Liquor facts : ಮದ್ಯ ಪ್ರಿಯರು ಬೇಸಿಗೆಯಲ್ಲಿ ಬಿಯರ್ ಮತ್ತು ಚಳಿಗಾಲದಲ್ಲಿ ರಮ್ ಕುಡಿಬೇಕು ಅಂತ ಸಲಹೆ ನೀಡ್ತಾರೆ. ಆದರೆ ಎಣ್ಣೆ ಅಂದ್ರೇನೆ ವಿಷ.. ಒಂದು ಡ್ರಾಪ್ ಕುಡಿದ್ರೂ ಆರೋಗ್ಯಕ್ಕೆ ಹಾನಿ.. ಆದರೂ ಕುಡಿಯೋದು ಬಿಡಲ್ಲ.. ಅದು ಹಾಗಿರಲಿ.. ಸದ್ಯ ಬೇಸಿಗೆಯಲ್ಲಿ ಬಿಯರ್, ಚಳಿಗಾಲದಲ್ಲಿ ರಮ್ ಕುಡಿಯುವ ಬಗ್ಗೆ ತಿಳಿಯೋಣ ಬನ್ನಿ..
ಫೆಬ್ರವರಿ ತಿಂಗಳು ಅಂತ್ಯದವರೆಗೂ ಚಳಿಗಾಲ.. ಆದರೂ ಅನೇಕ ರಾಜ್ಯಗಳಲ್ಲಿ ತಾಪಮಾನ ಈಗಾಗಲೇ ಹೆಚ್ಚಾಗಿದೆ. ಇದರಿಂದಾಗಿ ಜನರು ಫೆಬ್ರವರಿಯಲ್ಲೇ ಶಾಖವನ್ನು ಅನುಭವಿಸಲು ಪ್ರಾರಂಭಿಸಿದ್ದಾರೆ. ಹೆಚ್ಚುತ್ತಿರುವ ಬಿಸಿಲಿಗೆ ಜನರು ಕಂಗಾಲಾಗಿದ್ದಾರೆ.
ಬಿಸಿಲಿನ ದಿನಗಳಲ್ಲಿ ಬಿಯರ್ ಕುಡಿಯುವುದು ತುಂಬಾ ಒಳ್ಳೆಯದು ಅಂತ ಅದೇಷ್ಟೋ ಮದ್ಯಪ್ರಿಯರು ತಿಳಿದಿದ್ದಾರೆ. ಬಿರು ಬಿಸಿಲಿನಲ್ಲಿ ಬಿಯರ್ ಬಾಟಲಿ ಒಪನ್ ಮಾಡಿ ಕುಡಿದರೆ ಗಂಟಲಿನಿಂದ ಹಿಡಿದು ಹೊಟ್ಟೆಗೆ ಬೀಳುತ್ತಿದ್ದಂತೆ ತಣ್ಣಗಾಗುತ್ತೆ ಅಂತ ಜನರು ಹೇಳುವುದನ್ನು ನೀವು ಕೇಳಿರಬಹುದು.
ಹಾಗೆಯೇ ಚಳಿಗಾಲದಲ್ಲಿ ರಮ್ ಕುಡಿಯುವುದು ಒಳ್ಳೆಯದು ಅಂತ ಮಾತನಾಡುವುದನ್ನು ನೀವು ಕೇಳಿರಬೇಕು. ಹಾಗಾದ್ರೆ, ಮದ್ಯ ಪ್ರಿಯರು ಬೇಸಿಗೆಯಲ್ಲಿ ಬಿಯರ್ ಮತ್ತು ಚಳಿಗಾಲದಲ್ಲಿ ರಮ್ ಏಕೆ ಕುಡಿಯುತ್ತಾರೆ..? ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿಯೋಣ..
ಶೀತ ಪ್ರದೇಶಗಳಲ್ಲಿ ರಮ್ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಏಕೆಂದರೆ ರಮ್ ಕುಡಿಯುವುದರಿಂದ ದೇಹವು ಬೆಚ್ಚಗಿರುತ್ತದೆ ಅಂತ ಹೇಳಲಾಗುತ್ತದೆ. ಮೊದಲನೆಯದಾಗಿ, ಮದ್ಯಪಾನ ಮಾಡುವುದರಿಂದ ದೇಹವು ಏಕೆ ಬಿಸಿಯಾಗುತ್ತದೆ ಎಂಬುದನ್ನು ಕಂಡುಹಿಡಿಯೋಣ.
