Astro Tips: ಸೂರ್ಯದೇವನ ಆಶೀರ್ವಾದದಿಂದ ಜನವರಿಯಲ್ಲಿ ಈ 5 ರಾಶಿಗಳಿಗೆ ಲಕ್ಷಾಧಿಪತಿ ಯೋಗ!!

Lucky zodiac signs: ಜನವರಿ ತಿಂಗಳಿನಲ್ಲಿ ಕೆಲವು ರಾಶಿಗಳಿಗೆ ಅದೃಷ್ಟದ ಬೆಂಬಲ ದೊರೆಯಲಿದೆ. ಉದ್ಯೋಗ, ವ್ಯವಹಾರ ಮತ್ತು ಹಣಕಾಸಿನ ವಿಷಯಗಳಲ್ಲಿ ಈ ರಾಶಿಯವರಿಗೆ ಅಪಾರ ಯಶಸ್ಸು ಸಿಗುವ ಸಾಧ್ಯತೆಯಿದೆ.

Lucky zodiac signs: ಜನವರಿ ತಿಂಗಳು ಕೆಲವು ರಾಶಿಗಳಿಗೆ ಬಹಳ ವಿಶೇಷವಾಗಿದೆ. ಈ ತಿಂಗಳು ಗ್ರಹ & ನಕ್ಷತ್ರಗಳ ಸ್ಥಾನ 5 ರಾಶಿಗಳ ಅದೃಷ್ಟ ಬೆಳಗಿಸಲಿವೆ. ಉದ್ಯೋಗ, ವ್ಯವಹಾರ ಮತ್ತು ಹಣಕಾಸಿನ ವಿಷಯಗಳಲ್ಲಿ ಈ ರಾಶಿಯವರಿಗೆ ಅಪಾರ ಯಶಸ್ಸು ಸಿಗುವ ಸಾಧ್ಯತೆಯಿದೆ. ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಈ ಶುಭ ದಿನವನ್ನು ಸರಿಯಾಗಿ ಬಳಸಿಕೊಳ್ಳಲು ದೇವರ ಆರಾಧನೆ & ಸಕಾರಾತ್ಮಕ ಚಿಂತನೆ ಅಳವಡಿಸಿಕೊಳ್ಳುವುದು ಮುಖ್ಯ. ಜನವರಿಯಲ್ಲಿ ಯಾವ 5 ರಾಶಿಗಳ ಭವಿಷ್ಯ ಬದಲಾಗಲಿದೆ ಎಂದು ತಿಳಿಯಿರಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ವೃಷಭ ರಾಶಿಯವರಿಗೆ ಜನವರಿ ತಿಂಗಳು ತುಂಬಾ ಶುಭಕರ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಹೊಸ ಮಾರ್ಗಗಳು ತೆರೆಯಲಿವೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಹಳೆಯ ಸಾಲಗಳಿಂದ ಮುಕ್ತರಾಗುವಿರಿ. ಕುಟುಂಬದೊಂದಿಗೆ ಆಹ್ಲಾದಕರ ಸಮಯ ಕಳೆಯುವ ಅವಕಾಶ ಪಡೆಯುತ್ತೀರಿ. ನಿಮ್ಮ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಸೂರ್ಯದೇವನ ಆಶೀರ್ವಾದದಿಂದ ಜೀವನದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ಈ ರಾಶಿಯ ಮಹಿಳೆಯರಿಗೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. 

2 /5

ಜನವರಿ ತಿಂಗಳು ಸಿಂಹ ರಾಶಿಯವರಿಗೆ ಅಪಾರ ಸುಖ-ಸಂತೋಷವನ್ನು ತರಲಿದೆ. ಬಹಳ ದಿನಗಳಿಂದ ಬಾಕಿ ಇದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ನೀವು ವಿಶೇಷ ವ್ಯಕ್ತಿಯ ಬೆಂಬಲ ಪಡೆಯುತ್ತೀರಿ. ಕುಟುಂಬದಲ್ಲಿ ಪ್ರೀತಿ, ಉತ್ಸಾಹದ ವಾತಾವರಣವಿರುತ್ತದೆ. ಸಮಾಜದಲ್ಲಿ ನೀವು ಮಾಡುವ ಉತ್ತಮ ಕಾರ್ಯಗಳನ್ನು ಗುರುತಿಸಲಾಗುತ್ತದೆ. ಆಪ್ತರೊಂದಿಗೆ ನಿಮ್ಮ ಸಂಬಂಧ ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಸೂರ್ಯ ದೇವನ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

3 /5

ಜನವರಿ ತಿಂಗಳು ತುಲಾ ರಾಶಿಯವರಿಗೆ ವೃತ್ತಿಜೀವನದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ. ನೀವು ಹೊಸ ಉದ್ಯೋಗದ ಪ್ರಸ್ತಾಪ ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯುತ್ತೀರಿ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು. ಅದೃಷ್ಟದ ಬೆಂಬಲದಿಂದ ನಿಮಗೆ ಧನಲಾಭವಾಗಲಿದೆ. 

4 /5

ಆರ್ಥಿಕ ವಿಷಯಗಳಲ್ಲಿ ಧನು ರಾಶಿಯವರಿಗೆ ಜನವರಿ ತಿಂಗಳು ಉತ್ತಮವಾಗಿರಲಿದೆ. ಈ ಸಮಯ ಹೂಡಿಕೆಗೆ ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ. ಇದು ಭವಿಷ್ಯದಲ್ಲಿ ನಿಮಗೆ ದೊಡ್ಡ ಲಾಭವನ್ನು ತರುತ್ತದೆ. ಹಣದ ಹರಿವು ಹೆಚ್ಚಾಗಲಿದ್ದು, ಬೇರೆಡೆ ಸಿಲುಕಿರುವ ಹಣ ಮರಳಿ ಸಿಗಲಿದೆ. ಶೀಘ್ರವೇ ನಿಮಗೆ ಶುಭ ಸುದ್ದಿ ಸಿಗಲಿದೆ.

5 /5

ಜನವರಿ ತಿಂಗಳು ಮೀನ ರಾಶಿಯವರಿಗೆ ಹೊಸ ಆರಂಭವೆಂದೇ ಹೇಳಬಹುದು. ನೀವು ವೃತ್ತಿ ಮತ್ತು ಶಿಕ್ಷಣದಲ್ಲಿ ಉತ್ತಮ ಅವಕಾಶ ಪಡೆಯಬಹುದು. ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಕನಸುಗಳನ್ನು ನನಸಾಗಿಸುವ ಸಮಯ ಇದಾಗಿರುತ್ತದೆ. ಅದೃಷ್ಟದ ಬೆಂಬಲದಿಂದ ನೀವು ಆರ್ಥಿಕ ಪ್ರಗತಿ ಕಾಣುವಿರಿ.