Malaika Arora diet tips : ಒಂದು ವೇಳೆ ನೀವು ಮಲೈಕಾ ಅರೋರಾ ಪಾಲಿಸುವ ಈ ಡಯಟ್ ಪ್ಲ್ಯಾನ್ ಅನ್ನು ಅನುಸರಿಸಿದರೆ, 50ನೇ ವಯಸ್ಸಿನಲ್ಲಿಯೂ 30ರಂತೆ ಕಾಣುತ್ತೀರಾ.. ಹಾಗಿದ್ರೆ ಬಿಟೌನ್ ಬೆಡಗಿಯ ಆರೋಗ್ಯ ರಹಸ್ಯವೇನು..? ಬನ್ನಿ ತಿಳಿಯೋಣ..
ವಯಸ್ಸಾದಂತೆ ಪ್ರತಿಯೊಬ್ಬರ ದೇಹ ಕಳೆ ಕಳೆದುಕೊಂಡು ಚರ್ಮ ಸುಕ್ಕುಗಟ್ಟುತ್ತದೆ, ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಇದು ಸಹಜ. ಆದರೆ 50ರ ಹರೆಯದಲ್ಲಿ ಯಂಗ್ ಆಗಿ ಕಾಣಲು ಒಂದು ಮಾರ್ಗವಿದೆ.. ಮಲೈಕಾ ರೀತಿ ಉತ್ತರ ಜೀವನಶೈಲಿ ಪಾಲಿಸಿದರೆ, 50ರಲ್ಲಿಯೂ 20 ರಂತೆ ಕಾಣಬಹುದು..
ಶಿಸ್ತಿನ ಜೀವನ ಶೈಲಿಯಿಂದಾಗಿ ನಟಿ ಮಲೈಕಾ ಅರೋರಾ ಇನ್ನೂ 20ರ ಹರೆಯದವರಂತೆ ಕಾಣುತ್ತಿದ್ದಾರೆ. ಇದಕ್ಕಾಗಿ ಅವರು ತಮ್ಮ ಜೀವನದಲ್ಲಿ ʼ7 ಗಂಟೆʼಯ ದಿನಚರಿಯನ್ನು ಅನುಸರಿಸುತ್ತಿದ್ದಾರೆ. ನೀವು ಅವರಂತೆ ಇರಲು ಬಯಸಿದರೆ, 7 ಗಂಟೆಯ ದಿನಚರಿ ಬಗ್ಗೆ ತಿಳಿಯಬೇಕು..
ಮಲೈಕಾ ಅರೋರಾ ಬೆಳಗ್ಗೆ 7 ಗಂಟೆಗೆ ವಾಟರ್ ಥೆರಪಿ ತೆಗೆದುಕೊಳ್ಳುತ್ತಾರೆ. ವಾಟರ್ ಥೆರಪಿ ಎಂದರೆ ಕನ್ನಡದಲ್ಲಿ ನೀರಿನ ಚಿಕಿತ್ಸೆ. ಇವರಿಗೆ ದಿನವೂ ಒಂದೊಂದು ರೀತಿಯ ನೀರು ಕುಡಿಯುವ ಅಭ್ಯಾಸವಿದೆ. ಜೀರಿಗೆ ನೀರು, ಅರಿಶಿನ ನೀರು, ಸೌತೆಕಾಯಿ ನೀರು ಮತ್ತು ಶುಂಠಿ ನೀರು ಮುಂತಾದ ಆಯುರ್ವೇದ ಔಷಧೀಯ ಗುಣಗಳನ್ನು ಹೊಂದಿರುವ ನೀರನ್ನು ಪ್ರತಿದಿನ ಬೆಳಿಗ್ಗೆ ನಿಯಮಿತವಾಗಿ ಕುಡಿಯುತ್ತಾರೆ.
ಅದೇ ರೀತಿ ಮಲೈಕಾ ಅರೋರಾ ಸಂಜೆ 7ರ ನಂತರ ಏನನ್ನೂ ತಿನ್ನುವುದಿಲ್ಲ. ಸಂಜೆ 7 ಗಂಟೆಗೂ ಮೊದಲು ಯಾವ ರೀತಿಯ ಆಹಾರವನ್ನು ಸೇವಿಸಿದರೂ ಪರವಾಗಿಲ್ಲ ಎನ್ನುತ್ತಾರೆ. ಇದನ್ನೇ ತಮ್ಮ ಜೀವನ ಕ್ರಮವಾಗಿ ಬಹಳ ಕಾಲದಿಂದ ಅನುಸರಿಸಿಕೊಂಡು ಬಂದಿದ್ದಾರಂತೆ.
ಮಲೈಕಾ ಅರೋರಾ ಹೇಳಿದ್ದು ನಿಜ. ಸಂಜೆ ಹೆಚ್ಚಿನ ಆಹಾರವನ್ನು ಎಂದಿಗೂ ಸೇವಿಸಬೇಡಿ. ಮಲಗಲು ಹೋಗುವ ಮೊದಲು ನೀವು ಕನಿಷ್ಟ 3 ಗಂಟೆಗೂ ಮೊದಲು ಊಟ ಮಾಡಬೇಕು. ರಾತ್ರಿ 8 ಗಂಟೆಯ ನಂತರ ತಿನ್ನುವುದನ್ನು ತಪ್ಪಿಸಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ.
ಉಪಾಹಾರಕ್ಕಾಗಿ ತರಕಾರಿಗಳು, ಗ್ರೀನ್ಸ್, ಮೊಸರು ಮತ್ತು ಮಜ್ಜಿಗೆ ಸೇರಿದಂತೆ ಪ್ರೋಬಯಾಟಿಕ್ಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಮಿತವಾಗಿ ತಿನ್ನುವುದು ಅತ್ಯಗತ್ಯ. ಮಧ್ಯಾಹ್ನದ ಊಟವೂ ಸಮತೋಲಿತ ಊಟವಾಗಿರಬೇಕು. ನಿಮ್ಮ ದೇಹದ ಸ್ಥಿತಿಗೆ ಅನುಗುಣವಾಗಿ ಆಹಾರವನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
30 ವರ್ಷ ವಯಸ್ಸಿನ ನಂತರ, ನೀವು ನಿಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಧ್ಯಾನ ಮತ್ತು ಯೋಗ ಮಾಡುವ ಮೂಲಕ ನಿಮ್ಮ ಮನಸ್ಸನ್ನು ಆರೋಗ್ಯವಾಗಿರಿಸಿಕೊಳ್ಳಿ. ನಿಮ್ಮ ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಬೀರುವ ಯಾವುದಕ್ಕೂ ಪ್ರಾಮುಖ್ಯತೆ ನೀಡಬೇಡಿ.