Cinnamon For Weightloss: ದಾಲ್ಚಿನ್ನಿ.. ಇದು ಮಸಾಲೆಗಳಲ್ಲಿ ಪ್ರಮುಖವಾದ ಪದಾರ್ಥವಾಗಿದೆ. ಇದನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಇದು ದೇಹದಿಂದ ವಿಷ ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ತುಂಬಾ ಒಳ್ಳೆಯದು.
Cinnamon For Weightloss: ದಾಲ್ಚಿನ್ನಿ.. ಇದು ಮಸಾಲೆಗಳಲ್ಲಿ ಪ್ರಮುಖವಾದ ಪದಾರ್ಥವಾಗಿದೆ. ಇದನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಇದು ದೇಹದಿಂದ ವಿಷ ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ತುಂಬಾ ಒಳ್ಳೆಯದು.
ದಾಲ್ಚಿನ್ನಿಯಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಮೆಗ್ನೀಸಿಯಮ್, ರಂಜಕ, ತಾಮ್ರ, ಸತು, ಜೀವಸತ್ವಗಳು, ನಿಯಾಸಿನ್ ಮತ್ತು ಥಯಾಮಿನ್ ಸೇರಿದಂತೆ ಹಲವು ಪೋಷಕಾಂಶಗಳಿವೆ.
ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ದಾಲ್ಚಿನ್ನಿ ಕಡ್ಡಿಯನ್ನು ನೆನೆಸಿ, ಮರುದಿನ ಬೆಳಿಗ್ಗೆ ಆ ನೀರನ್ನು ಕುಡಿಯಿರಿ. ಅಥವಾ ದಾಲ್ಚಿನ್ನಿ ತುಂಡುಗಳನ್ನು ಕತ್ತರಿಸಿ, ನೀರಿನಲ್ಲಿ ಕುದಿಸಿ ಕುಡಿಯಿವುದರಿಂದ ನಮಗೆ ಹಲವಾರು ಪ್ರಯೋಜನೆಗಳು ದೊರೆಯುತ್ತದೆ.
ಒಂದು ಪಾತ್ರೆಯಲ್ಲಿ 2 ಗ್ಲಾಸ್ ನೀರು, ದಾಲ್ಚಿನ್ನಿ ತುಂಡುಗಳು ಮತ್ತು ಶುಂಠಿ ಹೋಳುಗಳನ್ನು ಸೇರಿಸಿ ಕುದಿಸಿ. ಈ ನೀರನ್ನು ಸೋಸಿ ಜೇನುತುಪ್ಪ ಮತ್ತು ನಿಂಬೆ ರಸದೊಂದಿಗೆ ಕುಡಿಯುವುದರಿಂದ ಪ್ರಯೋಜನಗಳನ್ನು ಪಡೆಯಬಹುದು.
ಈ ದಾಲ್ಚಿನ್ನಿ ಬಳಸುವುದರಿಂದ ಹಲ್ಲುನೋವು, ವಸಡಿನ ಸಮಸ್ಯೆಗಳು ಮತ್ತು ವಸಡಿನಲ್ಲಿನ ಉರಿಯೂತವನ್ನು ಗುಣಪಡಿಸಬಹುದು. ಆದ್ದರಿಂದ, ಇದನ್ನು ನಿಯಮಿತವಾಗಿ ಬಳಸಬೇಕು.
ದಾಲ್ಚಿನ್ನಿ ನೀರು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಲು ಮತ್ತು ಅದನ್ನು ಸಮತೋಲನಗೊಳಿಸಲು ಈ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು.
ಈ ದಾಲ್ಚಿನ್ನಿ ಕಡ್ಡಿಯನ್ನು ನೀರಿನಲ್ಲಿ ನೆನೆಸಿ, ಕುದಿಸಿ, ಕುಡಿಯುವುದರಿಂದ ದೇಹದಲ್ಲಿನ ಕ್ಯಾಲೊರಿಗಳನ್ನು ಸುಡಲು ಸಹಾಯವಾಗುತ್ತದೆ.
ಈ ನೀರು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದ್ದು, ನಿಯಮಿತವಾಗಿ ಸೇವಿಸಿದರೆ ಚರ್ಮವು ಕಾಂತಿಯುತವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.