ವಯಸ್ಸು 43, 2 ಮಕ್ಕಳಿದ್ರೂ ಸಖತ್‌ ಹಾಟ್‌, ಆದ್ರೆ ಸಿಂಗಲ್‌..! ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ಸುಂದರಿ ಈಕೆ

Actress Lifestyle : ಸೌಂದರ್ಯದಲ್ಲಿ ಈಕೆ ಸಿನಿ ಇಂಡಸ್ಟ್ರಿಯ ಸೆನ್ಸೇಷನ್. 18ನೇ ವಯಸ್ಸಿಗೆ ಮದುವೆಯಾಗಿ, ಹಲವು ಸವಾಲುಗಳನ್ನು ಎದುರಿಸಿ ನಟಿಯಾಗಿ ಮಿಂಚಿ, ಸಧ್ಯ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋಯಿನ್‌ ಆಗಿ ಮಿಂಚುತ್ತಿದ್ದಾಳೆ... ಯಾರಿಕೆ..? ಬನ್ನಿ ನೋಡೋಣ... 
 

1 /6

ಚಿತ್ರರಂಗದಲ್ಲಿ ಯಾವುದೇ ಬ್ಯಾಕ್‌ಗ್ರೌಂಡ್‌ ಇಲ್ಲದೆ ಖ್ಯಾತಿ ಗಳಿಸಿದ ಅನೇಕ ಸ್ಟಾರ್ ಹೀರೋಯಿನ್‌ಗಳಿದ್ದಾರೆ. ಅಲ್ಲದೆ ಕೆಲವು ನಟಿಯರು ಸಿನಿಮಾದಿಂದ ಟಿವಿ ಇಂಡಸ್ಟ್ರಿಗೆ ಶಿಫ್ಟ್ ಆಗಿ, ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸಿನಿಮಾ ನಾಯಕಿಯರಿಗಿಂತ ಹೆಚ್ಚು ಸಿರಿಯಲ್‌ನಲ್ಲಿ ಜನಪ್ರಿಯತೆ ಪಡೆಯುತ್ತಿದ್ದಾರೆ. ನಾವು ಮಾತನಾಡಲು ಹೊರಟಿರುವ ನಟಿ ಅಂತಹ ಜನರಲ್ಲಿ ಒಬ್ಬರು. ಈಕೆ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಟಿ..  

2 /6

ಆಕೆ ಬೇರೆ ಯಾರೂ ಅಲ್ಲ ಹಿಂದಿ ಧಾರಾವಾಹಿ ನಟಿ ಶ್ವೇತಾ ತಿವಾರಿ. ಅತ್ಯಂತ ಜನಪ್ರಿಯ ಹಿಂದಿ ಧಾರಾವಾಹಿ 'ಕಸೌತಿ ಜಿಂದಗಿ ಕೆ'ಯಲ್ಲಿ ಶ್ವೇತಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಪ್ರೇರಣಾ ಶರ್ಮಾ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿ ಖ್ಯಾತಿ ಗಳಿಸಿದ್ದಾರೆ. ಈ ಧಾರಾವಾಹಿ ಏಳು ವರ್ಷಗಳ ಕಾಲ ಯಶಸ್ವಿಯಾಗಿ ನಡೆಯಿತು. ಅಲ್ಲದೆ, ಹಿಂದಿ ಬಿಗ್ ಬಾಸ್ ಸೀಸನ್ 4 ರಲ್ಲಿ ಭಾಗವಹಿಸಿ, ವಿಜೇತರಾದರು.   

3 /6

ಅದಾದ ನಂತರ ಸಾಲು ಸಾಲು ಆಫರ್ ಗಳು ಬಂದಿದ್ದು, ಧಾರಾವಾಹಿ, ಶೋಗಳನ್ನು ಮಾಡುತ್ತಾ ಸ್ಟಾರ್ ಆದರು. ಶ್ವೇತಾ ತಿವಾರಿ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟಾಗಿ ಅವುಗಳು ಹಿಟ್‌ ಆಗದ ಕಾರಣ ಇಂದು ಕಿರುತೆರೆಗೆ ಸೀಮಿತವಾಗಿದ್ದಾರೆ.   

4 /6

ಆದರೆ ವೃತ್ತಿಯ ವಿಷಯದಲ್ಲಿ ಹಿಂತಿರುಗಿ ನೋಡಲೇ ಇಲ್ಲ.. ಶ್ವೇತಾ ನಟಿಸಿರುವ ಎಲ್ಲಾ ಧಾರಾವಾಹಿಗಳು ಸಖತ್‌ ಹಿಟ್‌.. ಆದರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಿದ್ದಾರೆ. ಎರಡು ಬಾರಿ ಪ್ರೀತಿಸಿ ಮೋಸ ಹೋಗಿದ್ದಾರೆ.   

5 /6

ಶ್ವೇತಾ ತಿವಾರಿ 1998 ರಲ್ಲಿ ನಟ ರಾಜಾ ಚೌಧರಿ ಅವರನ್ನು ವಿವಾಹವಾದರು. ಆದರೆ ಕೆಲವು ಭಿನ್ನಾಭಿಪ್ರಾಯಗಳಿಂದ 2007 ರಲ್ಲಿ ವಿಚ್ಛೇದನ ಪಡೆದರು. ಅದರ ನಂತರ ಮತ್ತೊಮ್ಮೆ ಅಭಿವನ್ ಕೊಹ್ಲಿ ಎಂಬ ವ್ಯಕ್ತಿಯನ್ನು ಪ್ರೀತಿಸಿ, 2013 ರಲ್ಲಿ ವಿವಾಹವಾದರು. ಅವರಿಗೆ ರೆಯಾನ್ಶ್ ಕೊಹ್ಲಿ ಎಂಬ ಮಗನಿದ್ದಾನೆ. 2019ರಲ್ಲಿ ಕೌಟುಂಬಿಕ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಒಂದೇ ವರ್ಷದಲ್ಲಿ ಇಬ್ಬರೂ ಬೇರೆಯಾದರು.   

6 /6

ಪ್ರಸ್ತುತ, ಶ್ವೇತಾ ತಿವಾರಿ ತನ್ನ ಮಗ ಮತ್ತು ಮಗಳೊಂದಿಗೆ ಒಂಟಿಯಾಗಿ ವಾಸಿಸುತ್ತಿದ್ದಾರೆ. ಪಿಂಕ್ ವಿಲ್ಲಾ, ಮೆನ್ಸ್ ಎಕ್ಸ್ ವರದಿಯ ಪ್ರಕಾರ ಆಕೆಯ ಈ ನಟಿಯ ಆಸ್ತಿ ಸುಮಾರು ರೂ. 81 ಕೋಟಿ. ಶ್ವೇತಾ ತಿವಾರಿ ಹಲವು ಸವಾಲುಗಳನ್ನು ಮೆಟ್ಟಿ ನಿಂತು ಇಂದು ಉದ್ಯಮದಲ್ಲಿ ಮಿಂಚುತ್ತಿದ್ದಾರೆ..