Actress Life : ಈ ಪ್ರೀತಿಯೇ ಹೀಗೆ ಯಾವಾಗ ಬ್ರೇಕ್ ಆಗುತ್ತೆ ಯಾವಾಗ ಯಾರ್ ಮೇಲೆ ಹುಟ್ಟುತ್ತೇ ಅಂತ ಹೇಳೋಕೆ ಆಗಲ್ಲ. ಸೆಲೆಬ್ರಿಟಿಗಳು ಸಹ ಇದರಿಂದ ಹೊರತಾಗಿಲ್ಲ. ಅವರೂ ಲವ್ ಫೆಲ್ಯೂರ್ ಅನುಭವಿಸಿರುತ್ತಾರೆ. ಮದುವೆ ಆದರೂ ವಿಚ್ಛೇದನ ಆಗಿ ನೋವನ್ನು ಅನುಭವಿಸಿ.. ಮತ್ತೇ ಮದುವೆಗೆ ರೆಡಿಯಾದ ನಟ-ನಟಿಯರೂ ಇದ್ದಾರೆ..
ಇತ್ತೀಚಿಗೆ ಸೆಲೆಬ್ರಿಟಿಗಳು ಲವ್ ಫೆಲ್ಯೂರ್.. ಡಿವೋರ್ಸ್.. ಸೇರಿದಂತೆ ಹಲವಾರು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸಧ್ಯ ಎರಡನೇ ಮದುವೆ ವಿಚಾರವಾಗಿ ಸ್ಟಾರ್ ನಟಿಯೊಬ್ಬರು ಮುನ್ನೆಲೆಗೆ ಬಂದಿದ್ದಾರೆ.
ರಶ್ಮಿ ದೇಸಾಯಿ.. ಕಿರುತೆಯ ಪ್ರಸಿದ್ಧ ನಟಿ.. ಈ ಸುಂದರಿ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ನೋವನ್ನು ಅನುಭವಿಸಿ ಇದೀಗ ಮರು ಮದುವೆಗೆ ರೆಡಿಯಾಗಿದ್ದಾರೆ.
ಆಜ್ ತಕ್ ವರದಿಯ ಪ್ರಕಾರ, ರಶ್ಮಿ ದೇಸಾಯಿ ಸಂದರ್ಶನವೊಂದರಲ್ಲಿ ತಮ್ಮ ವಿವಾಹ ಜೀವನದ ಬಗ್ಗೆ ಬಹಿರಂಗಪಡಿಸಿದ್ದಾರೆ. "ನನಗೆ ಪ್ರೀತಿಯ ಬಗ್ಗೆ ತಿಳಿದಿಲ್ಲ, ಆದರೆ ನಾನು ಹಲವು ಬಾರಿ ತಪ್ಪು ನಿರ್ಧಾರ ಕೈಗೊಂಡೆ ಅಂತ ಹೇಳಿಕೊಂಡಿದ್ದಾರೆ..
ನನ್ನ ಕುಟುಂಬ ನನಗೆ ಒಳ್ಳೆಯ ಸಂಗಾತಿಯನ್ನು ಹುಡುಕುತ್ತಿದೆ. ನನಗೆ ಅದು ಸಿಕ್ಕರೆ, ನಾನು ಮದುವೆಯಾಗುತ್ತೇನೆ. ಆದರೆ ಆತುರವಿಲ್ಲ ಎಂದು ನಟಿ ಮರು ಮದುವೆಯ ಬಗ್ಗೆ ಹೇಳಿಕೊಂಡಿದ್ದಾಳೆ.
ನಿಮಗೆ ಯಾವ ರೀತಿಯ ಗಂಡ ಬೇಕು ಎಂಬ ಪ್ರಶ್ನೆಗೆ ಉತ್ತರಿಸಿ ರಶ್ಮಿ, "ನನಗೆ ಎಲ್ಲದರ ಬಗ್ಗೆ ಸ್ಪಷ್ಟವಾಗಿ ತಿಳಿದಿರುವ ಸಂಗಾತಿ ಬೇಕು" ಎಂದು ನಟಿ ಹೇಳಿದ್ದಾರೆ..
ಅಂದಹಾಗೆ ರಶ್ಮಿ ದೇಸಾಯಿ 2011 ರಲ್ಲಿ ನಟ ನಂದೀಶ್ ಅವರನ್ನು ವಿವಾಹವಾದರು. 4 ವರ್ಷಗಳಲ್ಲಿ ಡಿವೋರ್ಸ್ ಪಡೆದರು. ಅನಂತರ, ರಶ್ಮಿ ಹೆಸರು ಅನೇಕ ನಟರೊಂದಿಗೆ ತಳುಕು ಹಾಕಿಕೊಂಡಿತು.
ಈ ಮಧ್ಯ ರಶ್ಮಿ ದೇಸಾಯಿ ಅನೇಕ ಧಾರಾವಾಹಿಗಳ ಮೂಲಕ ತಮ್ಮ ನಟನಾ ಛಾಪನ್ನು ತೋರಿದ್ದಾರೆ. ಅಲ್ಲದೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.
ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಸುಂದರಿ.. ಆಗಾಗ ಫೋಟೋ ಮತ್ತು ತಪ್ಪು ಜೀವನದ ಬಹುಮುಖ್ಯ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ..