Tulsi plant vastu tips: ಸನಾತನ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಪ್ರತಿನಿತ್ಯವೂ ತುಳಸಿಗೆ ನೀರನ್ನು ಅರ್ಪಿಸುವ, ಪೂಜೆ ಮಾಡುವ ಸಂಪ್ರದಾಯವಿದೆ. ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿದೇವಿಯು ನೆಲೆಸಿರುತ್ತಾಳೆ ಎನ್ನುವ ನಂಬಿಕೆಯಿದೆ.
Tulsi plant vastu tips: ತುಳಸಿ ಗಿಡವು ತಾಯಿ ಲಕ್ಷ್ಮಿದೇವಿಯ ರೂಪ. ತುಳಸಿಯನ್ನು ಮಂಗಳಕರ ಹಾಗೂ ಅತ್ಯಂತ ಪವಿತ್ರವಾದ ಗಿಡವೆಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡದ ಬಳಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಬಡತನ, ದಾರಿದ್ರ್ಯ ಬರುತ್ತದೆ ಎಂದು ನಂಬಲಾಗಿದೆ. ತುಳಸಿ ಗಿಡದ ಬಳಿ ಯಾವೆಲ್ಲಾ ವಸ್ತುಗಳನ್ನು ಇಡಬಾರದು ಅನ್ನೋದರ ಬಗ್ಗೆ ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಸನಾತನ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಪ್ರತಿನಿತ್ಯವೂ ತುಳಸಿಗೆ ನೀರನ್ನು ಅರ್ಪಿಸುವ, ಪೂಜೆ ಮಾಡುವ ಸಂಪ್ರದಾಯವಿದೆ. ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿದೇವಿಯು ನೆಲೆಸಿರುತ್ತಾಳೆ ಎನ್ನುವ ನಂಬಿಕೆಯಿದೆ. ಇದೇ ಕಾರಣಕ್ಕೆ ಉಪವಾಸ, ಹಬ್ಬ, ಶುಭ ಮತ್ತು ಮಂಗಳಕರ ಕಾರ್ಯಗಳಲ್ಲಿ ತುಳಸಿಯನ್ನು ಪೂಜಿಸಲಾಗುತ್ತದೆ. ಕೆಲವು ದೇವರು ಮತ್ತು ದೇವತೆಗಳನ್ನು ತುಳಸಿ ಇಲ್ಲದೆ ಪೂಜಿಸುವುದು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ತುಳಸಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ-ಸಮೃದ್ಧಿ ಬರುತ್ತದೆ. ಆದರೆ ಶಾಸ್ತ್ರದ ಪ್ರಕಾರ ಈ 5 ವಸ್ತುಗಳನ್ನು ತುಳಸಿಯ ಸುತ್ತ ಅಪ್ಪಿತಪ್ಪಿಯೂ ಇಡಬಾರದಂತೆ. ಇವುಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಶಾಸ್ತ್ರದ ಪ್ರಕಾರ, ತುಳಸಿ ಗಿಡದ ಬಳಿ ಅಥವಾ ತುಳಸಿ ಗಿಡದ ಅಕ್ಕಪಕ್ಕ ಎಂದಿಗೂ ಶೂಗಳನ್ನು ಮತ್ತು ಚಪ್ಪಲಿಗಳನ್ನು ಇಡಬಾರದಂತೆ. ತುಳಸಿ ಗಿಡದ ಬಳಿ ಶೂ ಮತ್ತು ಚಪ್ಪಲಿಗಳನ್ನು ಇಡುವುದರಿಂದ ಅದು ತುಳಸಿಗೆ ಮಾತ್ರವಲ್ಲ, ತಾಯಿ ಲಕ್ಷ್ಮಿದೇವಿಗೂ ಮಾಡುವ ಅವಮಾನವಂತೆ. ನಾವು ಈ ತಪ್ಪನ್ನು ಮಾಡುವುದರಿಂದ ಸಂಪತ್ತಿನ ಮುಖ್ಯ ದೇವತೆ ತಾಯಿ ಲಕ್ಷ್ಮಿದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎನ್ನುವ ನಂಬಿಕೆಯಿದೆ.
