Kangana Ranaut twitter : ಬಿಟೌನ್ ಬೆಡಗಿ ಕಂಗನಾ ರಾಣಾವತ್ ಅವರ ಖಾತೆ 20 ತಿಂಗಳ ನಿಷೇಧದ ನಂತರ ಮರಳಿ ಆಕ್ಟಿವ್ ಆಗಿದೆ. ಟ್ವಿಟರ್ಗೆ ಮರಳಿರುವ ಬಾಲಿವುಡ್ ಬೆಡಗಿ ಈ ಸುದ್ದಿಯನ್ನು ಸ್ವತಃ ಟ್ಟೀಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಬೆಡಗಿ ಕಂಗನಾ ರಾಣಾವತ್ ಅವರ ಖಾತೆ 20 ತಿಂಗಳ ನಿಷೇಧದ ನಂತರ ಮರಳಿ ಆಕ್ಟಿವ್ ಆಗಿದೆ. ಟ್ವಿಟರ್ಗೆ ಮರಳಿರುವ ಬಾಲಿವುಡ್ ಬೆಡಗಿ ಈ ಸುದ್ದಿಯನ್ನು ಸ್ವತಃ ಟ್ಟೀಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಟ್ಟಿಟರ್ಗೆ ಕಮ್ಬ್ಯಾಕ್ ಮಾಡಿರುವ ಬಿಟೌನ್ ಕ್ವೀನ್, ತಮ್ಮ ಮುಂಬರುವ ಚಿತ್ರ ಎಮರ್ಜೆನ್ಸಿಯ BTS ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಅಲ್ಲದೆ, ಎಮರ್ಜೆನ್ಸಿಯ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ, 20ನೇ ಅಕ್ಟೋಬರ್ 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗೆಯಾಗುತ್ತದೆ ಅಂತ ಅಪ್ಡೆಟ್ ನೀಡಿದ್ದಾರೆ.
ವಿವಾದಾತ್ಮಕ ಟ್ವೀಟ್ಗಳ ಸರಣಿಯನ್ನು ಹಂಚಿಕೊಂಡ ನಂತರ, ಕಂಗನಾ ರನೌತ್ ಅವರ ಟ್ವಿಟರ್ ಖಾತೆ ಬ್ಲಾಕ್ ಮಾಡಲಾಗಿತ್ತು.
ನಟ ಕಂಗನಾ ಪಶ್ಚಿಮ ಬಂಗಾಳದ ಹಿಂಸಾಚಾರದ ಬಗ್ಗೆ ಟ್ವೀಟ್ಗಳನ್ನು ಹಂಚಿಕೊಂಡಿದ್ದರು. ಅಲ್ಲದೆ, ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದ್ದರು.
'ವಿರಾಟ್ ರೂಪ್' ತೆಗೆದುಕೊಂಡು ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಪಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದರು.
ಅಲ್ಲದೆ, ಮಮತಾ ಅವರನ್ನು 'ರಾಕ್ಷಸಿ' ಅಂತ ಕಂಗನಾ ಕರೆದಿದ್ದರು. ʼಗುಂಡಾನನ್ನು ಕೊಲ್ಲಲು ನಮಗೆ ಸೂಪರ್ ಗುಂಡಾ ಬೇಕು.. ಮೋದಿ ಜೀ ದಯವಿಟ್ಟು 2000 ರ ದಶಕದ ಆರಂಭದ ನಿಮ್ಮ ವಿರಾಟ್ ರೂಪವನ್ನು ತೋರಿಸಿ. ಎಂದಿದ್ದರು.