Ravichandran Ashwin education qualification: ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಅಶ್ವಿನ್ ಎಂಜಿನಿಯರಿಂಗ್ ಬಿಟ್ಟು ಕ್ರಿಕೆಟ್ ಕೈಗೆತ್ತಿಕೊಂಡು ಅನೇಕ ಸ್ಮರಣೀಯ ಪ್ರದರ್ಶನಗಳನ್ನು ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಅಶ್ವಿನ್ ಎಂಜಿನಿಯರಿಂಗ್ ಬಿಟ್ಟು ಕ್ರಿಕೆಟ್ ಕೈಗೆತ್ತಿಕೊಂಡು ಅನೇಕ ಸ್ಮರಣೀಯ ಪ್ರದರ್ಶನಗಳನ್ನು ನೀಡಿದ್ದಾರೆ.
ಆರಂಭಿಕ ಬ್ಯಾಟ್ಸ್ಮನ್ ಮತ್ತು ಮಧ್ಯಮ ವೇಗಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಶ್ವಿನ್, ನಂತರ ಆಫ್ ಸ್ಪಿನ್ ಬೌಲರ್ ಆಗಿ ಹಲವು ದಾಖಲೆಗಳನ್ನು ಮಾಡಿದ್ದಾರೆ.
38 ವರ್ಷದ ರವಿಚಂದ್ರನ್ ಅಶ್ವಿನ್ ಅವರು 17 ಸೆಪ್ಟೆಂಬರ್ 1986 ರಂದು ಚೆನ್ನೈನ ಮೈಲಾಪುರದಲ್ಲಿ ಜನಿಸಿದರು. ಅವರ ತಂದೆ ರವಿಚಂದ್ರನ್ ಸ್ವತಃ ಕ್ಲಬ್ ಕ್ರಿಕೆಟರ್ ಮತ್ತು ವೇಗದ ಬೌಲರ್ ಆಗಿದ್ದರು. ಅಶ್ವಿನ್ ಕೂಡ ಅಧ್ಯಯನದಲ್ಲಿ ತುಂಬಾ ಚುರುಕು. ಚೆನ್ನೈನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಎಸ್ ಎಸ್ ಎನ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಐಟಿ ಪದವಿ ಪಡೆದರು. ಆದರೆ, ಇಂಜಿನಿಯರಿಂಗ್ಗೆ ವಿದಾಯ ಹೇಳಿ ಕ್ರಿಕೆಟನ್ನೇ ತನ್ನ ಹವ್ಯಾಸವನ್ನಾಗಿಸಿಕೊಂಡರು.
ಅಶ್ವಿನ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಕ ಬ್ಯಾಟ್ಸ್ಮನ್ ಆಗಿ ಪ್ರಾರಂಭಿಸಿದರು ಎಂಬುದು ಕೆಲವೇ ಜನರಿಗೆ ತಿಳಿದ ಸಂಗತಿ. ನಂತರ ಮಧ್ಯಮ ವೇಗದ ಬೌಲರ್ ಆದರು. ಅವರ ಬಾಲ್ಯದ ಕೋಚ್ ಸಿಕೆ ವಿಜಯ್ ಅವರಿಗೆ ಆಫ್ ಸ್ಪಿನ್ ಬೌಲಿಂಗ್ ಮಾಡಲು ಸಲಹೆ ನೀಡಿದರು. ಇದರ ಹಿಂದೆ ಎರಡು ಕಾರಣಗಳಿದ್ದವು. ಮೊದಲನೆಯದಾಗಿ, ಅಶ್ವಿನ್ ಅವರ ಎತ್ತರ 6 ಅಡಿ 2 ಇಂಚು, ಇದು ಆಫ್-ಸ್ಪಿನ್ಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಎರಡನೆಯದಾಗಿ, ಒಂದೊಮ್ಮೆ ಅಂಡರ್-16 ಕ್ರಿಕೆಟ್ನಲ್ಲಿ ಆಡುವಾಗ ಗಾಯಗೊಂಡ ಅಶ್ವಿನ್ಗೆ ಓಡಲು ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಸ್ಪಿನ್ ಬೌಲಿಂಗ್ ಮಾಡುವಂತೆ ಸೂಚಿಸಲಾಯಿತು.
ಅಶ್ವಿನ್ ಅವರನ್ನು ಕ್ರಿಕೆಟ್ ಅಭಿಮಾನಿಗಳು ‘ಆಶ್ ಅಣ್ಣ’ ಎಂದೇ ಕರೆಯುತ್ತಾರೆ. 2006 ರಲ್ಲಿ ಹರಿಯಾಣ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದ ಅಶ್ವಿನ್, ಈ ಪಂದ್ಯದಲ್ಲಿ 6 ವಿಕೆಟ್ ಪಡೆಯುವ ಮೂಲಕ ಎಲ್ಲರ ಮನಗೆದ್ದರು. 2010ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 2 ವಿಕೆಟ್ ಪಡೆದಿದ್ದರು. ಅಶ್ವಿನ್ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದೆಹಲಿಯಲ್ಲಿ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಒಟ್ಟು 9 ವಿಕೆಟ್ ಪಡೆದರು. ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಅಂದು ಪಂದ್ಯ ಶ್ರೇಷ್ಠ ಆಟಗಾರ’ರಾಗಿಯೂ ಹೊರಹೊಮ್ಮಿದ್ದರು.
ಐಸಿಸಿ ಆಟಗಾರರ ಶ್ರೇಯಾಂಕದಲ್ಲಿ ಭಾರತಕ್ಕೆ ಅತ್ಯುನ್ನತ ಟೆಸ್ಟ್ ಬೌಲರ್ ಮತ್ತು ಟೆಸ್ಟ್ ಕ್ರಿಕೆಟ್’ನಲ್ಲಿ ಅತ್ಯುನ್ನತ ಶ್ರೇಣಿಯ ಸ್ಪಿನ್ನರ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಒಂಬತ್ತು ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಗಳನ್ನು ಗೆದ್ದಿರುವ ಅವರು, ಯಾವೊಬ್ಬ ಭಾರತೀಯನೂ ಮಾಡಿರದ ವಿಶೇಷ ಸಾಧನೆಯಾಗಿದೆ. ಇದಲ್ಲದೆ ಆರ್ ಅಶ್ವಿನ್ ಅವರು 2014 ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಪಡೆದ 48 ನೇ ಕ್ರಿಕೆಟಿಗರಾಗಿದ್ದಾರೆ.