ತುಳಸಿಯನ್ನು ವಿಷ್ಣುಪ್ರಿಯವೆಂದು ಕರೆಯಲಾಗುತ್ತದೆ. ನಿಯಮಿತವಾಗಿ ತುಳಸಿ ಪೂಜೆ ಮಾಡುವುದರಿಂದ ಅದು ನಮಗೆ ಉತ್ತಮ ಫಲ ಕರುಣಿಸುತ್ತದೆ. ತುಳಸಿ ಗಿಡದ ಬಳಿ ಅಪ್ಪಿತಪ್ಪಿಯೂ ಪೊರಕೆ ಇಡಬಾರದು. ಪೊರಕೆಯಿಂದ ಗುಡಿಸುವಾಗಲೂ ತುಳಸಿಗೆ ತಾಗಿಸಬಾರದು. ಈ ರೀತಿ ತುಳಸಿ ಗಿಡದ ಬಳಿ ಪೊರಕೆ ಇಡುವುದರಿಂದ ತಾಯಿ ಲಕ್ಷ್ಮಿದೇವಿ ಮತ್ತು ವಿಷ್ಣುದೇವ ಇಬ್ಬರಿಗೂ ಅವಮಾನ ಮಾಡಿದಂತಾಗುತ್ತದೆ. ತುಳಸಿ ಗಿಡದ ಬಳಿ ಪೊರಕೆ ಇಡುವುದರಿಂದ ಮನೆಗೆ ಬಡತನ, ದಾರಿದ್ರ್ಯ ಬರುತ್ತದಂತೆ.
ತುಳಸಿಯು ಒಂದು ಮಂಗಳಕರ ಸಸ್ಯ. ಅದರ ಹತ್ತಿರ ಮುಳ್ಳಿನ ಗಿಡಗಳನ್ನು ಎಂದಿಗೂ ಇಡಬಾರದು ಅಥವಾ ನೆಡಬಾರದು. ಹೀಗೆ ಮಾಡುವುದರಿಂದ ಅಶುಭ ಫಲಿತಾಂಶಗಳು ಉಂಟಾಗುತ್ತವಂತೆ. ಇಂತಹ ಪರಿಸ್ಥಿತಿಯಲ್ಲಿ ಗುಲಾಬಿ, ಕಳ್ಳಿ ಮುಂತಾದ ಮುಳ್ಳಿನ ಸಸ್ಯಗಳನ್ನು ತುಳಸಿಯಿಂದ ದೂರವಿಡುವುದು ಉತ್ತಮ. ವಾಸ್ತವವಾಗಿ ತುಳಸಿಯ ಬಳಿ ಮುಳ್ಳಿನ ಗಿಡಗಳನ್ನ ಇಡುವುದು ಕುಟುಂಬ ಸದಸ್ಯರಲ್ಲಿ ಉದ್ವಿಗ್ನತೆಯನ್ನ ಹೆಚ್ಚಿಸುತ್ತದೆ.
ತುಳಸಿ ಗಿಡ ನೆಟ್ಟಿರುವ ಸ್ಥಳದಲ್ಲಿ ಅಪ್ಪಿತಪ್ಪಿಯೂ ಶಿವಲಿಂಗವನ್ನ ಇಡಬಾರದು. ಧಾರ್ಮಿಕ ಕಥೆಯ ಪ್ರಕಾರ, ತುಳಸಿಯ ಹಿಂದಿನ ಜನ್ಮದ ಹೆಸರು ವೃಂದಾ, ಅವಳು ಪ್ರಬಲ ರಾಕ್ಷಸ ಅಸುರನ ಪತ್ನಿ. ಈತನ ಹೆಸರೇ ಜಲಂಧರ. ಜಲಂಧರನಿಗೆ ಆತನ ಶಕ್ತಿಯ ಬಗ್ಗೆ ಅಪಾರ ದುರಹಂಕಾರವಿತ್ತು. ಈ ರಾಕ್ಷಸನನ್ನು ಶಿವನೇ ಕೊಂದನು. ಇದೇ ಕಾರಣಕ್ಕೆ ತುಳಸಿಯ ಬಳಿ ಶಿವಲಿಂಗವನ್ನು ಇಡುವುದಿಲ್ಲ.
ತುಳಸಿ ಗಿಡ ಅತ್ಯಂತ ಪವಿತ್ರ ಗಿಡವಾಗಿದೆ. ಹೀಗಾಗಿ ತುಳಸಿ ಗಿಡದ ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ತುಳಸಿಯ ಬಳಿ ಅಪ್ಪಿತಪ್ಪಿಯೂ ಕಸದ ಬುಟ್ಟಿ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಮತ್ತು ಬಡತನ ನೆಲೆಸುತ್ತದೆ ಎಂದು ನಂಬಲಾಗಿದೆ. (ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)