Bigg Boss Kannada Double elimination: ಈ ವಾರ ಬಿಗ್ ಬಾಸ್ನಲ್ಲಿ ಡಬಲ್ ಎಲಿಮಿನೇಷನ್ ನಡೆಯಲಿದೆ. ಈ ಬಗ್ಗೆ ಬಿಗ್ ಬಾಸ್ ಕಳೆದ ಸಂಚಿಕೆಯಲ್ಲಿ ಖಚಿತ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಈ ವಾರ ಯಾರು ಹೊರಹೋಗಬಹುದು ಎಂಬ ಬಗ್ಗೆ ಭಾರೀ ಕುತೂಹಲ ಇದೆ. ಏಕೆಂದರೆ ಫಿನಾಲೆ ವಾರಕ್ಕೆ ಸಮೀಪವಾಗುತ್ತಿದ್ದಂತೆ ಪ್ರತಿಯೊಬ್ಬ ಸ್ಪರ್ಧಿಯೂ ತನ್ನ ವೇಗವನ್ನು ಚುರುಕುಗೊಳಿಸಿದ್ದಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಈ ವಾರ ಬಿಗ್ ಬಾಸ್ನಲ್ಲಿ ಡಬಲ್ ಎಲಿಮಿನೇಷನ್ ನಡೆಯಲಿದೆ. ಈ ಬಗ್ಗೆ ಬಿಗ್ ಬಾಸ್ ಕಳೆದ ಸಂಚಿಕೆಯಲ್ಲಿ ಖಚಿತ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಈ ವಾರ ಯಾರು ಹೊರಹೋಗಬಹುದು ಎಂಬ ಬಗ್ಗೆ ಭಾರೀ ಕುತೂಹಲ ಇದೆ. ಏಕೆಂದರೆ ಫಿನಾಲೆ ವಾರಕ್ಕೆ ಸಮೀಪವಾಗುತ್ತಿದ್ದಂತೆ ಪ್ರತಿಯೊಬ್ಬ ಸ್ಪರ್ಧಿಯೂ ತನ್ನ ವೇಗವನ್ನು ಚುರುಕುಗೊಳಿಸಿದ್ದಾನೆ.
ಸದ್ಯ ನಾಮಿನೇಷನ್ ತೂಗುಗತ್ತಿ ಎಲ್ಲಾ ಸ್ಪರ್ಧಿಗಳ ತಲೆಯ ಮೇಲೆ ತೂಗುತ್ತಿದೆ. ಹನುಮಂತು ಒಬ್ಬರನ್ನು ಬಿಟ್ಟರೆ ಮತ್ತೆಲ್ಲರಿಗೂ ನಾಮಿನೇಷನ್ ಭೀತಿ ಎದುರಾಗಿದೆ. ಹೀಗಿರುವಾಗ ಈ ವಾರ ಡಬಲ್ ಎಲಿಮಿನೇಷನ್ ಮೂಲಕ ಯಾರು ಹೊರ ಹೋಗುತ್ತಾರೆ ಎಂಬುದು ಭಾರೀ ಕುತೂಹಲ ಸೃಷ್ಟಿಸಿದೆ.
ಇತ್ತೀಚೆಗೆ ವಾಹಿನಿಯು ತಮ್ಮ ವಾಟ್ಸಾಪ್ ಚಾನೆಲ್ನಲ್ಲಿ ವೋಟಿಂಗ್ ಪೋಲ್ ಹಾಕಿತ್ತು. ಇದರಲ್ಲಿ ಈ ವಾರ ಯಾರ ಆಟಕ್ಕೆ ಫುಲ್ ಸ್ಟಾಪ್ ಸಿಗುತ್ತದೆ? ಎಂದು ನಾಮಿನೇಟ್ ಆದ ಸ್ಪರ್ಧಿಗಳ ಹೆಸರುಗಳನ್ನು ನೀಡಲಾಗಿತ್ತು. ಇದರಲ್ಲಿ ಗೌತಮಿ ಜಾಧವ್ ಅವರಿಗೆ ಅತಿ ಹೆಚ್ಚು ಓಟ್ ಬಿದ್ದಿದೆ. ಪಾಸಿಟಿವಿಟಿ ಅಂತನೇ ಹೇಳಿಕೊಂಡು ಇದುವರೆಗೆ ಆಟ ಮುಂದುವರೆಸಿದ್ದ ಗೌತಮಿ ಈ ವಾರ ಹೊರಹೋಗೋದು ಬಹುತೇಕ ಖಚಿತ. ಆದರೆ ಇವರ ಜೊತೆ ಮತ್ತೋರ್ವ ಸ್ಪರ್ಧಿಯೂ ಮನೆಯಿಂದ ಹೊರಹೋಗಲಿದ್ದಾರೆ.
