Harmful Vegetables: ತರಕಾರಿಗಳು ಮುಖ್ಯವಾಗಿ ನಮ್ಮ ದೈನಂದಿನ ಆಹಾರಗಳಲ್ಲಿ ಬಳಸುವಂತಹ ವಸ್ತುಗಳು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇವುಗಳನ್ನು ಸೇವಿಸುವುದರಿಂದ ದೇಹವು ಸದೃಢವಾಗುತ್ತದೆ ಮತ್ತು ರೋಗಗಳ ಅಪಾಯವು ದೂರ ಉಳಿಯುತ್ತದೆ. ಆರೋಗ್ಯಕರವಾಗಿರಲು, ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಆದರೆ ಕೆಲವು ತರಕಾರಿಗಳನ್ನು ತಿನ್ನುವುದು ಮಾರಕವಾಗಬಹುದು. ಎಲೆಕೋಸು ಸೇರಿದಂತೆ ಕೆಲವು ತರಕಾರಿಗಳಲ್ಲಿ ಇರುವ ಕೀಟಗಳು ದೇಹದಲ್ಲಿ ಸಮಸ್ಯೆಗಳ ಸೃಷ್ಟಗೆ ಕಾರಣವಾಗಬಹುದು.
ಹೂಕೋಸುಗಳಲ್ಲಿ ಟೇಪ್ ವರ್ಮ್ ಇರುತ್ತದೆ. ಅವುಗಳು ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ. ಈ ಟೇಪ್ ವರ್ಮ್ಗಳು ರಕ್ತದ ಮೂಲಕ ಮೆದುಳನ್ನೂ ತಲುಪುತ್ತವೆ. ಹೀಗೆ ಆದಲ್ಲಿ ಇದು ಮೆದುಳು, ಸ್ನಾಯುಗಳು ಮತ್ತು ಯಕೃತ್ತನ್ನು ಹಾನಿಗೊಳಿಸುತ್ತದೆ ಮತ್ತು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಕೆಸುವಿನ ಎಲೆಗಳನ್ನು ಅನೇಕ ಜನರು ಇಷ್ಟಪಟ್ಟು ತಿನ್ನುತ್ತಾರೆ. ದಕ್ಷಿಣ ಭಾರತದಲ್ಲಿ ಈ ಎಲೆಯಿಂದ ಪತ್ರೊಡೆ ಎಂಬ ಖಾದ್ಯವನ್ನು ತಯಾರು ಮಾಡಲಾಗುತ್ತದೆ. ಆದರೆ ಇದರಲ್ಲಿ ಕಣ್ಣಿಗೆ ಕಾಣದ ಕೀಟಗಳು ಇರಬಹುದು. ಇವುಗಳ ಮೂಲಕ ಮಾರಕ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಬದನೆಕಾಯಿ ಬೀಜಗಳಲ್ಲಿ ಟೇಪ್ ವರ್ಮ್ಗಳು ಇರಬಹುದು. ಇವುಗಳಿಂದಾಗಿ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು. ಸರಿಯಾಗಿ ಬೇಯಿಸಿದ ಬಳಿಕ ಬದನೆ ಪದಾರ್ಥಗಳನ್ನು ಸೇವಿಸಿದರೆ ಉತ್ತಮ.
ಪರ್ವಾಲ್ ಎಂದರೆ ತೊಂಡೆಕಾಯಿಯಂತೆ ಕಾಣುವ ಒಂದು ತರಕಾರಿ. ದಪ್ಪ ಸಿಪ್ಪೆಯುಳ್ಳ ಈ ತರಕಾರಿ ರುಚಿಕರವಾಗಿರುತ್ತದೆ. ಆದರೆ ಇದರ ಒಳಗೆ ಟೇಪ್ ವರ್ಮ್ಗಳು ಸಹ ಇರುತ್ತವೆ. ಪರ್ವಾಲ್ ಬೀಜಗಳನ್ನು ಬೇರ್ಪಡಿಸಿ ನಂತರ ಈ ತರಕಾರಿಯನ್ನು ಬೇಯಿಸಿ ಸೇವಿಸಿದರೆ ಒಳಿತು.
ತರಕಾರಿಗಳ ಹೊರತಾಗಿ ನೂಡಲ್ಸ್, ಫ್ರೈಡ್ ರೈಸ್ನಂತಹ ಅನೇಕ ಭಕ್ಷ್ಯಗಳನ್ನು ತಯಾರಿಸಲು ಕ್ಯಾಪ್ಸಿಕಂ ಅನ್ನು ಬಳಸಲಾಗುತ್ತದೆ. ಅದರಲ್ಲಿರುವ ಟೇಪ್ ವರ್ಮ್ ಮೆದುಳಿನ ಕಾಯಿಲೆಗೆ ಕಾರಣವಾಗಬಹುದು.