Sarfaraz Khan on selectors: 25ರ ಹರೆಯದ ಡ್ಯಾಶಿಂಗ್ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಗೆ ಈ ಬಾರಿಯೂ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವಕಾಶ ಸಿಕ್ಕಿಲ್ಲ. ಅವರು ಆಯ್ಕೆಗಾರರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ vs ವೆಸ್ಟ್ ಇಂಡೀಸ್: ಭಾರತದ ವೆಸ್ಟ್ ಇಂಡೀಸ್ ಪ್ರವಾಸವು ಜುಲೈ 12ರಿಂದ 2 ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಈ 2 ಟೆಸ್ಟ್ ಪಂದ್ಯಗಳಿಗೆ ಕೆಲವು ಯುವ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ. ಆದರೆ 25ರ ಹರೆಯದ ಡ್ಯಾಶಿಂಗ್ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಗೆ ಈ ಬಾರಿಯೂ ಅವಕಾಶ ಸಿಕ್ಕಿಲ್ಲ. ಹೀಗಿರುವಾಗ ಅವರು ಆಯ್ಕೆಗಾರರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ದೇಶೀಯ ಕ್ರಿಕೆಟ್‍ನಲ್ಲಿ ಸಾಕಷ್ಟು ರನ್ ಮಳೆ ಸುರಿಸಿರುವ ಸರ್ಫರಾಜ್ ಖಾನ್ ಮೊದಲ ಅವಕಾಶಕ್ಕಾಗಿ ಇನ್ನೂ ಕಾಯಬೇಕಾಗಿದೆ. ವೆಸ್ಟ್ ಇಂಡೀಸ್ ಸರಣಿಗೆ ಭಾರತ ತಂಡ ಆಯ್ಕೆಯಾದ 1 ದಿನದ ನಂತರ ಸರ್ಫರಾಜ್ Instagramನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ.
ಸರ್ಫರಾಜ್ ಖಾನ್ ಇನ್ಸ್ಟಾಗ್ರಾಮ್‍ನಲ್ಲಿ ವಿಡಿಯೋ ಸ್ಟೋರಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸರ್ಫರಾಜ್ ಕಳೆದ ರಣಜಿ ಟ್ರೋಫಿ ಋತುವಿನ ತಮ್ಮ ಬ್ಯಾಟಿಂಗ್ ಹೈಲೈಟ್ಸ್ ಹಾಕಿದ್ದಾರೆ. ಈ ಪೋಸ್ಟ್ ಗೆ ಅವರು ‘One love’ ಎಂದು ಕ್ಯಾಪ್ಶನ್ ಬರೆದಿದ್ದಾರೆ. Sarfaraz Khan's latest Instagram Story!#SarfarazKhan #indvwi #TeamIndia pic.twitter.com/dzLTfifqZC — Mohid Khan (@mohidkhan1619) June 25, 2023
ಸರ್ಫರಾಜ್ ಖಾನ್ ಕಳೆದ ರಣಜಿ ಟ್ರೋಫಿ ಋತುವಿನ 9 ಇನ್ನಿಂಗ್ಸ್‌ಗಳಲ್ಲಿ 92.66 ಸರಾಸರಿಯಲ್ಲಿ 556 ರನ್ ಗಳಿಸಿದ್ದರು. ಈ ವೇಳೆ ಸರ್ಫರಾಜ್ 3 ಶತಕ ಹಾಗೂ 1 ಅರ್ಧ ಶತಕ ಸಿಡಿಸಿದ್ದರು.
ಸರ್ಫರಾಜ್ ಖಾನ್ ಇಲ್ಲಿಯವರೆಗೆ 37 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 79.65 ಸರಾಸರಿಯಲ್ಲಿ 3,505 ರನ್ ಗಳಿಸಿದ್ದಾರೆ. 26 ಲಿಸ್ಟ್ A ಪಂದ್ಯಗಳಲ್ಲಿ ಅವರು 39.08 ಸರಾಸರಿಯಲ್ಲಿ 469 ರನ್ ಗಳಿಸಿದ್ದಾರೆ.
ಸರ್ಫರಾಜ್ ಖಾನ್ 88 ಟಿ-20 ಪಂದ್ಯಗಳನ್ನಾಡಿದ್ದು, 1,124 ರನ್ ಗಳಿಸಿದ್ದಾರೆ. ಸರ್ಫರಾಜ್ ಖಾನ್ ಐಪಿಎಲ್ 2023ರಲ್ಲಿ ತಮ್ಮ ಛಾಪು ಮೂಡಿಸಲು ವಿಫಲರಾಗಿದ್ದರು.