದರೆ, ಇಬ್ಬರೂ ತಾವು ಒಳ್ಳೆಯ ಸ್ನೇಹಿತರು ಅಂತ ಹೇಳಿಕೊಂಡಿದ್ದರು. 2015 ರಲ್ಲಿ, ನಟಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.   

5 /5

ನಿಶ್ಚಿತಾರ್ಥವಾದ ಕೇವಲ 5 ತಿಂಗಳಲ್ಲಿ ತ್ರಿಷಾ ಮತ್ತು ವರುಣ್ ಸಂಬಂಧ ಮುರಿದುಬಿತ್ತು. ಧನುಷ್ ಹಾಗೂ ತ್ರಿಷಾ ನಡುವಿನ ಸ್ನೇಹ ವರುಣ್ ಗೆ ಇಷ್ಟವಾಗಿರಲಿಲ್ಲ ಎನ್ನಲಾಗಿದೆ. ತ್ರಿಶಾ ಕೃಷ್ಣನ್ ಇದುವರೆಗೂ ಮದುವೆಯಾಗಿಲ್ಲ.