Tortoise Ring for Vastu: ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ... ಆಮೆಯನ್ನು ಅತ್ಯಂತ ಪವಿತ್ರ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಅನೇಕ ಜನರು ಆಮೆಯ ಉಂಗುರಗಳನ್ನು ಧರಿಸುತ್ತಾರೆ.
ಆಮೆಯ ಉಂಗುರವನ್ನು ಧರಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವೂ ದೊರೆಯುತ್ತದೆ. ಆದರೆ ಈ ಆಮೆಯ ಉಂಗುರವನ್ನು ಧರಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ತಾಮ್ರ ಮತ್ತು ಹಿತ್ತಾಳೆಯ ಆಮೆ ಉಂಗುರಗಳ ಬದಲಿಗೆ.. ಬೆಳ್ಳಿಯ ಆಮೆಯ ಉಂಗುರಗಳನ್ನು ಧರಿಸಿ..
ಈ ಉಂಗುರವನ್ನು ಮಧ್ಯದ ಬೆರಳು ಅಥವಾ ತೋರು ಬೆರಳಿಗೆ ಮಾತ್ರ ಧರಿಸಬೇಕು. ಧರಿಸುವ ಮೊದಲು ಆಮೆಯ ಉಂಗುರವನ್ನು ಹಾಲಿನಿಂದ ಸ್ವಚ್ಛಗೊಳಿಸಬೇಕು. ಅದರ ನಂತರ ಅದನ್ನು ಗಂಗಾಜಲದಿಂದ ಶುದ್ಧೀಕರಿಸಬೇಕು. ಬಳಿಕ ಈ ಅದನ್ನು ಲಕ್ಷ್ಮೀದೇವಿ ಮತ್ತು ದುರ್ಗಮ್ಮನ ಫೋಟೋಗಳ ಬಳಿ ಇಟ್ಟು ಶ್ರೀಸೂಕ್ತವನ್ನು ಪಠಿಸಬೇಕು. ಆಗ ಮಾತ್ರ ಆಮೆಯ ಉಂಗುರವನ್ನು ಧರಿಸಬೇಕು.
ಆಮೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಶುಕ್ರವಾರದಂದು ಈ ಉಂಗುರವನ್ನು ಧರಿಸುವುದು ಉತ್ತಮ. ಅಲ್ಲದೆ ಒಂದು ವೇಳೆ ಆಮೆಯ ಉಂಗುರವನ್ನು ತೆಗೆದರೆ.. ಅದನ್ನು ಮತ್ತೊಮ್ಮೆ ಲಕ್ಷ್ಮಿ ದೇವಿಯ ಪಾದಕ್ಕೆ ಇಟ್ಟು ಆ ನಂತರವೇ ಧರಿಸಬೇಕು.
ಆಮೆಯ ಉಂಗುರವನ್ನು ಧರಿಸುವುದರಿಂದ ಆರ್ಥಿಕ ತೊಂದರೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ವ್ಯಕ್ತಿಯಲ್ಲಿರುವ ನಕಾರಾತ್ಮಕ ಶಕ್ತಿಯು ಧನಾತ್ಮಕ ಶಕ್ತಿಯಿಂದ ಬದಲಾಯಿಸಲ್ಪಡುತ್ತದೆ. ಮನೆಯಲ್ಲಿ ಪ್ರಗತಿಯೂ ಹೆಚ್ಚಾಗುತ್ತದೆ. ಜೀವನದಲ್ಲಿ ಎಲ್ಲಾ ತಪ್ಪುಗಳು ದೂರವಾಗುತ್ತವೆ.
ಆಮೆಯ ಉಂಗುರವನ್ನು ಈ ಮೇಲೆ ತಿಳಿಸಿದ ಹಾಗೇ ಸರಿಯಾದ ರೀತಿಯಲ್ಲಿ ಧರಿಸಿದರೇ ಹಣದ ಕೊರತೆಯಂತೂ ಬರುವುದೇ ಇಲ್ಲ ಎಂದು ನಂಬಲಾಗಿದೆ.. ಅಷ್ಟೇ ಅಲ್ಲ.. ಇದರಿಂದ ನೀವು ಕೈಹಾಕಿದ ಕೆಲಸಗಳೆಲ್ಲವೂ ಸರಾಗವಾಗಿ ಸಾಗುತ್ತವೆ..
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.