39 ಸಿಕ್ಸರ್, 14 ಬೌಂಡರಿ ಮೂಲಕ ಟಿ20 ಸ್ವರೂಪದಲ್ಲಿ ತ್ರಿಶತಕ ಬಾರಿಸಿದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ? ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾದ ಈ ದಾಂಡಿಗ ಭಾರತದವನೇ...

triple century in T20 Cricket, Mohit Ahlawat: ಟಿ20 ಎಂಬುದು ಎಲ್ಲಾ ಕ್ರಿಕೆಟ್‌ ಸ್ವರೂಪದ ಅತಿ ಚಿಕ್ಕ ಸ್ವರೂಪ. ಕೇವಲ 20 ಓವರ್‌ಗಳಲ್ಲಿ ಮುಕ್ತಾಯಗೊಳ್ಳುವ ಈ ಆಟದಲ್ಲಿ ಮನರಂಜನೆಗೆ ಏನೂ ಕೊರತೆ ಇಲ್ಲ. ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸುರಿಯುವ ಈ ಸ್ವರೂಪದಲ್ಲಿ ಬ್ಯಾಟರ್‌ ವಿಕೆಟ್‌ ಕಾಪಾಡಿಕೊಂಡು ರನ್‌ ಗಳಿಸುವುದೇ ದೊಡ್ಡ ವಿಷಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

1 /7

ಟಿ20 ಎಂಬುದು ಎಲ್ಲಾ ಕ್ರಿಕೆಟ್‌ ಸ್ವರೂಪದಲ್ಲಿ ಅತಿ ಚಿಕ್ಕ ಸ್ವರೂಪ. ಕೇವಲ 20 ಓವರ್‌ಗಳಲ್ಲಿ ಮುಕ್ತಾಯಗೊಳ್ಳುವ ಈ ಆಟದಲ್ಲಿ ಮನರಂಜನೆಗೆ ಏನೂ ಕೊರತೆ ಇಲ್ಲ. ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಸುರಿಯುವ ಈ ಸ್ವರೂಪದಲ್ಲಿ ಬ್ಯಾಟರ್‌ ವಿಕೆಟ್‌ ಕಾಪಾಡಿಕೊಂಡು ರನ್‌ ಗಳಿಸುವುದೇ ದೊಡ್ಡ ವಿಷಯ.  ಕೊಂಚ ಗಮನ ತಪ್ಪಿದರೂ ಸಹ ಔಟ್‌ ಆಗುವ ಸಾಧ್ಯತೆ ಹೆಚ್ಚು. ಇನ್ನು ಈ ಸ್ವರೂಪದಲ್ಲಿ ಅರ್ಧ ಶತಕ ಮತ್ತು ಶತಕ ಬಾರಿಸುವುದೇ ದೊಡ್ಡ ವಿಚಾರ. ಅಂತಹದ್ದರಲ್ಲಿ ಓರ್ವ ಕ್ರಿಕೆಟಿಗ ತ್ರಿಶತಕ ಬಾರಿಸಿದ್ದಾರೆ. ಈ ಸಂದರ್ಭದಲ್ಲಿ 39 ಸಿಕ್ಸರ್‌ ಮತ್ತು 14 ಬೌಂಡರಿಗಳನ್ನು ಈ ಆಟಗಾರ ಬಾರಿಸಿದ್ದರು.

2 /7

ಆ ಆಟಗಾರನ ಹೆಸರು ಮೋಹಿತ್ ಅಹ್ಲಾವತ್. ದೆಹಲಿಯ ಸ್ಥಳೀಯ ಟೂರ್ನಮೆಂಟ್ ಫ್ರೆಂಡ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಫ್ರೆಂಡ್ಸ್ XI ವಿರುದ್ಧ ಮಾವಿ XI ಪರ ಅವರು ಅಜೇಯ 302 ರನ್‌ಗಳ ಇನ್ನಿಂಗ್ಸ್ ಆಡಿದ್ದರು.  