ಬಿಗ್ ಬಾಸ್ ಕಳೆದ ದಿನ ಧನರಾಜ್ ಅವರಿಗೆ ಶಾಕ್ ನೀಡಿದ್ದರು. ಮಿಡ್ ವೀಕ್ ಎಲಿಮಿನೇಷನ್ನಿಂದ ಪಾರಾಗಲು ನೀಡಿದ್ದ ಟಾಸ್ಕ್ನಲ್ಲಿ ನಿಯಮದ ಅರಿವಿಲ್ಲದೆ, ಕನ್ನಡಿ ನೋಡಿಕೊಂಡು ಟಾಸ್ಕ್ ಕಂಪ್ಲೀಟ್ ಮಾಡಿದ್ದರು ಧನರಾಜ್. ಇದನ್ನು ಅರಿತ ಬಿಗ್ ಬಾಸ್ ತಂಡ, ಕೊನೆಗೆ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ್ದರು.
ಆದರೆ ಟಾಸ್ಕ್ ಮುಗಿದು 2 ದಿನಗಳ ಬಳಿಕ ಈ ವಿಚಾರ ಬಹಿರಂಗಗೊಂಡಿತ್ತು. ಅದುವರೆಗೆ ಅವರನ್ನು ಸೇಫ್ ಎಂದೇ ಪರಿಗಣಿಸಿ ವೋಟಿಂಗ್ ಲೈನ್ ಆಫ್ ಮಾಡಿದ್ದರು. ಆದರೆ ಯಾವಾಗ ವಿಚಾರ ಬಹಿರಂಗಗೊಂಡಿತ್ತೋ ಅಂದಿನಿಂದ ಮತ್ತೆ ವೋಟಿಂಗ್ ಲೈನ್ ಅವರ ಹೆಸರಲ್ಲಿ ತೆರೆಯಲಾಗಿದೆ. ಹೀಗಾಗಿ ಇವರಿಗೆ 2 ದಿನಗಳಿಂದ ಬರಬೇಕಿದ್ದ ಓಟ್ ಸ್ಥಗಿತವಾಗಿತ್ತು. ವಾರದ 5 ದಿನವಷ್ಟೇ ಓಟಿಂಗ್ ಲೈನ್ ಓಪನ್ ಇರುತ್ತದೆ. ಆದರೆ ಈ ವಾರ ಧನರಾಜ್ ಅವರಿಗೆ ಅದರ ಪ್ರಯೋಜನ ಸಿಗುವುದು ಕೇವಲ 3 ದಿನವಷ್ಟೇ. ಹೀಗಾಗಿ ಈ ವಾರ ಅತಿ ಕಡಿಮೆ ಓಟ್ ಧನರಾಜ್ ಅವರಿಗೆ ಸಿಗುವ ಸಾಧ್ಯತೆ ಇದೆ.
ಆದರೆ ಇದುವರೆಗಿನ ಆಟದ ವೈಖರಿ, ಮನರಂಜನೆ, ಮನೆಯಲ್ಲಿ ಎಲ್ಲರ ಜೊತೆ ತೊಡಗಿಸಿಕೊಂಡ ರೀತಿಯನ್ನು ಗಮನಿಸಿದರೆ, ಧನರಾಜ್ ಎಲಿಮಿನೇಟ್ ಆಗುವುದು ಅನುಮಾನ. ಇವರ ಬದಲಿಗೆ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಸೈಲೆಂಟ್ ಆಗಿಯೇ, ತಮ್ಮಷ್ಟಕ್ಕೆ ತಾವೇ ಕಾಲ ಕಳೆಯುತ್ತಿರುವ ಮೋಕ್ಷಿತಾ ಹೊರಹೋಗಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
ಬಿಗ್ ಬಾಸ್ನಲ್ಲಿ ಗೌತಮಿ ಆಟವನ್ನು ಬಹಳಷ್ಟು ಜನ ಮೆಚ್ಚುತ್ತಿಲ್ಲ. ಪಾಸಿಟಿವಿಟಿ ಎಂದೇ ಹೇಳಿಕೊಂಡು ನೆಗೆಟಿವಿಟಿಯನ್ನೇ ತುಂಬಿಕೊಂಡಿದ್ದಾರೆ ಎಂದು ಅನೇಕರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಉಗ್ರಂ ಮಂಜು ಮತ್ತು ಗೌತಮಿ ಸ್ನೇಹಕ್ಕೂ ವಿರುದ್ಧವಾಗಿ ಟ್ರೋಲ್ ಪೇಜ್ಗಳು ಪೋಸ್ಟ್ ಹಂಚಿಕೊಳ್ಳುತ್ತಿವೆ. ಹೀಗಾಗಿ ಈ ವಾರ ಗೌತಮಿ ಹೊರಹೋಗುವುದು ಬಹುತೇಕ ಖಚಿತವಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರವಾಗುತ್ತಿರುವ ವರದಿಗಳನ್ನು ಅನುಸರಿಸಿ ಈ ಸುದ್ದಿ ಬರೆಯಲಾಗಿದೆ.