ಡಿವೋರ್ಸ್‌ ನಂತರ ಬಿಗ್‌ಬಾಸ್‌ ಮನೆಗೆ ಸ್ಮಾರ್ಟ್‌ ಆಗಿ ಎಂಟ್ರಿ ಕೊಟ್ಟ ಶಿಶಿರ್‌ ಶಾಸ್ತ್ರಿ ಅವರ ಮಾಜಿ ಪತ್ನಿ ಯಾರು ಗೊತ್ತಾ? ಈಕೆ ಕೂಡ ಫೇಮಸ್‌ ನಟಿ

Bigg Boss Kannada 11 8th Contestant: ಕನ್ನಡ ಕಿರುತೆರೆಯಲ್ಲಿ ಮಿಂಚಿ ಸಿಕ್ಕಾಪಟ್ಟೆ ಹೆಸರು ಗಳಿಸಿರುವ ನಟ ಶಿಶಿರ್‌ ಶಾಸ್ತ್ರಿ ಸದ್ಯ ಬಿಗ್‌ ಬಾಸ್‌ ಮನೆಯೊಳಗೆ ಕಾಲಿಟ್ಟಿದ್ದಾರೆ. ಗೆಲ್ಲಲೇಬೇಕೆಂಬ ಹಠ ತೊಟ್ಟು ದೊಡ್ಮನೆಗೆ ಕಾಲಿಟ್ಟಿರುವ ಈ ನಟ ಹಲವು ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಕನ್ನಡ ಕಿರುತೆರೆಯಲ್ಲಿ ಮಿಂಚಿ ಸಿಕ್ಕಾಪಟ್ಟೆ ಹೆಸರು ಗಳಿಸಿರುವ ನಟ ಶಿಶಿರ್‌ ಶಾಸ್ತ್ರಿ ಸದ್ಯ ಬಿಗ್‌ ಬಾಸ್‌ ಮನೆಯೊಳಗೆ ಕಾಲಿಟ್ಟಿದ್ದಾರೆ. ಗೆಲ್ಲಲೇಬೇಕೆಂಬ ಹಠ ತೊಟ್ಟು ದೊಡ್ಮನೆಗೆ ಕಾಲಿಟ್ಟಿರುವ ಈ ನಟ ಹಲವು ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

2 /8

ಗ್ರ್ಯಾಂಡ್‌ ಓಪನಿಂಗ್‌ ದಿನ ಕಿಚ್ಚ ಸುದೀಪ್‌ ಅವರ ಜೊತೆ ಮಾತನಾಡಿದ್ದ ಶಿಶಿರ್‌, "ಬಿಗ್‌ಬಾಸ್‌ಗೆ ಬರಬೇಕೆನ್ನುವುದು ತುಂಬಾ ವರ್ಷಗಳ ಕನಸು. ಅದು ಇದೀಗ ನನಸಾಗುತ್ತಿದೆ. ನನ್ನ ಪಾಲಿಗೆ ಬಿಗ್‌ ಬಾಸ್‌ ಎಂಬುದು ಒಂದಷ್ಟು ವರ್ಷಗಳ ಕೆಲಸದ ಮತ್ತು ಶ್ರಮದ ಫಲ ಎಂದನಿಸುತ್ತದೆ. ಕಳೆದ 13 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದೇನೆ. ಇದೀಗ ಆ 13 ವರ್ಷಗಳ ಪ್ರತಿಫಲವಾಗಿ ನನಗೆ ‘ಬಿಗ್ ಬಾಸ್’ ವೇದಿಕೆ ಸಿಕ್ಕಿದೆ" ಎಂದು ಹೇಳಿದ್ದರು.

3 /8

ಅದರ ಜೊತೆಗೆ "ಅಡುಗೆಯಲ್ಲಿ ವೆಜ್ ಮತ್ತು ನಾನ್ ವೆಜ್ ಮಾಡುತ್ತೇನೆ, ನನಗೆ ಅಡುಗೆ ಮಾಡೋದು ನನ್ನ ಸ್ಟ್ರೆಸ್ ಬಸ್ಟರ್ ಇದ್ದಂತೆ. ಹಾಗೆಯೇ ತುಂಬಾ ಟ್ರಾವೆಲ್ ಮಾಡ್ತೀನಿ’’ ಎಂದು  ಶಿಶಿರ್ ಶಾಸ್ತ್ರಿ ಹೇಳಿದ್ದಾರೆ.  

