Dimple Hayathi : ಟಾಲಿವುಡ್ನಲ್ಲಿ ಕ್ರೇಜಿ ಹೀರೋಯಿನ್ ಆಗಿ ಹೊರಹೊಮ್ಮುತ್ತಿರುವ ಗ್ಲಾಮರ್ ಬ್ಯೂಟಿ ಡಿಂಪಲ್ ಹಯಾತಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.. ಈ ಕುರಿತು ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಚಾರ ತಿಳಿದ ಅವರ ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದಾರೆ.. ಅಸಲಿಗೆ ಏನಾಯ್ತು..? ಬನ್ನಿ ನೋಡೋಣ..
ಡಿಂಪಲ್ ಹಯಾತಿ ಕಳೆದ ವರ್ಷ ʼರಾಮ ಬಾಣʼ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದರಲ್ಲಿ ಗೋಪಿಚಂದ್ ನಾಯಕನಾಗಿ ನಟಿಸಿದ್ದಾರೆ. ಆದರೆ ಈ ಸಿನಿಮಾದ ನಂತರ ಡಿಂಪಲ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ
ಈ ವರ್ಷ ಅವರ ಒಂದು ಸಿನಿಮಾ ಕೂಡ ಬಿಡುಗಡೆಯಾಗಿಲ್ಲ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸಿನಿಮಾದ ಅಪ್ಡೇಟ್ಗಳನ್ನು ನೀಡುತ್ತಿಲ್ಲ..
ಇತ್ತೀಚೆಗಷ್ಟೇ ಈ ಚೆಲುವೆ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ತಿಳಿದು ಬಂದಿದೆ. ಈ ಕಾರಣದಿಂದಾಗಿ, 30 ದಿನಗಳ ವರೆಗೆ ಬೆಡ್ ರೆಸ್ಟ್ ಮಾಡಬೇಕಾಗಿ ಬಂತು.
ಈ ಕುರಿತು ಪೋಸ್ಟ್ ಮಾಡಿರುವ ನಟಿ, ಹಾರ್ಮೋನ್ ಅಸಮತೋಲನದಿಂದ ನಾನು ಸಾಕಷ್ಟು ತೂಕವನ್ನು ಹೆಚ್ಚಿಸಿಕೊಂಡೆ, ಅದು ತನ್ನ ಆರೋಗ್ಯವನ್ನು ಸಂಪೂರ್ಣವಾಗಿ ಹಾಳುಮಾಡಿದೆ ಎಂದು ತಿಳಿಸಿದ್ದಾರೆ.
ಡಿಂಪಲ್ ಭುಜ ನೋವು, ಕಾಲು ನೋವು, ಸೊಂಟ ನೋವು ಮತ್ತಿತರ ಸಮಸ್ಯೆಗಳನ್ನು ಎದುರಿಸಿದ್ದರು ಎನ್ನಲಾಗಿದೆ.
2017 ರಲ್ಲಿ ತೆರೆಕಂಡ ಗಲ್ಫ್ ಚಿತ್ರದ ಮೂಲಕ ಡಿಂಪಲ್ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.
ಡಿಂಪಲ್ 2019 ರಲ್ಲಿ ಗದ್ದಲಕೊಂಡ ಗಣೇಶ್ ಚಿತ್ರದ ಜರ್ರಾ ಜರ್ರಾ ಹಾಡಿನ ಮೂಲಕ ಖ್ಯಾತಿಯನ್ನು ಗಳಿಸಿದರು.