PPF Investment: ಪಿಪಿಎಫ್ ಅಥವಾ ಸಾರ್ವಜನಿಕ ಭವಿಷ್ಯ ನಿಧಿಯು ಕೇಂದ್ರ ಸರ್ಕಾರವು ನಡೆಸುವ ಸರ್ಕಾರಿ ಹೂಡಿಕೆ ಯೋಜನೆಯಾಗಿದೆ. ಇದು ಸರ್ಕಾರಿ ಯೋಜನೆಯಾಗಿರುವುದರಿಂದ ನಿಮ್ಮ ಹಣ ಇಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
PPF Investment: ಭಾರತೀಯ ಷೇರು ಮಾರುಕಟ್ಟೆ ದೊಡ್ಡ ಕುಸಿತಕ್ಕೆ ಸಾಕ್ಷಿಯಾಗುತ್ತಿದೆ. ಷೇರು ಮಾರುಕಟ್ಟೆಯ ನಿರಂತರ ಕುಸಿತದಿಂದ ಹೂಡಿಕೆದಾರರು ಮಾತ್ರವಲ್ಲದೆ ಮ್ಯೂಚುವಲ್ ಫಂಡ್ ಹೂಡಿಕೆದಾರರು ಸಹ ಕೈಸುಟ್ಟುಕೊಳ್ಳುತ್ತಿದ್ದಾರೆ. ಷೇರು ಮಾರುಕಟ್ಟೆಯ ನಿರಂತರ ಕುಸಿತದಿಂದ ಅನೇಕ ಹೂಡಿಕೆದಾರರಲ್ಲಿ ಭಯದ ವಾತಾವರಣ ಮೂಡಿದೆ. ಷೇರುಪೇಟೆಯ ನಿರಂತರ ಕುಸಿತದ ಕೆಟ್ಟ ಪರಿಣಾಮ ಸಣ್ಣ ಹೂಡಿಕೆದಾರರ ಮೇಲೂ ಪರಿಣಾಮ ಬೀರಿದೆ. ಮಾರುಕಟ್ಟೆಗೆ ಹೊಸದಾಗಿ ಬಂದವರು ಸಹ ಈ ಕುಸಿತದಿಂದ ಟೆನ್ಶನ್ ಆಗಿದ್ದಾರೆ. ಷೇರು ಮಾರುಕಟ್ಟೆಯ ಅಪಾಯಗಳಿಂದ ದೂರವಿರುವ ಸುರಕ್ಷಿತ ಹೂಡಿಕೆ ಯೋಜನೆಗಳ ಬಗ್ಗೆ ನೀವು ಹುಡುಕುತ್ತಿದ್ದರೆ, ಖಾತರಿಯೊಂದಿಗೆ ಸ್ಥಿರ ಲಾಭ ಸಿಗುವ PPF ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಉತ್ತಮ ಆಯ್ಕೆಯಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪಿಪಿಎಫ್ ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಕೇಂದ್ರ ಸರ್ಕಾರವು ನಡೆಸುವ ಸರ್ಕಾರಿ ಹೂಡಿಕೆ ಯೋಜನೆಯಾಗಿದೆ. ಇದು ಸರ್ಕಾರಿ ಯೋಜನೆಯಾಗಿದ್ದು, ನಿಮ್ಮ ಹಣ ಇಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಪ್ರಸ್ತುತ ಪಿಪಿಎಫ್‌ನಲ್ಲಿ ನಿಮಗೆ ವಾರ್ಷಿಕ ಶೇ.7.1ರಷ್ಟು ಬಡ್ಡಿದರ ಸಿಗುತ್ತದೆ.
ದೇಶದ ಯಾವುದೇ ಬ್ಯಾಂಕಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಇದಲ್ಲದೆ, ನೀವು ಅಂಚೆ ಕಚೇರಿಯಲ್ಲಿಯೂ ಪಿಪಿಎಫ್ ಅನ್ನು ಪ್ರಾರಂಭಿಸಬಹುದು. ಈ ಯೋಜನೆಯಡಿಯಲ್ಲಿ, ನೀವು ವರ್ಷಕ್ಕೆ ಕನಿಷ್ಠ 500 ರೂ. ಹೂಡಿಕೆ ಮಾಡಬೇಕಾಗುತ್ತದೆ. ಪಿಪಿಎಫ್‌ನಲ್ಲಿ ಒಂದು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ. ಠೇವಣಿ ಇಡಬಹುದು. ನೀವು ಈ ಯೋಜನೆಯಲ್ಲಿ ಒಟ್ಟು ಮೊತ್ತ ಮತ್ತು ಕಂತುಗಳಲ್ಲಿ ಹೂಡಿಕೆ ಮಾಡಬಹುದು.
