ಸ್ಮಾರ್ಟ್ಫೋನ್ ಹೊಂದಿರುವ ಎಲ್ಲರೂ ನಮ್ಮ ಸ್ಮಾರ್ಟ್ಫೋನ್ ಗ್ಯಾಲರಿಯಲ್ಲಿ ಹಲವು ಫೋಟೋಗಳನ್ನು ಹೊಂದಿರುವುದು ಅವಶ್ಯಕ. ಅವು ಎಂತಹ ಫೋಟೋಗಳು, ಆ ಫೋಟೋಗಳು ಏಕೆ ಬೇಕು ಎಂದು ತಿಳಿಯೋಣ...
Must have these photos in your smartphone gallery: ಇಂದಿನ ಯುಗದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಮಾತ್ರವಲ್ಲ, ಈ ಸ್ಮಾರ್ಟ್ಫೋನ್ಗಳು ನಮ್ಮ ಜೀವನವನ್ನು ಸುಲಭಗೊಳಿಸಿವೆ. ನಮ್ಮ ಕೈಯಲ್ಲಿ ಬೇರೆ ಏನೇ ಇಲ್ಲದಿದ್ದರೂ ಸ್ಮಾರ್ಟ್ಫೋನ್ ಒಂದಿದ್ದರೆ ನಮ್ಮ ಹಲವು ಕೆಲಸಗಳನ್ನು ಕುಳಿತಲ್ಲಿಯೇ ಪೂರ್ಣಗೊಳಿಸಬಹುದು. ಆದರೆ, ಸ್ಮಾರ್ಟ್ಫೋನ್ ಹೊಂದಿರುವ ಎಲ್ಲರೂ ನಮ್ಮ ಸ್ಮಾರ್ಟ್ಫೋನ್ ಗ್ಯಾಲರಿಯಲ್ಲಿ ಹಲವು ಫೋಟೋಗಳನ್ನು ಹೊಂದಿರುವುದು ಅವಶ್ಯಕ. ಅವು ಎಂತಹ ಫೋಟೋಗಳು, ಆ ಫೋಟೋಗಳು ಏಕೆ ಬೇಕು ಎಂದು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಈ ಫೋಟೋಗಳು ಗ್ಯಾಲರಿಯಲ್ಲಿ ಇರಲೇಬೇಕು: ನಾವೆಲ್ಲರೂ ನಮ್ಮ ಗ್ಯಾಲರಿಯಲ್ಲಿ ಹಲವಾರು ವಿಭಿನ್ನ ಚಿತ್ರಗಳನ್ನು ಹೊಂದಿದ್ದರೂ, ಇಂದು ನಾವು ನಮ್ಮ ಫೋನ್ಗಳಲ್ಲಿ ಇರಬೇಕಾದ ಕೆಲವು ಪ್ರಮುಖ ಚಿತ್ರಗಳ ಬಗ್ಗೆ ತಿಳಿಸಲಿದ್ದೇವೆ.
ಆಧಾರ್ ಕಾರ್ಡ್: ನಮ್ಮ ಆಧಾರ್ ಕಾರ್ಡ್ ನಮ್ಮ ಗುರುತು. ಆದರೆ, ಎಲ್ಲಾ ಕಡೆ ನಾವು ಅದನ್ನು ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಫೋನ್ನಲ್ಲಿ ಅದರ ಡಿಜಿಟಲ್ ಕಾಪಿ ಅಥವಾ ಹಾರ್ಡ್ ಕಾಪಿ ಫೋಟೋವನ್ನು ಇಟ್ಟುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.
ಕೋವಿಡ್ 19 ರ ವ್ಯಾಕ್ಸಿನೇಷನ್ ಪ್ರಮಾಣಪತ್ರ: ಕರೋನಾ ಸಾಂಕ್ರಾಮಿಕದ ಬಳಿಕ ಜೀವನಾ ಮೊದಲಿಗಿಂತ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ದಾಖಲೆಗಳೊಂದಿಗೆ ನಮ್ಮ ಫೋನ್ನಲ್ಲಿ ಇರಬೇಕಾದ ಅತ್ಯಂತ ಪ್ರಮುಖವಾದ ಡಾಕ್ಯುಮೆಂಟ್ ಗಳಲ್ಲಿ ನಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರ ಕೂಡ ಒಂದು.
ಪ್ಯಾನ್ ಕಾರ್ಡ್: ನಮ್ಮ ಆಧಾರ್ ಕಾರ್ಡ್ ಎಷ್ಟು ಮುಖ್ಯವೋ, ನಮ್ಮ ಪ್ಯಾನ್ ಕಾರ್ಡ್ ಕೂಡ ಅಷ್ಟೇ ಮುಖ್ಯ. ಪ್ರಮುಖ ಗುರುತಿನ ಪುರಾವೆ, ಪ್ಯಾನ್ ಕಾರ್ಡ್ ನ ನಕಲು ಕೂಡ ನಮ್ಮ ಫೋನ್ ನಲ್ಲಿ ಇರಬೇಕು. ನಿಮ್ಮ ಬಳಿ ಹಾರ್ಡ್ ಕಾಪಿ ಇಲ್ಲದಿದ್ದರೆ, ಅದರ ಚಿತ್ರ ಅಥವಾ ಡಿಜಿಟಲ್ ನಕಲು ನಿಮಗೆ ಹೆಚ್ಚು ಉಪಯುಕ್ತವಾಗಬಹುದು.
ಚಾಲನಾ ಪರವಾನಗೆ: ನೀವು ಚಾಲನೆ ಮಾಡುತ್ತಿದ್ದರೆ, ಮನೆಯಿಂದ ಹೊರಡುವಾಗ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಒಮ್ಮೆ ಪರಿಶೀಲಿಸಿ. ನೀವು ಎಂದಾದರೂ ಡಿಎಲ್ ಅನ್ನು ಒಯ್ಯಲು ಮರೆತರೆ, ಅದರ ಡಿಜಿಟಲ್ ನಕಲನ್ನು ನಿಮ್ಮ ಫೋನ್ನಲ್ಲಿ ಇಟ್ಟುಕೊಳ್ಳುವುದು ಅಗತ್ಯವಾಗಿರುತ್ತದೆ. ಡಿಜಿಲಾಕರ್ ಅಪ್ಲಿಕೇಶನ್ ಮತ್ತು ಎಂ-ಪರಿವಾಹನ್ ಅಪ್ಲಿಕೇಶನ್ ಡಿಜಿಟಲ್ ನಕಲನ್ನು ಉಳಿಸಲು ಕೆಲವು ಪ್ರಮುಖ ಅಪ್ಲಿಕೇಶನ್ಗಳಾಗಿವೆ.