Vastu Tips: ಇಂದಿನ ಆಧುನಿಕ ಯುಗದಲ್ಲೂ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಮಹತ್ವವಿದೆ. ಅನೇಕ ಜನರು ಕೆಲವು ಶುಭ ಕಾರ್ಯಗಳನ್ನು ಮಾಡಲು, ಮನೆಯನ್ನು ಕಟ್ಟಲು ವಾಸ್ತು ಶಾಸ್ತ್ರವನ್ನು ಅನುಸರಿಸಿ ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿ ದಿಕ್ಕಿಗೆ ಬೇರೆ ಬೇರೆ ಮಹತ್ವವಿದೆ ಎಂದು ಹಲವರು ನಂಬುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಇಂದಿನ ಆಧುನಿಕ ಯುಗದಲ್ಲೂ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಮಹತ್ವವಿದೆ. ಅನೇಕ ಜನರು ಕೆಲವು ಶುಭ ಕಾರ್ಯಗಳನ್ನು ಮಾಡಲು, ಮನೆಯನ್ನು ಕಟ್ಟಲು ವಾಸ್ತು ಶಾಸ್ತ್ರವನ್ನು ಅನುಸರಿಸಿ ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿ ದಿಕ್ಕಿಗೆ ಬೇರೆ ಬೇರೆ ಮಹತ್ವವಿದೆ ಎಂದು ಹಲವರು ನಂಬುತ್ತಾರೆ.
ಇಂದ್ರನು ಪೂರ್ವದಲ್ಲಿ, ವರುಣನು ಪಶ್ಚಿಮದಲ್ಲಿ, ಕುಬೇರನು ಉತ್ತರದಲ್ಲಿ ಮತ್ತು ಯಮನು ದಕ್ಷಿಣದಲ್ಲಿ, ಈಶಾನ್ಯದಲ್ಲಿ ಈಶ್ವರ, ಆಗ್ನೇಯದಲ್ಲಿ ಅಗ್ನಿ, ವಾಯುವ್ಯದಲ್ಲಿ ವಾಯು ಮತ್ತು ನೈಋತ್ಯದಲ್ಲಿ ರಾಕ್ಷಸನಿದ್ದಾನೆ ಎಂಬುದು ವಾಸ್ತು ಪ್ರಕಾರ ನಂಬಿಕೆ.
ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬೇಕು ಎಂಬುದು ನಿಮಗೆ ತಿಳಿದಿದೆಯೇ? ಅದರಲ್ಲೂ ಶುಭಸಂದರ್ಭ ಮತ್ತು ಹಬ್ಬಗಳ ಸಂದರ್ಭದಲ್ಲಿ ಯಾವ ದಿಕ್ಕಿನಲ್ಲಿ ಕುಳಿತು ಏಕೆ ಊಟ ಮಾಡಬೇಕು? ಊಟ ಮಾಡುವಾಗ ಯಾವ ವಿಧಾನಗಳನ್ನು ಅನುಸರಿಸಬೇಕು? ಯಾವ ದಿಕ್ಕಿಗೆ ಮಾಡಬಾರದು ಎಂಬ ಕುತೂಹಲಕಾರಿ ಅಂಶಗಳನ್ನು ಈಗ ತಿಳಿಯೋಣ.
ಗಣೇಶ ಹಬ್ಬ ಹಿಂದೂಗಳ ಪಾಲಿಗೆ ಮಹತ್ವಪೂರ್ಣ ಹಬ್ಬ. ಈ ಸಂದರ್ಭದಲ್ಲಿ ಅನೇಕರು ತಮ್ಮ ಮನೆಗಳಲ್ಲಿ ಗಣಪನನ್ನು ಸ್ಥಾಪಿಸಿ, ಪೂಜೆ ಮಾಡಿ ಹಬ್ಬ ಆಚರಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಭೋಜನ ಮಾಡುವಾಗ, ಕೆಲವೊಂದು ಪದ್ಧತಿಗಳನ್ನು ಅನುಸರಿಸಬೇಕು. ಅದರಲ್ಲೂ ಮುಖ್ಯವಾಗಿ ಊಟ ಮಾಡಲು ಕುಳಿತುಕೊಳ್ಳುವ ದಿಕ್ಕು.
ವಾಸ್ತು ಶಾಸ್ತ್ರದ ಪ್ರಕಾರ ಗಣೇಶ ಹಬ್ಬದ ದಿನ ದಕ್ಷಿಣ ದಿಕ್ಕಿನಲ್ಲಿ ಕುಳಿತು ಊಟ ಮಾಡಬಾರದು. ಇದು ಎಲ್ಲಾ ದಿಕ್ಕುಗಳಲ್ಲೂ ಕೆಟ್ಟ ದಿಕ್ಕು ಎಂದು ಪರಿಗಣಿಸಲಾಗಿದೆ. ಇಲ್ಲಿ ಯಮಧರ್ಮರಾಜ ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ಕುಳಿತು ಊಟ ಮಾಡಿದರೆ ಆದಾಯ ಮತ್ತು ಬುದ್ಧಿಶಕ್ತಿ ಹೆಚ್ಚುತ್ತದೆ. ಅದರಲ್ಲೂ ಚೌತಿ ದಿನ ಈ ದಿಕ್ಕಿನಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡು ಊಟ ಮಾಡಿದರೆ, ಅಧ್ಯಯನದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿಯಾಗುತ್ತದೆ.
ವಾಸ್ತು ಪ್ರಕಾರ, ಈ ದಿಕ್ಕಿನಲ್ಲಿ ಕುಳಿತು ತಿನ್ನುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ವ್ಯಾಪಾರ ಮಾಡುವವರಿಗೆ ಈ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದು ಲಾಭದಾಯಕ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಊಟ ಮಾಡುವಾಗ ಯಾವಾಗಲೂ ಪಶ್ಚಿಮಾಭಿಮುಖವಾಗಿ ಕುಳಿತುಕೊಳ್ಳಬೇಕು. ಈ ದಿಕ್ಕಿಗೆ ಕುಳಿತು ಊಟ ಮಾಡುವುದರಿಂದ ಅನೇಕ ಲಾಭಗಳು ದೊರೆಯುತ್ತವೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.