ಪಿಪಿಎಫ್ ಯೋಜನೆಯು 15 ವರ್ಷಗಳಲ್ಲಿ ಪಕ್ವವಾಗುತ್ತದೆ. ಈ ಯೋಜನೆಯಲ್ಲಿ ನೀವು ಪ್ರತಿ ವರ್ಷ 1 ಲಕ್ಷ ರೂ. ಠೇವಣಿ ಇಟ್ಟರೆ, ನಿಮಗೆ ಒಟ್ಟು 27,12,139 ರೂ.ಗಳು ಮೆಚ್ಯೂರಿಟಿ ಗ್ಯಾರಂಟಿಯೊಂದಿಗೆ ಸಿಗುತ್ತವೆ. ಇದರಲ್ಲಿ ನಿಮ್ಮ 15 ಲಕ್ಷ ರೂ. ಹೂಡಿಕೆ ಮತ್ತು 12,12,139 ರೂ.ಗಳ ಸ್ಥಿರ ಬಡ್ಡಿ ಸಿಗುತ್ತದೆ.
ದೇಶದ ಯಾವುದೇ ನಾಗರಿಕರು ಈ ಸರ್ಕಾರಿ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. ನೀವು ಬಯಸಿದರೆ ನಿಮ್ಮ ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಯಾವುದೇ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಪಿಪಿಎಫ್ ಖಾತೆಯನ್ನು ತೆರೆಯಬಹುದು.
ಇಂದು ಜನರಿಗೆ ಹಲವಾರು ಹೂಡಿಕೆ ಆಯ್ಕೆಗಳು ಲಭ್ಯವಿದ್ದು, ಅನೇಕ ಮ್ಯೂಚುವಲ್ ಫಂಡ್‌ಗಳು ಹಾಗೂ ಸರ್ಕಾರಿ ಯೋಜನೆಗಳಲ್ಲಿ ನೀವು ಹಣ ಹೂಡಬಹುದು. ಕೆಲವರು ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡಲು ಬಯಸಿದರೆ ಇನ್ನು ಕೆಲವರು ಷೇರು ಮಾರುಕಟ್ಟೆ ಭಯದಿಂದ ಮ್ಯೂಚುವಲ್ ಫಂಡ್ ಬೇಡವೆಂದು ದೂರವಿರುತ್ತಾರೆ. ಆದರೆ ಯಾವುದೇ ಅಪಾಯವಿಲ್ಲದೆ ಹೂಡಿಕೆ ಮಾಡಲು ಸರ್ಕಾರಿ ಯೋಜನೆಗಳು ಉತ್ತಮ ಆಯ್ಕೆಯಾಗಿವೆ.
ಆಕರ್ಷಕ ಆದಾಯದ ಪ್ರಯೋಜನ ಪಡೆಯುವುದರ ಜೊತೆಗೆ ದೀರ್ಘಾವಧಿಯವರೆಗೆ ತಮ್ಮ ಉಳಿತಾಯದ ಹಣವನ್ನ ಕಾಪಾಡಿಕೊಳ್ಳಲು ಬಯಸುವವರಿಗೆ ಈ ಯೋಜನೆ ವಿಶೇಷವಾಗಿ ಸೂಕ್ತವಾಗಿರುತ್ತದೆ. ಅಂದಹಾಗೆ ಈ ಪಿಪಿಎಫ್‌ಅನ್ನು ಹಣಕಾಸು ಸಚಿವಾಲಯದಡಿ ನ್ಯಾಷನಲ್ ಸೇವಿಂಗ್ಸ್ ಇನ್ಸ್ಟಿಟ್ಯೂಟ್ 1968ರಲ್ಲಿ ಪರಿಚಯಿಸಲಾಯಿತು. ಇದು ಹೂಡಿಕೆದಾರರಿಗೆ ಕಾಲಾನಂತರದಲ್ಲಿ, ಪ್ರಾಥಮಿಕವಾಗಿ ನಿವೃತ್ತಿಗಾಗಿ ದೊಡ್ಡ ಮೊತ್ತದ ಕಾರ್ಪಸ್‌ಗೆ ಅನುವು ಮಾಡಿಕೊಡುತ್ತದೆ.