Lord Hanuman: ಶ್ರೀ ಆಂಜನೇಯನ ಜನಸಿದ್ದೆಲ್ಲಿ? ಈ ಪುಸ್ತಕದಲ್ಲಡಗಿದೆ ರಹಸ್ಯ

Lord Hanuman Birth Place - ಶ್ರೀ ಆಂಜನೇಯ ಸ್ವಾಮಿ ಜನಸಿದ್ದೆಲ್ಲಿ ? ಈ ಪ್ರಶ್ನೆಗೆ ಉತ್ತರ ಕೆಲವೇ ಜನರಿಗೆ ತಿಳಿದಿದೆ.

Lord Hanuman Birth Place - ಶ್ರೀ ಆಂಜನೇಯ ಸ್ವಾಮಿ (Anjaneya Swamy) ಜನಸಿದ್ದೆಲ್ಲಿ ? ಈ ಪ್ರಶ್ನೆಗೆ ಉತ್ತರ ಕೆಲವೇ ಜನರಿಗೆ ತಿಳಿದಿದೆ. ಆದರೆ ಶೀಘ್ರದಲ್ಲೇ ಒಂದು ಪುಸ್ತಕ ಬಿಡುಗಡೆಯಾಗಲಿದೆ, ಅದರಲ್ಲಿ ಹನುಮನ ಹುಟ್ಟಿದ ಸ್ಥಳವನ್ನು ಪುರಾವೆಗಳೊಂದಿಗೆ ಹೇಳಲಾಗುತ್ತಿದೆ. ಈ ಪುಸ್ತಕವು ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

 

ಇದನ್ನೂ ಓದಿ-Hanuman Temple: ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ತಿರುಮಲದ ಪವಿತ್ರ ಬೆಟ್ಟಗಳಲ್ಲಿ ಹನುಮನ ಜನ್ಮ- ತಿರುಮಲದ ಏಳು ಪವಿತ್ರ ಬೆಟ್ಟಗಳಲ್ಲಿ ಹನುಮ ಜನಿಸಿದ್ದ. ಈ ಹಕ್ಕನ್ನು ಸಾಧಿಸುವ 'ಪುರಾವೆ ಆಧಾರಿತ' ಪುಸ್ತಕವನ್ನು ಏಪ್ರಿಲ್ 13 ರಂದು ಬಿಡುಗಡೆ ಮಾಡಲಾಗುತ್ತದೆ.  

2 /5

2. ಅಂಜನಾದ್ರಿ ಪರ್ವತದಿಂದ ಸ್ಕಾಕ್ಷಾಧಾರಗಳ ಸಂಗ್ರಹ - ಕಳೆದ ವರ್ಷ ಡಿಸೆಂಬರ್‌ನಲ್ಲಿ TTD ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಜವಾಹರ್ ರೆಡ್ಡಿ ಅವರು ಉನ್ನತ ಮಟ್ಟದ ವಿದ್ವಾಂಸರ ಸಮಿತಿಯನ್ನು ರಚಿಸಿದ್ದರು. 'ಅಂಜನಾದ್ರಿ' ಎಂಬ ಏಳು ಬೆಟ್ಟಗಳಲ್ಲಿ ಒಂದನ್ನು ಅಧ್ಯಯನ ಮಾಡಲು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಈ ಸಮಿತಿಯನ್ನು ರಚಿಸಲಾಗಿತ್ತು.

3 /5

3. ತೆಲುಗು ನೂತನ ವರ್ಷಾಚರಣೆಯ ದಿನ ಪುಸ್ತಕದ ವಿಮೋಚನೆ - ಈ ಕುರಿತು ಮಾಹಿತಿ ನೀಡಿರುವ ತಿರುಮಲ ತಿರುಪತಿ ದೇವಸ್ತಾನಂ (TTD)ಯ ಹಿರಿಯ ಅಧಿಕಾರಿಯೊಬ್ಬರು, ಖಗೋಳ (Astronomical), ಆರ್ಕೈವಲ್ (Archival), ವೈಜ್ಞಾನಿಕ ಮತ್ತು ಪೌರಾಣಿಕ ಪುರಾವೆಗಳನ್ನು (Scientific and mythological evidence) ಹೊಂದಿರುವ ಈ ಪುಸ್ತಕವನ್ನು ತೆಲುಗು ಹೊಸ ವರ್ಷದ ದಿನದಂದು 'ಯುಗಾದಿ' (Ugadi 2021) ಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

4 /5

4. ದಕ್ಷಿಣ ಭಾರತದಲ್ಲಿ ಹನುಮನಿಗೆ ಆಂಜನೇಯ ಸ್ವಾಮಿ ಎಂದೂ ಕರೆಯಲಾಗುತ್ತದೆ- ಈ ಕುರಿತು ಮಾತನಾಡಿರುವ ತೆಲುಗು ದೇಶಂ ಪಕ್ಷದ ವಕ್ತಾರ ಎನ್.ಬಿ.ಸುಧಾಕರ್ ರೆಡ್ಡಿ, 'ತಿರುಮಲ ಬೆಟ್ಟಗಳ ಮೇಲೆ ಹನುಮಾನ್ ಜನಿಸಿದನೆಂದು ನಂಬುವ ಎಲ್ಲ ಸಾಧ್ಯತೆಗಳಿವೆ'. ಹನುಮಾನ್ ಅವರನ್ನು ದಕ್ಷಿಣ ಭಾರತದಲ್ಲಿ 'ಶ್ರೀ ಆಂಜನೇಯಸ್ವಾಮಿ' ಎಂದು ಕರೆಯಲಾಗುತ್ತದೆ.

5 /5

5. ದೇವತೆಗಳ ಜನ್ಮಸ್ಥಾನದ ಹುಡುಕಾಟ ಉಚಿತವಲ್ಲ - ಆದರೆ, ಈ ಕುರಿತು ಹೇಳಿಕೆ ನೀಡಿರುವ ರಾಷ್ಟ್ರೀಯ ಹಸ್ತಪ್ರತಿ ಮಿಷನ್‌ನ ಮಾಜಿ ನಿರ್ದೇಶಕ ಪ್ರೊ. ವಿ.ವೆಂಕಟರಮಣ ರೆಡ್ಡಿ ಅವರು ದೇವತೆಗಳ ಜನ್ಮಸ್ಥಳದಲ್ಲಿ ಇಂತಹ ಆವಿಷ್ಕಾರ ಸೂಕ್ತವಲ್ಲ ಎಂದು ಹೇಳಿದ್ದಾರೆ. ಇನ್ನೊಂದೆಡೆ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಎ.ವಿ.ರಮಣ ದೀಕ್ಷಿತರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.