4 /8

ಅಂದಹಾಗೆ ಇವರು ಬಿಗ್‌ಬಾಸ್‌ ಪ್ರವೇಶ ಮಾಡುತ್ತಿದ್ದಂತೆ ಇವರ ಕುರಿತಾದ ಕೆಲ ವಿಚಾರಗಳು ಮುನ್ನೆಲೆಗೆ ಬಂದಿದ್ದು, ಅದರಲ್ಲಿ ಅವರ ಮದುವೆ ಮತ್ತು ಡಿವೋರ್ಸ್‌ ವಿಚಾರವೂ ಒಂದಾಗಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಅನೇಕ ವರದಿಗಳು ಹರಿದಾಡುತ್ತಿದ್ದು, ಅದರ ಅನ್ವಯ ಕೆಲ ಮಾಹಿತಿಗಳನ್ನು ಈ ಸುದ್ದಿಯಲ್ಲಿ ಉಲ್ಲೇಖ ಮಾಡಲಾಗಿದೆ.  

5 /8

ದೊಡ್ಮನೆಗೆ ಕಾಲಿಡುವಾಗ, ಶಿಶಿರ್‌ ಅವರು "ನನಗೆ 33 ವರ್ಷ ಆಯ್ತು. ಮದುವೆ ಆಗಿಲ್ಲ. ಒಳ್ಳೆ ಮಜಾ ಮಾಡೋಣ ‘ಬಿಗ್ ಬಾಸ್’ ಮನೆಗೆ ಹೋಗಿ.. ಏನಾದರೂ ಸಾಧಿಸೋಣ ಅಂತ ಬರ್ತಿದ್ದೇನೆ" ಎಂದು ಹೇಳಿದ್ದರು. ಆದರೆ ಇವರಿಗೆ ಈಗಾಗಲೇ ನಟಿಯೊಬ್ಬರ ಜೊತೆ ವಿವಾಹವಾಗಿದ್ದು ಇಬ್ಬರೂ ಡಿವೋರ್ಸ್‌ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.  

6 /8

ಅಷ್ಟಕ್ಕೂ ಆ ನಟಿ ಬೇರಾರು ಅಲ್ಲ, ಕೋಳಿ ರಮ್ಯಾ. ʼಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫ್‌ʼ ಎಂಬ ರಿಯಾಲಿಟಿ ಶೋನಲ್ಲಿ ಕೋಳಿ ಹಿಡಿಯುವ ಟಾಸ್ಕ್‌ ಅನ್ನು ಅದ್ಭುತವಾಗಿ ಆಡಿ ಗೆದ್ದಿದ್ದ ರಮ್ಯಾ ಅದಾದ ಬಳಿಕ ಕೋಳಿ ರಮ್ಯಾ ಎಂದೇ ಹೆಸರು ಪಡೆದರು.  

7 /8

ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತಿರುವ ವರದಿಯ ಅನುಸಾರ, ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದ ಕಾರಣ ಡಿವೋರ್ಸ್‌ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಕೋಳಿ ರಮ್ಯಾ ಡ್ಯಾನ್ಸರ್‌ ಒಬ್ಬರ ಜೊತೆ ಇದೀಗ ಪ್ರೀತಿಯಲ್ಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯಕ್ಕೆ ಸಮೀಪ ಎಂಬುದು ತಿಳಿದುಬಂದಿಲ್ಲ.  

8 /8

ಸೂಚನೆ: ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾದ ವರದಿಗಳ ಅನುಸಾರ ಈ ಸುದ್ದಿಯನ್ನು ತೆಗೆದುಕೊಳ್ಳಲಾಗಿದೆ. ಈ ವರದಿಯನ್ನು ಜೀ ಕನ್ನಡ ನ್ಯೂಸ್‌ ಅನುಮೋದಿಸುವುದಿಲ್ಲ. ಜೊತೆಗೆ ಖಚಿತಪಡಿಸುವುದಿಲ್ಲ.