Famous Serial Actors: ಧಾರಾವಾಹಿಯಲ್ಲಿ ಅತ್ತೆ ಮತ್ತು ಅಳಿಯನಾಗಿ ನಟಿಸಿದ್ದ ಸ್ಟಾರ್ ಸೆಲೆಬ್ರಿಟಿ ನಿಜ ಜೀವನದಲ್ಲಿ ಮದುವೆಯಾದರು.. ಯಾರು ಆ ಜೋಡಿ? ಇವರಿಬ್ಬರ ಲವ್ ಸ್ಟೋರಿ ಏನು ಅಂತ ಈಗ ತಿಳಿಯೋಣ..
ಚಕ್ರವಾಕಂ ತೆಲುಗು ಧಾರಾವಾಹಿ ಆ ಸಮಯದಲ್ಲಿ ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ನಾಯಕ ಇಂದ್ರನೀಲ್. ಅತ್ತೆಯ ಪಾತ್ರದಲ್ಲಿ ನಟಿಸಿದ್ದ ಮೇಘನಾ ಅವರನ್ನು ಇಂದ್ರನೀಲ್ ಪ್ರೀತಿಸುತ್ತಿದ್ದರು.
ಹೌದು ಚಕ್ರವಾಕಂ ಧಾರಾವಾಹಿಯಲ್ಲಿ ಅತ್ತೆಯಾಗಿ ನಟಿಸಿದ್ದ ಮೇಘನಾಗೆ ಇಂದ್ರನೀಲ್ ಒಂದಲ್ಲ ಎರಡಲ್ಲ 9 ಬಾರಿ ಪ್ರಪೋಸ್ ಮಾಡಿದ್ದಾರಂತೆ.. ಆದರೆ ಮೇಘನಾ ಬೇಡ ಎಂದಿದ್ದರಂತೆ.
ಆದರೆ ಚಕ್ರವಾಕಂ ಧಾರಾವಾಹಿಯಲ್ಲಿ ರೊಮ್ಯಾಂಟಿಕ್ ಹಾಡಿನ ಸೀನ್‌ವೊಂದನ್ನು ಇಡಲಾಗಿತ್ತಂತೆ.. ಆಗ ಮೇಘನಾ ತನ್ನನ್ನು ಪ್ರೀತಿಸುವ ಹುಡುಗ ಇನ್ನೊಬ್ಬ ಹುಡುಗಿಯ ಜೊತೆ ರೊಮ್ಯಾಂಟಿಕ್ ದೃಶ್ಯವನ್ನು ಮಾಡುವುದನ್ನು ಸಹಿಸಲಾಗದೆ ಅವರೇ ಹೋಗಿ ಇಂದ್ರನೀಲ್ಗೆ ಪ್ರಪೋಸ್ ಮಾಡಿದ್ದರಂತೆ..
ಬಳಿಕ ಇಂದ್ರನಿಲ್ ತಮ್ಮ ತಾಯಿಗೆ ಈ ವಿಚಾರ ತಿಳಿಸಲು ನಿರ್ಧರಿಸಿದರು.. ಆದರೆ ಇಲ್ಲೊಂದು ಸಮಸ್ಯೆ ಇಂದ್ರನಿಲ್ ಮೇಘನಾಗಿಂತ ಆರು ತಿಂಗಳು ಚಿಕ್ಕವರು.. ಅದಕ್ಕೆ ಇಂದ್ರನಿಲ್ ತಾಯಿ ಮದುವೆಗೆ ಒಪ್ಪಲಿಲ್ಲ..
ನಿನಗಿಂತ ಆರು ತಿಂಗಳು ದೊಡ್ಡವಳಾದ ಆಕೆಯನ್ನು ಹೇಗೆ ಮದುವೆಯಾಗುತ್ತಿ? ಎಂದು ಪ್ರಶ್ನಿಸಿದ್ದರಂತೆ... ಹೀಗಾಗಿ ಚಕ್ರವಾಕಂ ಧಾರಾವಾಹಿಯ ನಿರ್ದೇಶಕಿ ಮಂಜುಳಾ ನಾಯ್ಡು ಅವರಿಗೆ ಹೇಳಿ ಹಿರಿಯರ ಜತೆ ಮದುವೆ ಮಾಡುವಂತೆ ಒಪ್ಪಿಸುವ ಪ್ರಯತ್ನ ಮಾಡಿದರಂತೆ..
ಆದರೂ ಇಂದ್ರನೀಲ್ ಮನೆಯವರು ಒಪ್ಪಲೇ ಇಲ್ಲವಂತೆ ಈ ಮದುವೆಗೆ.. ಇದಕ್ಕೆ ಮಣಿಯದ ಈ ಜೋಡಿ ಯಾರಿಗೂ ಅಂಜದೇ ಮದುವೆಯಾದರು.. ಸದ್ಯ ಅವರು ಮದುವೆಯಾಗಿ 20 ವರ್ಷಗಳಾಗಿವೆ.. ಆದರೆ ಈ ದಂಪತಿಗೆ ಮಕ್ಕಳಿಲ್ಲ..
ಮೇಘನಾ ಮತ್ತು ಇಂದ್ರನೀಲ್ ಅನೇಕ ಟಿವಿ ಶೋಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾರೆ, ಆಗಾಗ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.