Weight Loss Diet Chart for one Week : ಸರಿಯಾದ ಆಹಾರಕ್ರಮವನ್ನು ಅನುಸರಿಸುವ ಮೂಲಕ ಒಂದೇ ವಾರದಲ್ಲಿ 3 ರಿಂದ 4 ಕೆಜಿ ಕಳೆದುಕೊಳ್ಳಬಹುದು.
ಬೆಂಗಳೂರು : Weight Loss Diet Chart for one Week :ತೂಕ ಹೆಚ್ಚಳ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚುತ್ತಿರುವ ಸ್ಥೂಲಕಾಯತೆಯಿಂದಾಗಿ, ಅನೇಕ ಬಾರಿ ಅಪಾಯಕಾರಿ ಕಾಯಿಲೆಗಳಿಗೆ ಗುರಿಯಾಗಬೇಕಾಗುತ್ತದೆ. ಇಂದಿನ ಕಾಲದಲ್ಲಿ, ಹೆಚ್ಚಿನ ಜನರು ಹೆಚ್ಚುತ್ತಿರುವ ತೂಕದಿಂದ ತೊಂದರೆಗೊಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ತೂಕವನ್ನು ಕಳೆದುಕೊಳ್ಳಲು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ತೂಕ ಕಳೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದರೆ ಸರಿಯಾದ ಆಹಾರಕ್ರಮವನ್ನು ಅನುಸರಿಸುವ ಮೂಲಕ ಒಂದೇ ವಾರದಲ್ಲಿ 3 ರಿಂದ 4 ಕೆಜಿ ಕಳೆದುಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಮೊದಲ ದಿನದ ಡಯಟ್ : ಮೊದಲ ದಿನ ಬೆಳಗಿನ ಉಪಾಹಾರವಾಗಿ 2 ಬೇಯಿಸಿದ ಮೊಟ್ಟೆ ಮತ್ತು ಅರ್ಧ ಬೌಲ್ ಓಟ್ಸ್ ಅನ್ನುಸೇವಿಸಿ. ಊಟದಲ್ಲಿ, 1 ಬೌಲ್ ಸೋಯಾ ಚಂಕ್ ಪುಲಾವ್, 1 ಸೌತೆಕಾಯಿ ಮೊಸರು ಬಜ್ಜಿ, ಸಲಾಡ್ ತೆಗೆದುಕೊಳ್ಳಿ. ರಾತ್ರಿಯ ಊಟದಲ್ಲಿ 2 ಟೋಸ್ಟ್ ಗಳೊಂದಿಗೆ 1 ಬೌಲ್ ಟೊಮೆಟೊ ಸೂಪ್ ಕುಡಿಯಿರಿ.
ಎರಡನೇ ದಿನದ ಡಯಟ್ : ಎರಡನೇ ದಿನ, ಬೆಳಗಿನ ಉಪಾಹಾರಕ್ಕೆ 2 ಜೋಳದ ಹಿಟ್ಟಿನ ದೋಸೆ, ಮತ್ತು ಅರ್ಧ ಬೌಲ್ ಮೊಸರು ತಿನ್ನಿರಿ. ಊಟದಲ್ಲಿ, 1 ಬೌಲ್ ದಾಲ್ , 1 ಬೌಲ್ ಮಿಶ್ರ ತರಕಾರಿಗಳು, 1 ಚಪಾತಿ ಮತ್ತು ಸಲಾಡ್ ತೆಗೆದುಕೊಳ್ಳಿ. ರಾತ್ರಿಯ ಊಟದಲ್ಲಿ 2 ಬ್ರೆಡ್‌ಗಳ ಪನೀರ್ ಭುರ್ಜಿ ಸ್ಯಾಂಡ್‌ವಿಚ್ ಅನ್ನು ತಿನ್ನಿರಿ.
3 ನೇ ದಿನದ ಡಯಟ್ : ಮೂರನೇ ದಿನ, ಬೆಳಗಿನ ಉಪಾಹಾರಕ್ಕಾಗಿ ಬಾಳೆಹಣ್ಣು ಪೀನಟ್ ಬಟರ್ ಸ್ಮೂಥಿ ತೆಗೆದುಕೊಳ್ಳಿ. ಮಧ್ಯಾಹ್ನದ ಊಟದಲ್ಲಿ 1 ಬಟ್ಟಲು ಸೋರೆಕಾಯಿ ತರಕಾರಿ, 1 ಬೌಲ್ ಮೊಸರು, 1 ಬೇಯಿಸಿದ ಮೊಟ್ಟೆ, 1 ಚಪಾತಿ ಮತ್ತು ಸಲಾಡ್ ಅನ್ನು ಭೋಜನದಲ್ಲಿ 1 ಬೌಲ್ ತರಕಾರಿ ಕ್ವಿನೋವಾವನ್ನು ತಿನ್ನಿರಿ. ಕ್ವಿನೋವಾ ಗ್ಲುಟನ್ ಮುಕ್ತ ಆಹಾರವಾಗಿದ್ದು, ತುಂಬಾ ಆರೋಗ್ಯಕರವಾಗಿದೆ.
