IND vs PAK live : ಸ್ಟೇಡಿಯಂನಲ್ಲಿ ಪಾಂಡ್ಯ ಹುಡುಗಿ ಪ್ರತ್ಯಕ್ಷ..! 2ನೇ ಅತ್ತಿಗೆ ಸೂಪರ್‌ ಎಂದ ಫ್ಯಾನ್ಸ್‌.. ಫೋಟೋ ವೈರಲ್‌

Hardik Pandya girlfriend : ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯದ ನಡೆಯುತ್ತಿದೆ. ಇದೇ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಗೆಳತಿ ಎಂದು ಹೇಳಲಾಗುವ ಸುಂದರಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ.. ಡಿವೋರ್ಸ್‌ ನಂತರ ಮತ್ತೇ ಪಾಂಡ್ಯ ಲವ್‌ನಲ್ಲಿ ಬಿದ್ದಿದ್ದಾರೆ ಅಂತ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ..

1 /7

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜುಲೈ 12, 2024 ರಂದು ಮಾಡೆಲ್ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಘೋಷಿಸಿದರು. ಅದಾದ ನಂತರ, ಪಾಂಡ್ಯ ಸಿಂಗಲ್‌ ಆದರು. 

2 /7

ವಿಚ್ಛೇದನದ ನಂತರ ಹಾರ್ದಿಕ್ ಒಬ್ಬ ಗಾಯಕಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳೂ ಇದ್ದವು. ಇಬ್ಬರ ಕೆಲವು ಫೋಟೋಗಳು ಆಗಾಗ ವೈರಲ್ ಆಗುತ್ತಿದ್ದವು..   

3 /7

ಆದ್ದರಿಂದ, ಹಾರ್ದಿಕ್ ಪಾಂಡ್ಯ ಸಂಬಂಧದಲ್ಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ಗಾಯಕಿ ಬೇರೆ ಯಾರೂ ಅಲ್ಲ ಜಾಸ್ಮಿನ್ ವಾಲಿಯಾ. ಪಾಂಡ್ಯ ಜಾಸ್ಮಿನ್ ವಾಲಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.   

4 /7

ಜಾಸ್ಮಿನ್ ವಾಲಿಯಾ ಈಗ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಪಂದ್ಯವನ್ನು ವೀಕ್ಷಿಸಲು ದುಬೈಗೆ ಆಗಮಿಸಿದ್ದಾರೆ. ಕ್ರೀಡಾಂಗಣದಲ್ಲಿ ಜಾಸ್ಮಿನ್ ವಾಲಿಯಾ ಪಾಂಡ್ಯಗೆ ಹುರಿದುಂಬಿಸುತ್ತಿರುವುದು ಕಂಡುಬಂದಿತು.  

5 /7

ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಹಾರ್ದಿಕ್ ಮತ್ತು ಜಾಸ್ಮಿನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ತೀವ್ರಗೊಂಡವು. ಜಾಸ್ಮಿನ್ ಈಗ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಬಂಧವನ್ನು ದೃಢಪಡಿಸಿದ್ದಾರೆ ಅಂತ ನೆಟ್ಟಿಗರು ಮಾತನಾಡುತ್ತಿದ್ದಾರೆ..   

6 /7

ಜಾಸ್ಮಿನ್ ವಾಲಿಯಾ ಒಬ್ಬ ಬ್ರಿಟಿಷ್ ಗಾಯಕಿ ಮತ್ತು ಟಿವಿ ಸೆಲೆಬ್ರಿಟಿ. ಸಂಗೀತ ಉದ್ಯಮ ಮತ್ತು ಸಾಮಾಜಿಕ ಮಾಧ್ಯಮ ಎರಡರಲ್ಲೂ ಜನಪ್ರಿಯರಾಗಿದ್ದಾರೆ.  

7 /7

ಜಾಸ್ಮಿನ್ ಬ್ರಿಟಿಷ್ ರಿಯಾಲಿಟಿ ಟಿವಿ ಸರಣಿ, ದಿ ಓನ್ಲಿ ವೇ ಈಸ್ ಎಸೆಕ್ಸ್‌ನಲ್ಲಿ ಕಾಣಿಸಿಕೊಂಡ ನಂತರ ಮುನ್ನೆಲೆಗೆ ಬಂದರು. ಪ್ರಸಿದ್ಧ ರಿಯಾಲಿಟಿ ಶೋನಲ್ಲಿನ ಅವರ ಅಭಿನಯ ಸಾಕಷ್ಟು ಖ್ಯಾತಿ ಮತ್ತು ಮನ್ನಣೆಯನ್ನು ಗಳಿಸಿಕೊಟ್ಟಿತು.