Weight Loss: ತೂಕ ಇಳಿಕೆ, ಬೆಲ್ಲಿ ಫ್ಯಾಟ್ ಕರಗಿಸಬೇಕು ಎಂದ ಕೂಡಲೇ ಗಂಟೆಗಟ್ಟಲೆ ಜಿಮ್‌ನಲ್ಲಿ ಬೆವರು ಹರಿಸಬೇಕು ಎಂದು ಯೋಚಿಸಬೇಡಿ.
Weight Loss Tips: ನೀವು ಜಿಮ್ ಮೆಟ್ಟಿಲು ಹತ್ತದೆಯೂ ಆರೋಗ್ಯಕರವಾಗಿ ಒಂದೇ ವಾರದಲ್ಲಿ ಒಂದರಿಂದ ಎರಡು ಕೆಜಿಯಷ್ಟು ತೂಕ ಇಳಿಸಿಕೊಳ್ಳಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕಳಪೆ ಜೀವನಶೈಲಿ, ಗಂಟೆಗಟ್ಟಲೆ ಲ್ಯಾಪ್ಟಾಪ್ ಮುಂದೆ ಕುಳಿತುಕೊಳ್ಳುವುದರಿಂದ ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಬಹುದೊಡ್ಡ ಪಿಡುಗಾಗಿ ಕಾಡುತ್ತಿದೆ.
ತೂಕ ಇಳಿಕೆಗೆ ಜಿಮ್‌ನಲ್ಲಿ ಹೋಗಿ ಗಂಟೆಗಟ್ಟಲೆ ಬೆವರು ಸುರಿಸಲೇಬೇಕು ಎಂದೇನಿಲ್ಲ. ಕೆಲವು ಒಳ್ಳೆಯ ಅಭ್ಯಾಸಗಳನ್ನು ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳುವ ಮೂಲಕವೂ ಆರೋಗ್ಯಕರವಾಗಿ ಒಂದೇ ವಾರದಲ್ಲಿ ಒಂದೆರಡು ಕೆಜಿಯಷ್ಟು ತೂಕ ಇಳಿಸಿಕೊಳ್ಳಬಹುದು.
ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಕನಿಷ್ಠ 1 ಗಂಟೆ ತಪ್ಪದೆ ವಾಕ್ ಮಾಡುವುದು ಒಳ್ಳೆಯ ಅಭ್ಯಾಸ. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ತೂಕ ಕಳೆದುಕೊಳ್ಳಬಹುದು.
ನಿಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆ ಸೇವನೆಯನ್ನು ತಪ್ಪಿಸಿ. ಇದು ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ದೇಹಕ್ಕೆ ಪ್ರೋಟೀನ್ ಕೂಡ ಅಗತ್ಯವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಪನೀರ್, ಮೊಸರು, ಬೇಳೆಕಾಲುಗಳನ್ನು ಸೇವಿಸಿ. ಇದು ಅನಗತ್ಯವಾಗಿ ಬೇರೆ ಆಹಾರಗಳ ಸೇವನೆಯನ್ನು ತಪ್ಪಿಸಲು ಸಹಕಾರಿಯೂ ಆಗಿದೆ.
ಕೆಲವರಿಗೆ ಟೀ/ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಇವುಗಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎನ್ನುವವರು ಇದ್ದಾರೆ. ಆದರೆ, ನೀವು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿದ್ದರೆ ಟೀ/ಕಾಫಿ ಬದಲಿಗೆ ಗ್ರೀನ್ ಟೀ ಸೇವಿಸಿ.
ನೀವು ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದರೆ ನಿಮ್ಮ ರಾತ್ರಿ ಊಟವನ್ನು ಸಂಜೆ 7ಗಂಟೆಗೆ ಮೊದಲೇ ಮುಗಿಸಿ. ಬೆಳಿಗ್ಗೆ 7ಗಂಟೆವರೆಗೆ ಕೇವಲ ನೀರು ಬಿಟ್ಟು ಏನನ್ನೂ ತೆಗೆದುಕೊಳ್ಳಬೇಡಿ. ಇದು ತೂಕ ಇಳಿಕೆಗೆ ಪರಿಣಾಮಕಾರಿ ಕೊಡುಗೆ ನೀಡುತ್ತದೆ.
ತೂಕ ಇಳಿಕೆಯಲ್ಲಿ ನಿಮ್ಮ ನಿದ್ರೆಯೂ ಪ್ರಮುಖ ಪಾತ್ರ ವಹಿಸುತ್ತದೆ. ದೈನಂದಿನ 7-8ಗಂಟೆಗಳ ನಿದ್ರೆಯನ್ನು ಖಚಿತಪಡಿಸಿಕೊಳ್ಳಿ. ದಿನ ಇಷ್ಟು ಫಾಲೋ ಮಾಡಿದರೆ ಸಾಕು ಕೇವಲ ಒಂದೇ ವಾರದಲ್ಲಿ ಪರಿಣಾಮವನ್ನು ಕಾಣಬಹುದು.