Bigg Boss Kannada 11: ಬಿಗ್‌ಬಾಸ್ ಕನ್ನಡ ಸೀಸನ್ 11 ಸದ್ಯ ಅಂತಿಮ ಹಂತಕ್ಕೆ ತಲುಪುತ್ತಿದೆ.. ಹನುಮಂತು ಗ್ರ್ಯಾಂಡ್ ಫಿನಾಲೆಗೆ ಪ್ರವೇಶ ಪಡೆದಿದ್ದು, ಗೌತಮಿ, ಮಂಜು, ಭವ್ಯ, ಧನರಾಜ್, ರಜತ್ ಕಿಶನ್, ಮೋಕ್ಷಿತಾ, ಹಾಗೂ ತ್ರಿವಿಕ್ರಮ್ ಈ ಮಿಕ್ಕ ಏಳು ಸ್ಪರ್ಧಿಗಳಲ್ಲಿ ಈ ವಾರ ಒಬ್ಬರು ಹೊರಬರುವುದು ಪಕ್ಕಾ ಎನ್ನಲಾಗುತ್ತಿದೆ..
ಬಿಗ್‌ಬಾಸ್ ಕನ್ನಡ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಂಡು ಮುನ್ನುಗ್ಗುತ್ತಿದೆ.. ಫಿನಾಲೆ ಹಂತಕ್ಕೆ ತಲುಪುತ್ತಿರುವ ಈ ಶೋನಲ್ಲಿ ವಾರಕ್ಕೊಂದು ಟ್ವಿಸ್ಟ್ ನೀಡಿ ಬಿಗ್‌ಬಾಸ್ ಕುತೂಹಲ ಕೆರಳಿಸುತ್ತಿದ್ದಾರೆ..
ಹೌದು ಗ್ಯಾಂಡ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವುದರಿಂದ ಮನೆ ಸ್ಪರ್ಧಿಗಳು ಹೊರಬಂದರೇ ನಷ್ಟವಾಗಬಹುದೆಂದು ಈ ವಾರ ಎಲಿಮಿನೇಟ್ ಆದ ಸ್ಪರ್ಧಿಗಳು ಮನೆಯಲ್ಲಿರುವವರಿಗೆ ಎನರ್ಜಿ ತುಂಬಲು ಅಥಿಗಳಾಗಿ ಆಗಮಿಸಲಿದ್ದಾರೆ..
ಹೌದು ಗ್ಯಾಂಡ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವುದರಿಂದ ಮನೆ ಸ್ಪರ್ಧಿಗಳು ಹೊರಬಂದರೇ ನಷ್ಟವಾಗಬಹುದೆಂದು ಈ ವಾರ ಎಲಿಮಿನೇಟ್ ಆದ ಸ್ಪರ್ಧಿಗಳು ಮನೆಯಲ್ಲಿರುವವರಿಗೆ ಎನರ್ಜಿ ತುಂಬಲು ಅಥಿಗಳಾಗಿ ಆಗಮಿಸಲಿದ್ದಾರೆ..
ಸುರೇಶ್, ಐಶ್ವರ್ಯ, ಚೈತ್ರಾ, ಲಾಯರ್ ಜಗದೀಶ್, ಹಂಸ, ಮಾನಸ, ಶಿಶಿರ್, ಧರ್ಮ ಕೀರ್ತಿರಾಜ್ ಈ ಸ್ಪರ್ಧಿಗಳು ಮತ್ತೆ ಬಿಗ್‌ಬಾಸ್ ಮನೆಗೆ ರೀ ಎಂಟ್ರಿ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.. ಈ ಸ್ಪರ್ಧಿಗಳಲ್ಲಿ ಯಾರಾದರೂ ಒಳಕ್ಕೆ ಹೋಗಿ ಅಲ್ಲಿರುವವರಿಗೆ ಎನರ್ಜಿ ತುಂಬಿ, ಅವರ ತಪ್ಪುಗಳ ಅರಿವು ಮೂಡಿಸಿ ವಾಪಸ್ ಆಗುತ್ತಾರೆ ಎನ್ನಲಾಗಿದೆ..
ಆದರೆ ಎಲಿಮಿನೇಟ್ ಆದ ಯಾವ ಸ್ಪರ್ಧಿಗಳು ಮನೆಗೆ ತೆರಳಲಿದ್ದಾರೆ ಎನ್ನುವುದು ಮಾತ್ರ ಇನ್ನೂ ತಿಳಿದು ಬಂದಿಲ್ಲ.. ಈಗಾಗಲೇ ಸೀಸನ್ 10ರ ಕೆಲ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟು ಹೋಗಿದ್ದಾರೆ.. ಅಲ್ಲದೇ ಚೆಂದನವನದ ತಾರೆಗಳಾದ ಅದಿತಿ, ಶರಣ್ ಅವರು ಹನುಮಂತುಗೆ ಗ್ಯ್ರಾಂಡ್ ಫಿನಾಲೆ ಟಿಕೆಟ್ ನೀಡಿ ಶುಭ ಹಾರೈಸಿದ್ದರು..