Multibagger Stocks: ಹೂಡಿಕೆದಾರರಿಗೆ ಬಂಪರ್ ರಿಟರ್ನ್ ನೀಡಿದ ಷೇರುಗಳು

Multibagger Railway Stocks: ರೈಲ್ವೆ ಷೇರುಗಳಂತೂ ಹೂಡಿಕೆದಾರರಿಗೆ ಮೂರ್ನಾಲ್ಕು ಪಟ್ಟು ರಿಟರ್ನ್ ನೀಡಿವೆ. ಕಡಿಮೆ ಮೊತ್ತದ ಷೇರುಗಳಲ್ಲಿ ಹಣ ತೊಡಗಿಸಿದವರು ಇಂದು ಭರ್ಜರಿ ಲಾಭ ಕಂಡಿದ್ದಾರೆ.

ನವದೆಹಲಿ: ಕಳೆದ 1 ವರ್ಷದಲ್ಲಿ ಹಲವಾರು ಷೇರುಗಳು ಹೂಡಿಕೆದಾರರಿಗೆ ಬಂಪರ್ ಲಾಭ ನೀಡಿವೆ. ಪ್ರಧಾನಿ ಮೋದಿ ಹೇಳಿದ ಆ ಒಂದೇ ಒಂದು ಮಾತಿನಿಂದ ಕೇಂದ್ರ ಸರ್ಕಾರಿ ಒಡೆತನದಲ್ಲಿರುವ ಷೇರುಗಳು ಏರುಗತಿಯಲ್ಲಿವೆ. ಹೂಡಿಕೆದಾರರ ಹಣ ದುಪ್ಪಟ್ಟಾಗಿವೆ. ರೈಲ್ವೆ ಷೇರುಗಳಂತೂ ಹೂಡಿಕೆದಾರರಿಗೆ ಮೂರ್ನಾಲ್ಕು ಪಟ್ಟು ರಿಟರ್ನ್ ನೀಡಿವೆ. ಕಡಿಮೆ ಮೊತ್ತದ ಷೇರುಗಳಲ್ಲಿ ಹಣ ತೊಡಗಿಸಿದವರು ಇಂದು ಭರ್ಜರಿ ಲಾಭ ಕಂಡಿದ್ದಾರೆ. ಕೇಂದ್ರ ಸರ್ಕಾರದ ಟಾಪ್ 5 ಷೇರುಗಳು ಕಳೆದ 1 ವರ್ಷದಲ್ಲಿ ನೀಡಿದ ಲಾಭದ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ರೈಲ್ವೆ ವಿಕಾಸ ನಿಗಮ ಷೇರು ಕಳೆದ 1 ವರ್ಷದಲ್ಲಿ ಹೂಡಿಕೆದಾರರಿಗೆ ಬಂಪರ್ ಲಾಭ ನೀಡಿದೆ. 1 ವರ್ಷದಲ್ಲಿ ಈ ಷೇರು ಬರೋಬ್ಬರಿ 376.68% ರಿಟರ್ನ್ ನೀಡಿದೆ. ಕಳೆದೊಂದು ವಾರದಲ್ಲಿ ಈ ಷೇರು 21.30% ಮತ್ತು 1 ತಿಂಗಳಿನಲ್ಲಿ ಶೇ.26.09% ಲಾಭ ನೀಡಿದೆ.

2 /5

ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ (IRFC) ಷೇರು ಕಳೆದ 1 ವರ್ಷದಲ್ಲಿ ಹೂಡಿಕೆದಾರರಿಗೆ 2 ಪಟ್ಟು ಹೆಚ್ಚು ಲಾಭ ನೀಡಿದೆ. ಕಳೆದೊಂದು ವರ್ಷದಲ್ಲಿ 222.54%, ಕಳೆದ 5 ದಿನದಲ್ಲಿ 44.64% ಮತ್ತು ಕಳೆದೊಂದು ತಿಂಗಳಿನಲ್ಲಿ 45.23% ರಿಟರ್ನ್ ನೀಡಿದೆ.

3 /5

ರೈಲ್‌ಟೆಲ್ ಕಾರ್ಪೊರೇಶನ್ ಆಫ್ ಇಂಡಿಯಾ ಷೇರು ಸಹ ಹೂಡಿಕೆದಾರರಿಗೆ ಭರ್ಜರಿ ಲಾಭ ಮಾಡಿಕೊಟ್ಟಿದೆ. ಕಳೆದೊಂದು ವರ್ಷದಲ್ಲಿ ಈ ಷೇರು 126.27%, ಕಳೆದ 5 ದಿನದಲ್ಲಿ ಶೇ.17.05% ಮತ್ತು ಕಳೆದೊಂದು ತಿಂಗಳಿನಲ್ಲಿ 32.95% ಲಾಭವನ್ನು ನೀಡಿದೆ.

4 /5

ರೈಟ್ಸ್ ಲಿಮಿಟೆಡ್ ಷೇರು ಕೂಡ ಹೂಡಿಕೆದಾರರಿಗೆ ಬಂಪರ್ ಲಾಭವನ್ನು ನೀಡಿದೆ. ಈ ಷೇರು ಕಳೆದೊಂದು ವರ್ಷದಲ್ಲಿ 71.67%, ಕಳೆದ 5 ದಿನಗಳಲ್ಲಿ 7.46% ಮತ್ತು ಕಳೆದೊಂದು ತಿಂಗಳಿನಲ್ಲಿ 12.06% ಲಾಭವನ್ನು ನೀಡಿದೆ.

5 /5

ಟಿಟಾಗಢ್ ರೈಲ್ ಸಿಸ್ಟಮ್ಸ್ ಷೇರು ಕೂಡ ಹೂಡಿಕೆದಾರರ ಕೈಹಿಡಿದಿದ್ದು, ಭರ್ಜರಿ ಲಾಭ ನೀಡಿದೆ. ಕಳೆದ 1 ವರ್ಷದಲ್ಲಿ ಈ ಷೇರು 76.51%, ಕಳೆದ 5 ದಿನಗಳಲ್ಲಿ 10.75% ಮತ್ತು ಕಳೆದ 1 ತಿಂಗಳಿನಲ್ಲಿ 26.83% ಲಾಭವನ್ನು ನೀಡಿದೆ.