BBK rajath kishan Remuneration: ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಶೋ ಬಿಗ್ಬಾಸ್ ಇದೀಗ ಮತ್ತೆ ಎಲ್ಲರನ್ನು ಮತ್ತೆ ತನ್ನತ್ತ ಸೆಳೆಯುತ್ತಿದೆ.. ಕಾರಣ ವೈಲ್ಡ್ ಕಾರ್ಡ್ ಎಂಟ್ರಿಯಿಂದ ದೊಡ್ಮನೆ ಹೀಟ್ ಹೆಚ್ಚಿಸಿದ ಇಬ್ಬರು ಸ್ಪರ್ಧಿಗಳಿಂದ.. ಶೋಭಾ ಶೆಟ್ಟಿ ಹಾಗೂ ರಜತ್ ಕಿಶನ್ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದರು. ಅದರಲ್ಲಿ ಶೋಭಾ ತಮ್ಮ ಆಟವನ್ನು ಅರ್ಧಕ್ಕೆ ಮುಗಿಸಿ ಹೊರನಡೆದರೇ ರಜತ್ ಬಿಗ್ಬಾಸ್ ಮನೆಯಲ್ಲಿ ಕಿಚ್ಚೆಬ್ಬಿಸಿದ್ದಾರೆ.
ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ರಜತ್ ಕಿಶನ್ ಬಿಗ್ಬಾಸ್ ಮನೆಯಲ್ಲಿ ಕಾವು ಹೆಚ್ಚಿಸಿದ್ದಾರೆ.. ದೊಡ್ಮನೆಯಲ್ಲಿ 50 ದಿನ ಕಳೆದಿರುವ ಸ್ಪರ್ಧಿಗಳು ಅವರನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.. ರಜತ್ ಅವರ ಖಡಕ್ ಆಟಕ್ಕೆ ತ್ರಿವಿಕ್ರಮ್ ಹಾಗೂ ಉಗ್ರಂ ಮಂಜು ಪೈಪೋಟಿ ನೀಡುತ್ತಿದ್ದಾರೆ..
ದೊಡ್ಮನೆಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರಜತ್ ಕಿರುತೆರೆ ಪ್ರೇಕ್ಷಕರ ಕಣ್ಣಿಗೆ ಬಿದ್ದದ್ದಾರೆ. ಬಿಗ್ಬಾಸ್ ಮನೆಯಿಂದ ಲಾಯರ್ ಜಗದೀಶ್ ಹೊರಬಂದ ಮೇಲೆ ಹನುಮಂತ ಅವರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದಾರೆ..
ಇದರ ಬಳಿಕ ಶೋಭಾ ಶೆಟ್ಟಿ-ರಜತ್ ಎಂಟ್ರಿ ಕೊಟ್ಟು ಬಿಗ್ಬಾಸ್ ಮನೆಯಲ್ಲಿ ಧೂಳೆಬ್ಬಿಸಿದ್ದರು. ಸದ್ಯ ದೊಡ್ಮನೆಯಲ್ಲಿ ಬಿರುಗಾಳಿ ಎಬ್ಬಿಸಿರುವ ರಜತ್ ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಎನ್ನುವುದರ ಮಾಹಿತಿ ಹೊರಬಿದ್ದಿದೆ..
ಮನೆಗೆ ಕಾಲಿಟ್ಟ ಒಂದೇರಡೇ ದಿನದಲ್ಲಿ ರಜತ್ ಹಾಗೂ ಗೋಲ್ಡ್ ಸುರೇಶ್ ಮದ್ಯೆ ಜಗಳ ನಡೆದಿತ್ತು.. ರಜತ್ ನಡುವಳಿಕೆಗೆ ಸುರೇಶ್ ಬೇಸೋತ್ತು ಹೋಗಿದ್ದರು.. ಇದಲ್ಲದೇ ಇವರ ಪದ ಬಳಕೆಯನ್ನು ಮೋಕ್ಷಿತಾ, ಹನುಮಂತ, ಶೋಭಾ ಶೆಟ್ಟಿ ತೀತ್ರವಾಗಿ ವಿರೋಧಿಸಿದ್ದರು.. ಹೀಗೆ ಮೊದಲ ವಾರದಿಂದಲೂ ರಜತ್ ಬಿಗ್ಬಾಸ್ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆ ಸೃಷ್ಟಿ ಕಾವು ಹೆಚ್ಚಿಸುತ್ತಿದ್ದಾರೆ..
ಇದೀಗ ಬಂದಿರುವ ಮಾಹಿತಿಯ ಪ್ರಕಾರ ಧನರಾಜ್ ಅವರ ಮೇಲೆ ಕೈ ಮಾಡಿ ಬಿಗ್ಬಾಸ್ ಮನೆಯಿಂದ ಹೊರ ಹೋದರು ಎನ್ನಲಾದ ರಜತ್ ಒಂದು ವಾರಕ್ಕೆ 90 ರಿಂದ 1 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ..
ಕೆಲವು ವರದಿಗಳ ಪ್ರಕಾರ ರಜತ್ ಅವರನ್ನು ಬಿಗ್ಬಾಸ್ ಮನೆಯೊಳಗೆ ಕಾಲಿಡಲು 1.20 ಸಂಭಾವನೆ ಕೇಳೀದ್ದರಂತೆ.. ಆದರೆ ಟೀಂ ಅವರೊಂದಿಗೆ ಮಾತನಾಡಿ 80 ಸಾವಿರ ಆಫರ್ ನೀಡಿತ್ತು ಎನ್ನಲಾಗಿದೆ.. ಬಳಿಕ ಬಹುದಿನಗಳ ಕಾಲ ಚರ್ಚೆ ಮಾಡಿ ಕೊನೆಗೆ ಈ ಮೇಲಿನ ಹಣಕ್ಕೆ ರಜತ್ ಬಿಗ್ಬಾಸ್ ಮನೆಗೆ ಬರಲು ಗ್ರೀನ್ ಸಿಗ್ನಲ್ ನೀಡಿದ್ದರಂತೆ.. ಆದರೆ ಈ ಬಗ್ಗೆ ಯಾವುದೇ ಅಧೀಕೃತ ಮಾಹಿತಿಗಳು ಅವರ ಕುಟುಂಬ ಅಥವಾ ಕಲರ್ಸ್ ಕನ್ನಡ ವಾಹಿನಿಂದ ಬಂದಿಲ್ಲ..
ಸದ್ಯ ರಜತ್ ಬಿಗ್ಬಾಸ್ ಮನೆಯಲ್ಲಿ ಹಲಚಲ್ ಎಬ್ಬಿಸಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದರು.. ಇವರ ಖಡಕ್ ಆಟಕ್ಕೆ ಮನೆಮಂದಿ ಸುಸ್ತಾಗಿ ಹೋಗಿದ್ದಲ್ಲದೇ.. ಕೆಲವರು ಅವರ ಪದ ಬಳಕೆಯಿಂದ ಕೆಂಡಾಮಂಡಲವಾಗಿದ್ದರು.. ಆದರೆ ಇದೀಗ ಅದೆಲ್ಲವನ್ನೂ ಮೀರಿ ರಜತ್ ಫೈನಲಿಸ್ಟ್ ಆಗಿ ಫಿನಾಲೆ ತಲುಪಿದ್ದಾರೆ.