ರಮ್ ತಯಾರಿಸಲು ಮೊಲಾಸಸ್ ಅನ್ನು ಬಳಸಲಾಗುತ್ತದೆ. ಕಬ್ಬಿನ ರಸದಿಂದ ಸಕ್ಕರೆ ತಯಾರಿಸಿದಾಗ ಸಿಗುವುದು ಇದೇ. ಸಕ್ಕರೆ ತಯಾರಿಸುವ ಪ್ರಕ್ರಿಯೆಯಲ್ಲಿ, ಮೊಲಾಸಸ್ ಎಂದು ಕರೆಯಲ್ಪಡುವ ಈ ಗಾಢ ಬಣ್ಣದ ಉಪ-ಉತ್ಪನ್ನವು ಉತ್ಪತ್ತಿಯಾಗುತ್ತದೆ. ನಂತರ ಅದನ್ನು ಹುದುಗಿಸಲಾಗುತ್ತದೆ.. ನಂತರ ಅದರಿಂದಲೇ ರಮ್ ತಯಾರಿಸಲಾಗುತ್ತದೆ.
ತಜ್ಞರ ಪ್ರಕಾರ, ಡಾರ್ಕ್ ರಮ್ ತಯಾರಿಸುವಾಗ, ಅದಕ್ಕೆ ಮೊಲಾಸಸ್ ಸೇರಿಸುವ ಮೂಲಕ ಪ್ರತ್ಯೇಕವಾಗಿ ಸಂಸ್ಕರಿಸಲಾಗುತ್ತದೆ, ಇದರಿಂದ ಅದರ ಬಣ್ಣ ಗಾಢವಾಗುತ್ತದೆ ಮತ್ತು ಅದರ ರುಚಿ ಸುಧಾರಿಸುತ್ತದೆ. ಈ ಕಾರಣದಿಂದಾಗಿ, ಡಾರ್ಕ್ ರಮ್ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಶಾಖವನ್ನು ಉತ್ಪಾದಿಸಲು ಕಾರಣವಾಗುತ್ತದೆ.
ಅದಕ್ಕಾಗಿಯೇ ಜನರು ಚಳಿಗಾಲದಲ್ಲಿ ರಮ್ ಕುಡಿಯಲು ಇಷ್ಟಪಡುತ್ತಾರೆ. ಈಗ ಎರಡನೇ ಪ್ರಶ್ನೆ ಏನೆಂದರೆ ಬೇಸಿಗೆಯಲ್ಲಿ ಜನರು ಚಿಲ್ಡ್ ಬಿಯರ್ ಕುಡಿಯಲು ಏಕೆ ಇಷ್ಟಪಡುತ್ತಾರೆ..? ಎನ್ನುವುದು.. ಬಿಯರ್ ದೇಹಕ್ಕೆ ಹೀಟ್, ಅದನ್ನು ಫ್ರೀಜರ್ ಅಥವಾ ಐಸ್ ಸಹಾಯದಿಂದ ತಂಪಾಗಿಸಲಾಗುತ್ತದೆ.
ಬಿಯರ್ನಲ್ಲಿರುವ ಎಥೆನಾಲ್ ಅಣುಗಳು ವಿಭಿನ್ನ ತಾಪಮಾನದಲ್ಲಿ ವಿಭಿನ್ನವಾಗಿ ವರ್ತಿಸುತ್ತವೆ. ಬಿಯರ್ ತುಂಬಾ ತಣ್ಣಗಿರುವಾಗ, ಎಥೆನಾಲ್ ಅಣುಗಳು ಬಿಯರ್ನ ರುಚಿಯನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ. ಇದೇ ಕಾರಣಕ್ಕೆ ಜನರು ಯಾವಾಗಲೂ ತಣ್ಣನೆಯ ಬಿಯರ್ ಕುಡಿಯಲು ಇಷ್ಟಪಡುತ್ತಾರೆ.