4 ನೇ ದಿನದ ಡಯಟ್ : ನಾಲ್ಕನೇ ದಿನ, ಬೆಳಗಿನ ಉಪಾಹಾರದಲ್ಲಿ 2 ಮೊಟ್ಟೆಯ ಆಮ್ಲೆಟ್ ಮತ್ತು 2 ಟೋಸ್ಟ್ ಅನ್ನು ತಿನ್ನಿ. ಊಟದಲ್ಲಿ 2 ಸಾದಾ ದೋಸೆ ಮತ್ತು 1 ಬೌಲ್ ಸಾಂಬಾರ್ ತೆಗೆದುಕೊಳ್ಳಿ. ರಾತ್ರಿ ಭೋಜನದಲ್ಲಿ 1 ಬೌಲ್ ಹುರಿದ ತರಕಾರಿಗಳು ಮತ್ತು ಚೀಸ್ ಅನ್ನು ತಿನ್ನಿರಿ.
ಐದನೇ ದಿನದ ಡಯಟ್ : ಐದನೇ ದಿನದ ಉಪಹಾರದಲ್ಲಿ 2 ಕಡಲೆ ಹಿಟ್ಟಿನ ದೋಸೆಯನ್ನು ಪುದೀನ ಚಟ್ನಿಯೊಂದಿಗೆ ಸೇವಿಸಿ. ಮಧ್ಯಾಹ್ನದ ಊಟದಲ್ಲಿ 1 ಬೌಲ್ ರಾಜ್ಮಾ, 1 ಬೌಲ್ ಅನ್ನ ಮತ್ತು ಸಲಾಡ್ ತೆಗೆದುಕೊಳ್ಳಿ. ರಾತ್ರಿಯ ಊಟದಲ್ಲಿ, 1 ಬೌಲ್ ಮೊಳಕೆ ಕಾಳು ಮತ್ತು ಸೌತೆಕಾಯಿ-ಟೊಮ್ಯಾಟೊ ಮತ್ತು ಈರುಳ್ಳಿ ಸಲಾಡ್ ಅನ್ನು ತಿನ್ನಿರಿ.
ಆರನೇ ದಿನದ ಡಯಟ್ : ಆರನೇ ದಿನ ಬೆಳಗಿನ ಉಪಾಹಾರಕ್ಕೆ 1 ಬೌಲ್ ತರಕಾರಿ ಸೇರಿಸಿ ಮಾಡಿದ ಅವಲಕ್ಕಿ ಉಪ್ಪಿಟ್ಟು ಸೇವಿಸಿ. ಮಧ್ಯಾಹ್ನದ ಊಟದಲ್ಲಿ 1 ಬೌಲ್ ದಾಲ್, 1 ಬೌಲ್ ತರಕಾರಿಗಳು, 1 ಚಪಾತಿ ಮತ್ತು ಸಲಾಡ್ ಅನ್ನು ತಿನ್ನಿರಿ. ರಾತ್ರಿಯ ಊಟದಲ್ಲಿ, ಹುರಿದ ಸೋಯಾ ತುಂಡುಗಳೊಂದಿಗೆ 1 ಬೌಲ್ ತರಕಾರಿಗಳನ್ನು ತೆಗೆದುಕೊಳ್ಳಿ.
7ನೇ ದಿನದ ಡಯಟ್ ಚಾರ್ಟ್: ಏಳನೇ ದಿನ ಬೆಳಗಿನ ಉಪಾಹಾರಕ್ಕೆ ತೆಂಗಿನಕಾಯಿ ಚಟ್ನಿಯೊಂದಿಗೆ 3 ಇಡ್ಲಿಗಳನ್ನು ಸೇವಿಸಿ. ಮಧ್ಯಾಹ್ನದ ಊಟದಲ್ಲಿ 1 ಬೌಲ್ ಮಟರ್ ಪನೀರ್, 1 ಬೌಲ್ ಸೌತೆಕಾಯಿ ಮೊಸರು ಬಜ್ಜಿ , 1 ಚಪಾತಿ ಮತ್ತು ಸಲಾಡ್ ಸೇವಿಸಿ. ರಾತ್ರಿಯ ಊಟದಲ್ಲಿ 1 ಬೌಲ್ ಉಪ್ಮಾ ಮತ್ತು 1 ಬೌಲ್ ಮೊಸರು ತಿನ್ನಿರಿ.
ಪ್ರತಿದಿನ 2 ಹಣ್ಣುಗಳನ್ನು ತಿನ್ನಬೇಕು : ಡಯಟ್ ಚಾರ್ಟ್ ಅನ್ನು ಅನುಸರಿಸುವುದರ ಜೊತೆಗೆ, ಪ್ರತಿದಿನ 2 ಹಣ್ಣುಗಳನ್ನು ತಿನ್ನಬೇಕು. ಇದಲ್ಲದೆ, ತಿಂಡಿಗಳಲ್ಲಿ ಹುರಿದ ಮಖಾನಾ, ಹುರಿದ ಬೇಳೆ, ಪಾಪ್‌ಕಾರ್ನ್ ಮತ್ತು ಬೇಯಿಸಿದ ಚಿಪ್ಸ್ (baked chips)ಅನ್ನು ತಿನ್ನಬಹುದು. ಬೆಳಗಿನ ಉಪಾಹಾರ ಮತ್ತು ಊಟದ ನಡುವೆ ಹಣ್ಣುಗಳನ್ನು ಮತ್ತು ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವೆ ತಿಂಡಿಗಳನ್ನು ತೆಗೆದುಕೊಳ್ಳಬಹುದು. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)