3 /7

ಫೆಬ್ರವರಿ 7, 2017 ರಂದು, 21 ನೇ ವಯಸ್ಸಿನಲ್ಲಿ, ಈ ದೆಹಲಿ ಹುಡುಗ ತನ್ನ ಇನ್ನಿಂಗ್ಸ್‌ನಲ್ಲಿ 14 ಬೌಂಡರಿಗಳು ಮತ್ತು 39 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಈ ಮೂಲಕ ಮಾವಿ XI ತಂಡವು 416/2 ಸ್ಕೋರ್ ಗಳಿಸಿತು. ಮಾವಿ XI ಪರ ಇನ್ನಿಂಗ್ಸ್ ಆರಂಭಿಸಿದ ಮೋಹಿತ್ ಅಹ್ಲಾವತ್ ಈ ಪಂದ್ಯದಲ್ಲಿ ಸಿಕ್ಸರ್‌ಗಳೊಂದಿಗೆ 234 ರನ್ ಗಳಿಸಿದ್ದರು. ಜೊತೆಗೆ ಬೌಂಡರಿಗಳಿಂದ 56 ರನ್ ಗಳಿಸಿದ್ದರು. ಮೋಹಿತ್ ಅಹ್ಲಾವತ್ ಅವರ ತ್ರಿವಳಿ ಶತಕದ ನೆರವಿನಿಂದ ಮಾವಿ ಇಲೆವೆನ್ ತಂಡ 20 ಓವರ್‌ಗಳಲ್ಲಿ 416 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಫ್ರೆಂಡ್ಸ್ ಇಲೆವೆನ್ 216 ರನ್‌ಗಳಿಂದ ಸೋಲು ಅನುಭವಿಸಿತು.  

4 /7

ಮೋಹಿತ್ ಅಹ್ಲಾವತ್ ಅವರ ಇನ್ನಿಂಗ್ಸ್ ಟ್ವೆಂಟಿ20 ದಾಖಲೆಗಳನ್ನೇ ಬದಲಾಯಿಸಿತು. ಇದಕ್ಕೂ ಮೊದಲು, ಟ್ವೆಂಟಿ20ಯಲ್ಲಿ ತಂಡದ ಗರಿಷ್ಠ ಸ್ಕೋರ್ 263/5 ಆಗಿತ್ತು. 2013 ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಹಾರಾ ಪುಣೆ ವಾರಿಯರ್ಸ್ ವಿರುದ್ಧ ಚೊಚ್ಚಲ ಪಂದ್ಯವನ್ನು ಆಡಿತ್ತು. ಒಬ್ಬ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ 175 ರನ್‌ಗಳು. ಕ್ರಿಸ್ ಗೇಲ್ ಮೈದಾನದಲ್ಲಿ ಈ ಬಿರುಗಾಳಿಯ ಇನ್ನಿಂಗ್ಸ್ ಆಡಿದರು.  

5 /7

ಮೋಹಿತ್ ಅಹ್ಲಾವತ್ ಈ ಪಂದ್ಯದಲ್ಲಿ 39 ಸಿಕ್ಸರ್‌ಗಳನ್ನು ಬಾರಿಸಿದರು. ಇದಕ್ಕೂ ಮುನ್ನ, ಟಿ20 ಪಂದ್ಯವೊಂದರಲ್ಲಿ ಯಾವುದೇ ತಂಡವು ದಾಖಲಿಸಿದ ಗರಿಷ್ಠ ಸಿಕ್ಸರ್‌ಗಳ ಸಂಖ್ಯೆ 21 ಆಗಿತ್ತು. ಟ್ವೆಂಟಿ20 ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಬಗ್ಗೆ ಹೇಳುವುದಾದರೆ, 34 ಸಿಕ್ಸರ್‌ಗಳಾಗಿತ್ತು. ಅಹ್ಲಾವತ್ ಎಲ್ಲವನ್ನೂ ಬ್ರೇಕ್‌ ಮಾಡಿದ್ದರು.  

6 /7

ಲಾಲ್ ಬಹದ್ದೂರ್ ಶಾಸ್ತ್ರಿ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಕಲಿತ ಮೋಹಿತ್ ಅಹ್ಲಾವತ್ ದೆಹಲಿ ಪರ ಆಡುತ್ತಾರೆ. ಅವರ ತಂದೆ ಪವನ್ ಅಹ್ಲಾವತ್ ಕೂಡ ಕ್ರಿಕೆಟ್ ಆಡಿದ್ದಾರೆ. ಹಣದ ಕೊರತೆಯಿಂದಾಗಿ, ಅವರು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಮತ್ತು ಟೆಂಪೋ ಓಡಿಸಬೇಕಾಯಿತು.  

7 /7

ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಮೋಹಿತ್ 11 ಪ್ರಥಮ ದರ್ಜೆ ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 236 ರನ್ ಗಳಿಸಿದ್ದಾರೆ. 24 ಲಿಸ್ಟ್ ಎ ಪಂದ್ಯಗಳಲ್ಲಿ 554 ರನ್ ಗಳಿಸಿದ್ದಾರೆ.