Love Marriage: ಪ್ರೀತಿಸಿ ಮದುವೆಯಾದರೂ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯಗಳು ಮೂಡುವೂ ಸಹಜ. ಇದಕ್ಕೆ ಸಿನಿಮಾ ತಾರೆಯರೂ ಹೊರತಲ್ಲ
Sonakshi Sinha Zaheer Iqbal: ಮೊದಲು ಬೇರೆ ಧರ್ಮದ ವ್ಯಕ್ತಿಯೊಂದಿಗೆ ಅಫೇರ್ ನಿಂದಾಗಿ ಸುದ್ದಿಯಲ್ಲಿದ್ದ ನಟಿ ಇದೀಗ ಮದುವೆಯಾಗಿ ಮೂರೇ ತಿಂಗಳಿಗೆ ಮತ್ತೊಂದು ವಿಷಯದಿಂದಾಗಿ ಟ್ರೋಲ್ಗೆ ಒಳಗಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೆಲವೇ ದಿನಗಳ ಹಿಂದಷ್ಟೇ ತಮ್ಮ ವಿವಾಹದ ಬಗ್ಗೆ ಭಾರೀ ಚರ್ಚೆಯಲ್ಲಿದ್ದ ಖ್ಯಾತ ನಟಿ ಇದೀಗ ಮತ್ತೆ ಟ್ರೋಲ್ಗೆ ಒಳಗಾಗಿದ್ದಾರೆ.
ಮಾಜಿ ಕೇಂದ್ರ ಸಚಿವ ಶತ್ರುಘ್ನ ಸಿನ್ಹಾ ಪುತ್ರಿ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಮೂರು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮನೆಯವರ ವಿರೋಧದ ನಡುವೆಯೂ ತನಗಿಂತಲೂ 2 ವರ್ಷ ಕಿರಿಯವನಾದ ನಟ ಜಹೀರ್ ಇಕ್ಬಾಲ್ ಅವರೊಂದಿಗೆ ಸೋನಾಕ್ಷಿ ಸಿನ್ಹಾ ಮದುವೆಯಾಗಿದ್ದಾರೆ.
ಸುಮಾರು ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಅನ್ಯ ಧರ್ಮದವರಾದರೂ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರಿಂದ ಮದುವೆ ವಿವಾದಕ್ಕೆ ಕಾರಣವಾಗಿತ್ತು.
ಈ ಜೋಡಿ 7 ವರ್ಷ ಪ್ರೀತಿಸಿ ಮದುವೆಯಾಗಿದ್ದರೂ, ಮದುವೆಯಾಗಿ ಮೂರೇ ತಿಂಗಳಿಗೆ ಸೋನಾಕ್ಷಿ ಸಿನ್ಹಾ ಪತಿಯ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ, ಇತ್ತೀಚೆಗಷ್ಟೇ ಸೋನಾಕ್ಷಿ ಸಿನ್ಹಾ- ಜಹೀರ್ ಇಕ್ಬಾಲ್ ಇಬ್ಬರೂ ಸಂದರ್ಶನವೊಂದರಲ್ಲಿ ಪರಸ್ಪರರ ನಡುವಿನ ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.
ಇದೇ ಸಂದರ್ಶನದಲ್ಲಿ ಸೋನಾಕ್ಷಿ ಪತಿ ಪತ್ನಿಯನ್ನು ಹೊಗಳುತ್ತಾ ಆಕೆ ಸಮಯಕ್ಕೆ ತುಂಬಾ ಬೆಲೆ ಕೊಡುತ್ತಾಳೆ ಈ ಗುಣ ತುಂಬಾ ಇಷ್ಟ. ಆದರೆ, ಆಕೆ ತುಂಬಾ ಸರಳ ಮತ್ತು ವಿನಯವಾಗಿ ವರ್ತಿಸುವುದು ತನಗಿಷ್ಟವಿಲ್ಲ ಎಂದಿದ್ದಾರೆ.
ಇನ್ನೂ ಪತಿಯಲ್ಲಿ ಇಷ್ಟವಾಗುವ ಗುಣಗಳ ಬಗ್ಗೆಯೂ ಮಾತನಾಡಿರುವ ನಟಿ ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಅವರ ಉದಾರತೆ ಮತ್ತು ಎಲ್ಲರಿಗೂ ದಯೆ ತೋರುವ ಗುಣ ತನಗೆ ತುಂಬಾ ಇಷ್ಟ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸೋನಾಕ್ಷಿ ತಮ್ಮ ಪತಿಯ "ಶಿಳ್ಳೆ ಹೊಡೆಯುವ ಹಾಗೂ ಇದ್ದಕ್ಕಿದ್ದಂತೆ ಕೂಗುವ" ಅಭ್ಯಾಸದಿಂದ ಬೇಸತ್ತಿರುವುದಾಗಿ ತಿಳಿಸಿದ್ದಾರೆ.
ನನಗೆ ಶಾಂತಿಯಿಂದ ಇರಬೇಕು. ಆದರೆ, ಜಹೀರ್ ಅವರ ಶಿಳ್ಳೆ ಹೊಡೆಯುವ ಅಭ್ಯಾಸ ನನಗೆ ತುಂಬಾ ಕೋಪ ತರಿಸುತ್ತೆ. ಇದರಿಂದಾಗಿ ಇಬ್ಬರ ನಡುವೆ ಆಗಾಗ ಜಗಳವಾಗುವುದು ಉಂಟು ಎಂದು ನಟಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವಿಚಾರವಾಗಿ ನಟಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಗೂ ಒಳಗಾಗಿದ್ದಾರೆ.