Actress rachitha mahalakshmi: ತಮಿಳು ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿರುವ ರಚಿತಾ ಮಹಾಲಕ್ಷ್ಮಿ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಹಾಗಾದ್ರೆ ಇವರ ಮೊದಲ ಪತಿ ಯಾರು? ಡಿವೋರ್ಸ್ ಪಡೆದಿದ್ದು ಯಾಕೆ? ಈ ವಿವರಗಳನ್ನು ಇಲ್ಲಿ ತಿಳಿಯೋಣ..
ಬೆಳ್ಳಿತೆರೆಯಲ್ಲಿ ನಟ-ನಟಿಯರಿಗೆ ದೊಡ್ಡ ಅಭಿಮಾನಿ ಬಳಗವಿದೆ, ಹಾಗೆಯೇ ಕಿರುತೆರೆಯಲ್ಲಿ ನಟ-ನಟಿಯರೂ ಸಹ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದೇ ರೀತಿ ಹಲವು ಯುವಕರ ಮನದಲ್ಲಿ ರಚಿತಾ ಮಹಾಲಕ್ಷ್ಮಿ ಸ್ಥಾನ ಪಡೆದಿದ್ದಾರೆ. ಅವರು ಮೊದಲೇ ತಾವು ನಟಿಸಿದ ಧಾರಾವಾಹಿಗಳಿಂದ ಪ್ರಸಿದ್ಧರಾಗಿದ್ದರು.. ಬಳಿಕ ನಟಿ ಬಿಗ್ ಬಾಸ್ 6 ಕಾರ್ಯಕ್ರಮದ ಮೂಲಕ ಇನ್ನೂ ಅನೇಕರಿಗೆ ಪರಿಚಿತರಾದರು.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಚಿತಾ ಆರಂಭದಲ್ಲಿ ಕನ್ನಡ ಧಾರಾವಾಹಿಗಳಲ್ಲಿ ಸಹ ನಟಿಸಿದ್ದರು. ತಮಿಳು ನಿರ್ದೇಶಕರು ಅವರ ಅಭಿನಯಕ್ಕೆ ಮನಸೋತು ಧಾರಾವಾಹಿಯೊಂದರಲ್ಲಿ ನಟಿಸಲು ಅವಕಾಶ ನೀಡಿದರು..
ಆ ನಂತರ ಬೇರೆ ಬೇರೆ ವಾಹಿನಿಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಅವಕಾಶಗಳು ಸಿಕ್ಕವು. ಅವುಗಳಲ್ಲಿ ನಟಿಸುತ್ತಿರುವಾಗಲೇ ರಚಿತಾಗೆ ‘ಸರವಣನ್ ಮೀನಾಕ್ಷಿ 2’ ಅವಕಾಶ ಬಂದಿತ್ತು. ಸರಣಿಯ ಮೊದಲ ಸೀಸನ್ ಯಶಸ್ವಿಯಾದ ನಂತರ, ಎರಡನೇ ಸೀಸನ್‌ನಲ್ಲಿಯೂ ನಟಿಸಲು ಸಹಿ ಹಾಕಿದರು.. ಇದರಲ್ಲಿ ಅವರು 'ತಂಗ ಮೀನಾ' ಪಾತ್ರದಲ್ಲಿ ನಟಿಸಿದ್ದರು... ಈ ಎರಡೂ ಸೀಸನ್‌ಗಳು ಭಾರೀ ಹಿಟ್ ಆಗಿದ್ದವು.
ನಟಿ ರಚಿತಾ ತಮ್ಮ ಮೊದಲ ತಮಿಳು ಧಾರಾವಾಹಿಯಲ್ಲಿ ಸಹನಟ ದಿನೇಶ್ ಅವರನ್ನು ಪ್ರೀತಿಸಿ 2015 ರಲ್ಲಿ ವಿವಾಹವಾದರು. ಉತ್ತಮವಾಗಿ ಸಾಗುತ್ತಿದ್ದ ಅವರ ಸಂಬಂಧ 2021ರಲ್ಲಿ ಬಿರುಕು ಬಿಟ್ಟಿತ್ತು. ಇದಾದ ನಂತರ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು.
ಬಳಿಕ 2022 ರಲ್ಲಿ ನಡೆದ ಬಿಗ್ ಬಾಸ್ ಸೀಸನ್ 6 ಕಾರ್ಯಕ್ರಮದಲ್ಲಿ ರಚಿತಾ ಮುಖ್ಯ ಸ್ಪರ್ಧಿಯಾಗಿ ಭಾಗವಹಿಸಿದರು. ಆಗ ಅವರ ದಾಂಪತ್ಯ ಮುರಿದು ಬೀಳಲು ನಟಿಯೇ ಕಾರಣ ಎಂದು ಹಲವರು ಹೇಳಿದ್ದರು. ಆದರೆ ರಚಿತಾ ಆ ವದಂತಿಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದರು..
ಕೆಲವು ದಿನಗಳಿಂದ ರಚಿತಾ ಎರಡನೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಆಕೆ ಕನ್ನಡದ ನಿರ್ದೇಶಕರೊಬ್ಬರನ್ನು ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ರಚಿತಾ ಅವರ ಕಡೆಯವರು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.. ಹಾಗಾಗಿ ಇದು ಇಲ್ಲಿಯವರೆಗೆ ಕೇವಲ ವದಂತಿಗಳಾಗಿಯೇ ಉಳಿದಿವೆ..
ಇದೇ ವೇಳೆ ಬಿಗ್ ಬಾಸ್ ಮನೆಯಿಂದ ಹೊರಬಂದ ದಿನೇಶ್ ಗೆ ಸಂದರ್ಶನವೊಂದರಲ್ಲಿ ರಚಿತಾ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಅವರ "ತನಗಾಗಿಯೇ ಗೋಡೆ ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಅದನ್ನು ಒಡೆಯಲಾಗದೆ ಆ ಗೋಡೆ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ" ಎಂದು ಹೇಳಿದ್ದರು..