Adah Sharma : ಸೌತ್ ಸಿನಿಮಾಗಳಲ್ಲಿ ಗುರುತಿಸಿಕೊಂಡು ಸಧ್ಯ ಬಾಲಿವುಡ್‌ಗೆ ಕಾಲಿಟ್ಟ ಈ ಸ್ಟಾರ್ ಹೀರೋಯಿನ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಂಡರು. ಇದೀಗ ಈ ನಡುವೆ ಏನಾಯ್ತು ಅಂತ ಗೊತ್ತಿಲ್ಲ.. ನಟಿ ಬೀದಿ ಬದಿ ಹಳೆಯ ಸೀರೆ ತೊಟ್ಟು ತರಕಾರಿ ಖರೀದಿಸುತ್ತಿರುವ ಫೋಟೋ ಒಂದು ಸಖತ್ ವೈರಲ್ ಆಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಕೆಲವು ನಟಿಯರು ಸೌತ್‌ನಲ್ಲಿ ಸಿನಿಮಾ ಮಾಡಿ ಇದೀಗ ಬಾಲಿವುಡ್‌ಗೆ ಹೋಗುತ್ತಿದ್ದಾರೆ. ಅದರಂತೆ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದ ನಾಯಕಿಯೊಬ್ಬರ ಇತ್ತೀಚಿನ ಫೋಟೋ ಇದೀಗ ನೆಟ್ಟಿಗರನ್ನು ಗಮನ ಸೆಳೆಯುತ್ತಿದೆ..
ಒಂದು ಕಾಲದಲ್ಲಿ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಈ ಸುಂದರಿ, ಆ ಬಳಿಕ ಬಾಲಿವುಡ್‌ನಲ್ಲಿ ಬ್ಯುಸಿ ನಾಯಕಿಯಾದರು. ಹಲವಾರು ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನೂ ನೀಡಿದ್ದಾರೆ.
ಆದರೆ ಏನಾಯಿತೋ ಎನೋ.. ಇತ್ತೀಚಿಗೆ ಈ ನಟಿ ಬೀದಿ ಬದಿ ಹಳೆಯ ಸೀರೆ ತೊಟ್ಟು ತರಕಾರಿ ಖರೀದಿಸುತ್ತಿರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ..
ಕಳೆದ ಕೆಲವು ದಿನಗಳ ಹಿಂದೆ ದಿವಂಗತ ನಟ ಸುಶಾಂತ್ ಸಿಂಗ್ ಮನೆ ಖರೀದಿಸಿದ್ದ ಈ ನಟಿ ಇದೀಗ ಬೀದಿಗೆ ಬಂದಿದ್ದಾದರೂ ಹೇಗೆ...
ಸಿನಿಮಾ ಜಾಹೀರಾತುಗಳಿದ್ದ ಗಳಿಸಿದ್ದ ಕೋಟಿ.. ಕೋಟಿ.. ಹಣ ಎಲ್ಲಿ ಹೋಯ್ತು..? ಎನ್ನುವ ಅನುಮಾನ ಮೂಡಿಸುತ್ತಿದೆ..
ಆಕೆ ಬೇರೆ ಯಾರೂ ಅಲ್ಲ ಹಾಟ್ ಬ್ಯೂಟಿ ಅದಾ ಶರ್ಮಾ. ಪುನೀತ್ ರಾಜ್‌ಕುಮಾರ್ ನಟನೆಯ ರಣ ವಿಕ್ರಮ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.
ಹಾರ್ಟ್ ಅಟ್ಯಾಕ್ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದರು. ನಂತರ ಹಲವಾರು ಚಿತ್ರಗಳಲ್ಲಿ ಎರಡನೇ ನಾಯಕಿಯಾಗಿ ನಟಿಸಿದರು.
ಈ ಚೆಲುವೆ ಬಾಲಿವುಡ್‌ನಲ್ಲಿ ಲೇಡಿ ಓರಿಯೆಂಟೆಡ್ ಸಿನಿಮಾಗಳ ಮೂಲಕ ಜನಪ್ರಿಯರಾದರು. ಅದಾ ಶರ್ಮಾ ಅವರ ʼದಿ ಕೇರಳ ಸ್ಟೋರಿʼ ಚಿತ್ರ ದೊಡ್ಡ ಹಿಟ್ ಆಯಿತು.
ಸಧ್ಯ ಅದಾಗೆ ಸಂಬಂಧಿಸಿದ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಇದರಲ್ಲಿ ಅದಾ ಹಳೆ ಸೀರೆಯುಟ್ಟು ಬೀದಿ ಬದಿ ತರಕಾರಿ ಖರೀದಿಸುತ್ತಿದ್ದಾರೆ..
ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ.. ನೆಟ್ಟಿಗರು ಶಾಕ್‌ಗೆ ಒಳಗಾಗುತ್ತಿದ್ದಾರೆ.. ಅಲ್ಲದೆ, ಈಕೆಗೆ ಈ ಗತಿ ಏಕೆ ಬಂತು ಅಂತ ಪ್ರಶ್ನಿಸುತ್ತಿದ್ದಾರೆ.. ಆದ್ರೆ ಇದು ಸಿನಿಮಾಗೆ ಸಬಂಧಿಸಿದ ಫೋಟೋ.. ಜಸ್ಟ್ ವೈರಲ್ ಆಗಿದೆ ಅಷ್ಟೇ..